ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಿ order
ಕೆಜಿಎಫ್: ಮಾ.20ರಿಂದ ಪ್ರಾರಂಭವಾಗಲಿರುವ ಚಾಮುಂಡೇಶ್ವರಿ ದೇವಾಲಯದ ಜಾತ್ರ ಮಹೋತ್ಸವದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ನಿಮ್ಮ ರಕ್ಷಣೆ, ಬಂದೋಬಸ್ತ್‌ಗೆ ಪೊಲೀಸ್ ಇಲಾಖೆ ಧಾವಿಸಲಿದೆ ಎಂದು ಬೆಮೆಲ್ ಠಾಣೆ ಎಸ್‌ಐ ರವಿಚಂದ್ರ ಹೇಳಿದರು.order
ನಗರದ ಹೊರವಲಯದ ಪಿಚ್ಚಹಳ್ಳಿ ನಡೆಯುವ ಚಾಮುಂಡೇಶ್ವರಿ ದೇವಾಲಯದ ಜಾತ್ರ ಮಹೋತ್ಸವ ಹಿನ್ನಲೆ ಗ್ರಾಮಸ್ಥರೊಂದಿಗೆ ಶಾಂತಿ ಸಭೆ ನಡೆಸಿ ವಾತನಾಡಿ, ಮೈಸೂರು ಮಹಾರಾಜರ ಸಹಕಾರದಿಂದ ನಿರ್ಮಿಸಿರುವ ಚಾಮುಂಡೇಶ್ವರಿ ದೇವಿಯ ಜಾತ್ರೆಯನ್ನು ಅನಾದಿ ಕಾಲದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಜಾತ್ರೆ ಹಿನ್ನಲೆ ಇಲಾಖೆ ಅನುಮತಿ ನೀಡಿದ್ದು, ಗ್ರಾಮಸ್ಥರು ಅನ್ಯೋನತೆಯಿಂದ ಜಾತ್ರೆಯನ್ನು ಆಚರಿಸಬೇಕು ಎಂದರು.
ಮಕ್ಕಳ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಮನೆಯಲ್ಲಿ ಹೇಳಿಕೊಳ್ಳಲು ಸಾಧ್ಯವಾಗದವರಿಗೆ ಅಕ್ಕ ಪಡೆ ಸ್ಥಾಪಿಸಲಾಗಿದ್ದು, 181 ಸಂಖ್ಯೆಗೆ ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದರು.