ಯಾದಗಿರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಾರಾಣ ಪ್ರತಾಪಸಿಂಹ ಅವರ 486ನೇ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಸನ್ಮಾನಿಸಿದರು. ರಾಜ್ಯ ಮಾಹಿತಿ ಆಯುಕ್ತ ವೆಂಕಟಸಿಂಗ್ ರಾಯಚೂರು, ಅನ್ನಪೂರ್ಣ ಸಿಂಗ್, ಭವಾನಿಸಿಂಗ್ ಠಾಕೂರ್ ಇತರರಿದ್ದರು.
- ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಬಣ್ಣನೆ
- ಯಾದಗಿರಿಯಲ್ಲಿ ಜಯಂತಿ ಸಂಭ್ರಮ
ಯಾದಗಿರಿ: ಮಹಾರಾಣ ಪ್ರತಾಪಸಿಂಹ ದೇಶ ಕಂಡ ಅತ್ಯಂತ ಬಲಿಷ್ಠ ರಾಜನಾಗಿದ್ದ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಬಣ್ಣಿಸಿದರು.ಜಿಲ್ಲಾ ರಜಪೂತ ಸಮಾಜ ಹಾಗೂ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂದ ಸಹಯೋಗದಡಿ ನಗರದ ಸಹ್ಯಾದ್ರಿ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀವಿರ ಶಿರೋಮಣಿ ಮಹಾರಾಣ ಪ್ರತಾಪಸಿಂಹ ಅವರ 486ನೇ ಜಯಂತಿ ಹಾಗೂ 2025&26ರ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅಪ್ಪಟ್ಟ ದೇಶಭಕ್ತರಾಗಿದ್ದ ಮಹಾರಾಣ ಸಮರ ಕಲೆ, ಕುದುರೆ ಸವಾರಿ ಮತ್ತು ಬಿಲ್ಲುಗಾರಿಕೆಯಲ್ಲಿ ಪರಿಣತಿ ಸಾಧಿಸಿದ್ದರು. 1572ರಲ್ಲಿ ತನ್ನ ತಂದೆ ಮರಣದ ನಂತರ ಪ್ರತಾಪಸಿಂಹ ಮೇವಾರ ರಾಜವಂಶದ 13ನೇ ಅರಸರಾದರು. ತಮ್ಮ ಆಡಳಿತಾವಧಿಯಲ್ಲಿ ಅನೇಕ ಯುದ್ಧಗಳನ್ನು ಅತ್ಯಂತ ಧೈರ್ಯದಿಂದ ಎದುರಿಸಿದ್ದರು. ಇನ್ನು ಶೂರ-ಧೀರರನ್ನು ಹೊಂದಿದ ರಜಪೂತ ಸಮಾಜ ತನ್ನ ಕಾಯಕದಡಿಯಲ್ಲೇ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿದೆ ಎಂದರು.
ಗಂಗಾವತಿ ರಜಪೂತ ಸಮಾಜದ ನಾಯಕಿ ಅನ್ನಪೂರ್ಣಸಿಂಗ್ ಮಾತನಾಡಿ, ನಮ್ಮದು ವಿಶ್ವಾಸ, ನಂಬಿಕೆ ಮತ್ತು ಧೈರ್ಯಕ್ಕೆ ಹೆಸರುವಾಸಿಯಾಗಿರುವ ಸಮಾಜ. ಅಪ್ಪಟ್ಟ ದೇಶಭಕ್ತರನ್ನು ಹೊಂದಿರುವ ಸಮಾಜ ಅಖಂಡ ಭಾರತದ ಉಳಿವಿಗೆ ತ್ಯಾಗ ಬಲಿದಾನ ನೀಡಿದೆ. ಈ ಸಮಾಜಕ್ಕೆ ಇಲ್ಲೊಂದು ಭವನ ನಿರ್ಮಿಸಿಕೊಡುವತ್ತ ಶಾಸಕರು ಗಮನಹರಿಸಬೇಕು ಎಂದು ಕೋರಿದರು.
ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠದ ಆಯುಕ್ತ ವೆಂಕಟಸಿಂಗ್ ರಾಯಚೂರು ಮಾತನಾಡಿ, ಎಲ್ಲ ಸಮುದಾಯದ ಜನರೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳುವ ರಜಪೂತ ಸಮಾಜಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ಹೇಳಿದರು.
ಸಮಾಜದ ಜಿಲ್ಲಾಧ್ಯಕ್ಷ ಸಂಜೀವಸಿಂಗ್ ರಾಯಚೂರಕರ್, ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರಡ್ಡಿ ಮುದ್ನಾಳ್, ಕಲಬುರಗಿ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂದ ಅಧ್ಯಕ್ಷ ಶಿವರಾಜ ತಿವಾರಿ, ಜಿಲ್ಲಾ ಉಪಾಧ್ಯಕ್ಷ ಸತ್ಯನಾರಾಯಣ ಪ್ರಸಾದ್ ತಿವಾರಿ, ಹಿರಿಯ ಪತ್ರಕರ್ತ ಭವಾನಿಸಿಂಗ್ ಠಾಕೂರ್, ಪ್ರಮುಖರಾದ ಉದಯಸಿಂಗ್ ರಜಪೂತ, ಸೋಹನ್ ಪ್ರಸಾದ್, ವಿಕ್ರಮಸಿಂಗ್ ಗೌತಮ, ಸಂದೀಪ್ ಹಜಾರೆ, ಆಶಿಶ್ ಹಜಾರೆ, ರಾಹುಲ್ ಹಜಾರೆ, ಗಣೇಶ ಬಾಪಕರ್, ವಿನೋದ ಹಜಾರೆ, ರಾಜಾಸಿಂಗ್, ಅಮರಸಿಂಗ್, ವಿಠ್ಠಲಸಿಂಗ್, ಭೀಮಸಿಂಗ್, ದಶರಥಸಿಂಗ್, ಮುನಿರಾಜಸಿಂಗ್, ಶಶಿಕಾಂತ ದೀಕ್ಷಿತ್, ಅಮರಸಿಂಗ್, ಆನಂದ ಹಜಾರೆ, ಪವನ ರಜಪೂತ, ವಿಶಾಲ್ ಹಜಾರೆ ಇತರರಿದ್ದರು.
ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಸಾಹಿತಿ ಎಸ್.ತಿವಾರಿ, ಆಯುಷ್ ಸಿಂಗ್, ಸ್ನೇಹಾ, ಅಭಯಸಿಂಗ್, ಪೂಜಾ, ಅಂಗದಸಿಂಗ್, ಅಂಕಿತಾ, ವಿನಯಸಿಂಗ್ ಠಾಕೂರ್ ಮತ್ತು ಪಿಯುಸಿಯ ಅಮೂಲ್ಯ ಠಾಕೂರ್, ಪ್ರಿಯಾಂಕಾಸಿಂಗ್ ಆರ್. ಮತ್ತು ಪದವಿ ವಿಭಾಗದ ಶ್ರದ್ಧಾ, ಅಂಕಿತಾ ಮತ್ತು ಅಭಿಲಾಷ್, ಸ್ನಾತಕೋತ್ತರ ಮತ್ತು ವೃತ್ತಿಪರ ಶಿಣದಲ್ಲಿ ಶಹಾಪುರದ ಡಾ.ಶ್ರೇಯಾ, ಡಾ.ಅತಾ, ಶೀತಲ್ ತಿವಾರಿ ಮತ್ತು ಈಶಾ ಠಾಕೂರ್ ಹಾಗೂ ರಾಜ್ಯ ಮಟ್ಟದ ಅತ್ಯುತ್ತಮ ಶಿಕ ಪ್ರಶಸ್ತಿ ಪಡೆದ ಗುರುಮಠಕಲ್ನ ಸುನಿಲಪ್ರಸಾದ್ ಶುಕ್ಲಾ, ಭರತನಾಟ್ಯದಲ್ಲಿ ಶಹಾಪುರದ 6ನೇ ತರಗತಿ ವಿದ್ಯಾರ್ಥಿನಿ ಇಂದ್ರಾಸಿಂಗ್ ಹಜಾರೆ ಮತ್ತು ಕಣ್ಣಿಗೆ ಬಟ್ಟೆ ಕಟ್ಟಿ ಪ್ರದರ್ಶಿಸುವ 4ನೇ ತರಗತಿ ವಿದ್ಯಾರ್ಥಿ ಅನುರೂಪ್ ವಿ.ಠಾಕೂರ್ ಅವರನ್ನು ಸನ್ಮಾನ ಮಾಡಲಾಯಿತು.
"
ವಿದ್ಯೆಯಿಂದಲೇ ಏನೆಲ್ಲ ಸಾಧನೆ ಮಾಡಬಹುದು ಎಂಬುದನ್ನು ಮನಗಂಡು ಶೂರ-ಧೀರರನ್ನು ಹೊಂದಿದ ರಜಪೂತ ಸಮಾಜ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮುಂದೆ ಅವರೇ ಮಹಾನ್ ಸಾಧಕರಾಗಿ ದೇಶ ಕಟ್ಟಲು ಶ್ರಮಿಸುವುದರ ಜತೆ ಹೆತ್ತವರ ಕೀರ್ತಿ ಹೆಚ್ಚಿಸುತ್ತಾರೆ.
— > ಚನ್ನಾರಡ್ಡಿ ಪಾಟೀಲ್ ತುನ್ನೂರ ಶಾಸಕ