Maintain eye health 
ರಾಜ್ಯ

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ

ಚಿಕ್ಕಬಳ್ಳಾಪುರ ಡೆಸ್ಕ್
ಗೌರಿಬಿದನೂರು: ಕಣ್ಣು ಮನುಷ್ಯನ ಪ್ರಮುಖ ಅಂಗ.ದೃಷ್ಟಿ ದೋಷದಿಂದ ಕಣ್ಣು ಕಳೆದುಕೊಂಡರೆ ಅವರ ಬದುಕಿನುದ್ದಕ್ಕೂ ಕತ್ತಲಲ್ಲಿ ಕಳೆಯಬೇಕಾದ ಪರಿಸ್ಥಿತಿ ಬರುತ್ತದೆ.ಆದ್ದರಿಂದ ನಿಯಮಿತವಾಗಿ ಕಣ್ಣನ್ನು ತಪಾಸಣೆ ಮಾಡಿಸಿ, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಲಯನ್ಸ್​ ಕ್ಲಬ್​ ಅಧ್ಯಕ್ಷ ಲಯನ್​ ಆರ್​.ಜೆ.ಶ್ರೇಣಿಕ್​ ತಿಳಿಸಿದರು.
ನಗರದ ಮುನೇಶ್ವರ ಬಡಾವಣೆಯ ಲಯನ್ಸ್​ ಕಣ್ಣಿನ ತಪಾಸಣಾ ಕೇಂದ್ರದಲ್ಲಿ ಲಯನ್ಸ್​ ಕ್ಲಬ್​, ಲಯನ್ಸ್​ ಸೇವಾ ಟ್ರಸ್ಟ್​ನಿಂದ ಹಮ್ಮಿಕೊಂಡಿದ್ದ 229ನೇ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಮಾತನಾಡಿ, ಪ್ರತಿ ತಿಂಗಳು 2ನೇ ಭಾನುವಾರ ನಗರದ ಲಯನ್ಸ್​ ಕಣ್ಣಿನ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗಾಗಿ ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಯುತ್ತದೆ ಎಂದರು.
ಸಂಸ್ಥೆ ಮಾಜಿ ಅಧ್ಯಕ್ಷ ಸಿ.ಎನ್​.ನಂಜೇಗೌಡ ಮಾತನಾಡಿ, ಪ್ರಪಂಚದಲ್ಲಿ ಪ್ರತಿಯೊಬ್ಬರು ನೇತ್ರಾದಾನ ಮಾಡಿದರೆ ಶಾಶ್ವತವಾಗಿ ಅಂಧತ್ವ ನಿಮೂರ್ಲನೆಯಾಗುತ್ತದೆ. ಆದ್ದರಿಂದ ಎಲ್ಲರೂ ಮರಣದ ನಂತರ ನೇತ್ರಾದಾನ ಮಾಡಿ ವಿಶ್ವಕ್ಕೆ ಬೆಳಕಾಗಬೇಕು ಎಂದರು.
ಶಿಬಿರದಲ್ಲಿ ಒಟ್ಟು 93 ಜನ ಕಣ್ಣನ್ನು ತಪಾಸಣೆ ಮಾಡಿಸಿಕೊಂಡರು. ಅವರಲ್ಲಿ 32 ಜನರಲ್ಲಿ ದೃಷ್ಟಿ ದೋಷ ಕಂಡು ಬಂದಿದ್ದು, ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಲಯನ್ಸ್​ ಕಣ್ಣಿನ ಆಸ್ಪತ್ರೆಗೆ ಕಳುಹಿಸಲಾಗಿದೆ.ಕಾರ್ಯದರ್ಶಿ ಶ್ರೀಧರ್​, ಖಜಾಂಚಿ ಜಗನಾಥ್​ ರೆಡ್ಡಿ, ಲಯನ್ಸ್​ ಸಂಸ್ಥೆ ಮಾಜಿ ಅಧ್ಯಕ್ಷ ಇಸ್ತೂರಿ ಸತೀಶ್​ ಕುಮಾರ್​, ಸಿ.ಎನ್​.ನಂಜೇಗೌಡ, ವಿ.ರವೀಂದ್ರನಾಥ್​, ಸೂರಜ್​, ಜಗನ್ನಾಥ್​, ರವಿಶಂಕರ್​ ಇದ್ದರು.