ಬೃಹತ್ ಬಸವಣ್ಣ (ಎಮ್ಮೆ) ದೇವರಿಗೆ ಅಭಿಷೇಕ ಮತ್ತು ವಿಶೇಷ ಅಲಂಕಾರ ಮಾಡಿರುವುದು.
ದಾಬಸ್ಪೇಟೆ : ಮಹಾರುದ್ರಯಾಗ ಮಾಡುವುದರಿಂದ ಶಿವನನ್ನು ಸಮಾಧಾಪಡಿಸಿ ನಕಾರಾತ್ಮಕ ಶಕ್ತಿಗಳನ್ನು ಶುದ್ಧಿಕರಿಸುತ್ತದೆ ಜತೆಗೆ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಮೋಕ್ಷ ಸಿಗುತ್ತದೆ ಎಂದು ಆನಂದ ಗುರೂಜಿ ಹೇಳಿದರು.
ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಸ್ನೇಹಾಧಿಕಾರ ಸೇವಾ ಟ್ರಸ್ಟ್ನಿಂದ (ಬಿಎಸ್ಎಸ್) ಹಮ್ಮಿಕೊಂಡಿದ್ದ ಮಹಾರುದ್ರಯಾಗದಲ್ಲಿ ಮಾತನಾಡಿದರು. ಯಾಗ ಪೂಜೆ ನಡೆಸಿದರೆ ಕರ್ಮ ಬಂಧನದಿಂದ ಮುಕ್ತಿ ಪಡೆದು ಧರ್ಮ ರಕ್ಷಣೆ ಮತ್ತು ಸಮೃದ್ಧಿ ದೊರೆಯುತ್ತದೆ ಎಂದರು.
ಮಹಾಗಣಪತಿ ಪೂಜೆ, ಏಕಾದಶ ರುದ್ರ ಕಳಸ ಸ್ಥಾಪನೆ, ಮಾಹಾನ್ಯಾಸ ಪಾರಾಯಣ, 108 ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ, ಮಹಾರುದ್ರಾಭಿಷೇಕ, ಮಹಾರುದ್ರ ಪಾರಾಯಣ, 108 ಹೋಮಕುಂಡಗಳಲ್ಲಿ ಮಹಾರುದ್ರ ಯಾಗ, ದ್ರವ್ಯಾಹುತಿ, ಮಹಾಪೂರ್ಣಹುತಿ, ಅಗಸ್ವೇಶ್ವರ ಸ್ವಾಮಿಗೆ ವಿಶೇಷ ಪೂಜೆ, ದಿವ್ಯಾಲಂಕಾರ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಶ್ರೀಗುರು ಪಾದುಕೆ ಪೂಜೆ ವಿವಿಧ ಕಾರ್ಯಕ್ರಮ ನಡೆದವು.
ಶ್ರೀ ಗಂಗಾಧರೇಶ್ವರಸ್ವಾಮಿ, ಹೊನ್ನಾದೇವಿ, ಬೃಹತ್ ಗಾತ್ರದ ಬಸವಣ್ಣ ಮತ್ತು ಅಗಸ್ವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಶಿವಗಂಗೆ ಶಾರದಾ ಪೀಠದ ಪುರುಷೋತ್ತಮ ಭಾರತಿ ಸ್ವಾಮೀಜಿ. ಎಸ್.ಎ.ಮಹೇಶ್ ಶರ್ಮ, ಆರ್ಟ್ ಆಫ್ ಲಿವೀಂಗ್ನ ಶಿವಸುಂದರ, ಶ್ರೀರಂಗಪಟ್ಟಣದ ಭಾನುಪ್ರಕಾಶ್, ಅರ್ಚಕರಾದ ಸೋಮಸುಂದರ್ ದೀಕ್ಷಿತ್, ರಾಜು ದೀಕ್ಷಿತ್, ವಿಶ್ವನಾಥ ದೀಕ್ಷಿತ್, ವಿಶ್ವಾಸ್, ಗುಂಡಣ್ಣ ಇತರರಿದ್ದರು.