milk dairಗುಬ್ಬಿ ತಾಲೂಕಿನ ಕರಿಶೆಟ್ಟಿಹಟ್ಟಿಯಲ್ಲಿ ಹಾಲಿನ ಉಪ ಕೇಂದ್ರವನ್ನು ತುಮುಲ್​ ನಿರ್ದೇಶಕಿ ಭಾರತಿ ಶ್ರೀನಿವಾಸ್​ ಉದ್ಘಾಟಿಸಿದರು. ತುಮುಲ್​ ಅಧಿಕಾರಿಗಳಾದ ಶಂಕರ್​ನಾಗ್​, ರಾಜು, ಗಂಗಾಧರ್​, ತೀರ್ಥಪ್ರಸಾದ್​, ಚಂದ್ರಶೇಖರ್​, ಬಸವರಾಜ್​ ಮತ್ತಿತರರು ದ್ದರು. 
ರಾಜ್ಯ

ಹಾಲು ಪೂರೈಕೆಯಲ್ಲಿ ಗುಣಮಟ್ಟ ಕಾಪಾಡಿ milk

ತುಮಕೂರು ಡೆಸ್ಕ್
ಗುಬ್ಬಿ: dairy milk ಹಾಲು ಅಮೃತಕ್ಕೆ ಸಮ, ಯಾರು ಹಾಲಿಗೆ ನೀರು ಬೆರಸಬೇಡಿ. ಪ್ರತಿ ಗ್ರಾಮದಲ್ಲೂ ಒಂದು ನಂದಿನಿ ಡೇರಿ ಆರಂಭಿಸಿ ಎಂದು ತುಮುಲ್​ ನಿರ್ದೇಶಕಿ ಭಾರತಿ ಶ್ರೀನಿವಾಸ್​ ತಿಳಿಸಿದರು.
ಗುಬ್ಬಿ ತಾಲೂಕಿನ ಕರಿಶೆಟ್ಟಿಹಟ್ಟಿಯಲ್ಲಿ ನೂತನ ಹಾಲಿನ ಉಪ ಕೇಂದ್ರ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಎಲ್ಲೊ ಯಾರದ್ದೋ ಕೂಲಿ ಕೆಲಸಕ್ಕೆ ಹೋಗುತ್ತೀರಾ? ನೀವೇ ಹಸು ಖರೀದಿಸಿ ಪ್ರತಿನಿತ್ಯ ಹಾಲು ಹಾಕಿ ಆರ್ಥಿಕವಾಗಿ ಸಬಲರಾಗಿ ನಿಮ್ಮ ಕುಟುಂಬವನ್ನು ನೀವೇ ನೋಡಿಕೊಳ್ಳಿ ಎಂದರು.
ಹಾಲು ಅಮೃತ ಇದ್ದಂತೆ ಅದನ್ನು ರೋಗಿಗಳು, ಮಕ್ಕಳು ಕುಡಿಯುತ್ತಾರೆ. ಈಗಿನ ದಿನಗಳಲ್ಲಿ ಮಹಿಳೆಯರು ಬಹಳ ಪ್ರಬಲವಾಗಬೇಕು ಮಹಿಳೆಯರಿಗೆ ಇರುವ ಶಕ್ತಿ ಯಾರಿಗೂ ಇಲ.್ಲ ನಾನು ಈ ವರ್ಷ ನೂರು ಹೊಸ ಡೇರಿ ಸ್ಥಾಪನೆ ಮಾಡಿಯೇ ಮಾಡುತ್ತೇನೆ ಎಂದರು.
ಅಧಿಕಾರಿಗಳಾದ ಶಂಕರ್​ನಾಗ್​, ರಾಜು, ಗಂಗಾಧರ್​, ತೀರ್ಥಪ್ರಸಾದ್​, ಚಂದ್ರಶೇಖರ್​, ಬಸವರಾಜ್​, ಬೋರಯ್ಯ, ಮಲ್ಲಿಕಾರ್ಜುನ, ವೆಂಕಟೇಶ್​, ಗೀತಾನಂದೀಶ್​, ಬಂಗಾರಣ್ಣ, ಶಶಿಧರ್​ ಮತ್ತಿತರರು ಇದ್ದರು