ಕನಕಗಿರಿ ತಾಲೂಕಿನ ಚಿಕ್ಕ ಡಂಕನಕಲ್ ಗ್ರಾಮದಲ್ಲಿ ಭಗೀರಥ ಮಹರ್ಷಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಪ್ರಮುಖರಾದ ನಿಂಗಪ್ಪ ಕಟ್ಟಿಮನಿ, ಅಮರೇಶಪ್ಪ ಗೌಡ್ರು, ಕೆರೆಯಪ್ಪ ಜಿನ್ನೂರು, ಹುಚ್ಚಪ್ಪ ಸಿಂಗನಾಳ, ನಿಂಗಪ್ಪ ಬೆಣಕಲ್, ವಿರುಪಣ್ಣ ಸಿಂಗನಾಳ, ಯಮನೂರಪ್ಪ ಮೇಸ್ತ್ರಿ, ಕೆರೆಯಪ್ಪ ಬುರುಡಿ ಇತರರಿದ್ದರು. 
ರಾಜ್ಯ

ಮಹರ್ಷಿ ಭಗೀರಥ ಪೂರ್ವಜರ ಪಾಪ ವಿಮೋಚನೆ ಮಾಡಿದ ತಪಸ್ವಿ

ಪ್ರಮುಖ ಮುಖ್ಯಾಂಶಗಳು

  • ಮಹನೀಯರ ಆದರ್ಶಗಳನ್ನು ಪಾಲಿಸಲಿ
  • ಕರ್ನಾಟಕ ಭೂಕಬಳಿಕೆ ನ್ಯಾಯಾಲಯ ಅಧ್ಯಕ್ಷ ಎನ್.ಎಸ್.ಪಾಟೀಲ್ ಸಲಹೆ
ಕನಕಗಿರಿ: ಮಹರ್ಷಿ ಭಗೀರಥ ಅವರು ಸ್ವರ್ಗದಲ್ಲಿದ್ದ ಗಂಗೆಯನ್ನು ಧರೆಗೆ ತಂದು ಪೂರ್ವಜರ ಪಾಪ ವಿಮೋಚನೆ ಮಾಡಿದ ಮಹಾ ತಪಸ್ವಿ ಎಂದು ನಿವೃತ್ತ ನ್ಯಾ. ಹಾಗೂ ಕರ್ನಾಟಕ ಭೂಕಬಳಿಕೆ ನ್ಯಾಯಾಲಯ ಅಧ್ಯಕ್ಷ ಎನ್.ಎಸ್.ಪಾಟೀಲ್ ಹೇಳಿದರು.
ತಾಲೂಕಿನ ಚಿಕ್ಕಡಂಕನಕಲ್ ಗ್ರಾಮದಲ್ಲಿ ಉಪ್ಪಾರ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ಭಗೀರಥ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹನೀಯರನ್ನು ಒಂದೇ ಜಾತಿಗೆ ಸೀಮಿತಗೊಳಿಸದೇ ಪೂಜಿಸಿ, ಆರಾಧಿಸುವ ಜತೆಗೆ ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು. 
ದೇವಸ್ಥಾನದಲ್ಲಿ ಬೆಳಗ್ಗೆ ಭಗೀರಥ ಮಹರ್ಷಿ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ, ಗ್ರಾಮದ ತುಂಗಭದ್ರಾ ಕಾಲುವೆ ದಡದಲ್ಲಿ ಗಂಗಾಪೂಜೆ, ಮಹಿಳೆಯರ ಕುಂಭ ಕಳಸ ಹಾಗೂ ವಿವಿಧ ವಾದ್ಯಮೇಳದೊಂದಿಗೆ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ನಿಂಗಪ್ಪ ಕಟ್ಟಿಮನಿ, ಅಮರೇಶಪ್ಪ ಗೌಡ್ರು, ಕೆರೆಯಪ್ಪ ಜಿನ್ನೂರು, ಹುಚ್ಚಪ್ಪ ಸಿಂಗನಾಳ, ನಿಂಗಪ್ಪ ಬೆಣಕಲ್, ವಿರುಪಣ್ಣ ಸಿಂಗನಾಳ, ಯಮನೂರಪ್ಪ ಮೇಸ್ತ್ರಿ, ಕೆರೆಯಪ್ಪ ಬುರುಡಿ, ಸೋಮನಾಥ ಕಟ್ಟಿಮನಿ, ಹನುಮಂತಪ್ಪ ಆದಾಪೂರ, ತಾಯಪ್ಪ ಕಟ್ಟಿಮನಿ, ಹನಮಂತಪ್ಪ ಕಟ್ಟಿಮನಿ, ಮಂಜುನಾಥ ಸಾಲಗುಂದ, ಲಾಲಸಾಬ್ ಮುಜಾವರ್, ಈಶಪ್ಪ ಕಟ್ಟಿಮನಿ ಇತರರಿದ್ದರು.