ಮಹಾರಾಣಾ ಪ್ರತಾಪ್​ಸಿಂಗ್​ ಜಯಂತಿ ಹಿನ್ನೆಲೆಯಲ್ಲಿ ಸುರಪುರದಲ್ಲಿ ಶನಿವಾರ ಪೂರ್ವಭಾವಿ ಸಭೆ ನಡೆಯಿತು. ಡಾ.ಸಂಜೀವಸಿಂಗ್​ ರಾಯಚೂರಕರ, ಬಾಬುಸಿಂಗ್​, ವಿಠ್ಠಲ್​ ಸಿಂಗ್​, ಮುನಿರಾಜಸಿಂಗ್​, ಭಾರತಸಿಂಗ್​, ಭಗವಾನಸಿಂಗ್​, ಜಿತೇಂದ್ರ ಸಿಂಗ್​ ಠಾಕೂರ್​, ವಿಕ್ರಮಸಿಂಗ್​ ಠಾಕೂರ್​, ಚಂದನಸಿಂಗ್​, ರುವೀರಸಿಂಗ್​ ಠಾಕೂರ್​, ದೀಪಕಸಿಂಗ್​ ಇತರರಿದ್ದರು. 
ರಾಜ್ಯ

ಮಹಾರಾಣಾ ಪ್ರತಾಪ್​ಸಿಂಗ್​ ಜಯಂತಿ ಜೂ.14ರಂದು

ಸುರಪುರ: ಬರುವ ಜೂ.14ರಂದು ಮಹಾರಾಣಾ ಪ್ರತಾಪ್​ಸಿಂಗ್​ ಜಯಂತಿ ಕಾರ್ಯಕ್ರಮದಲ್ಲಿ ಸಮಾಜದ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದರ ಜತೆಗೆ, ರಜಪೂತ ಸಂಸತಿಯನ್ನು ಬಿಂಬಿಸುವ ಸಾಂಸತಿಕ ನೃತ್ಯಗಳು ಹಾಗೂ ದೇಶಭಕ್ತಿ ಗೀತೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲು ರಜಪೂತ ಸಮಾಜದ ಮುಖಂಡರು ತಿರ್ಮಾನಿಸಿದರು.
ಇಲ್ಲಿನ ಕಬಾಡಗೇರಾ ಏರಿಯಾದ ರಜಪೂತ ಗಲ್ಲಿಯಲ್ಲಿ ಜಯಂತಿ ನಿಮಿತ್ತ ಶನಿವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಈ ವೇಳೆ ಅತಿಥಿಗಳಾಗಿ ಮಾತನಾಡಿದ ಡಾ. ಸಂಜೀವಸಿಂಗ್​ ರಾಯಚೂರಕರ, ರಜಪೂತರು ತಮ್ಮ ಸ್ವಾಭಿಮಾನ, ಶೌರ್ಯ ಹಾಗೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್​ ಇತಿಹಾಸ ಹೊಂದಿದ್ದಾರೆ. ಅವರ ಆದರ್ಶ ಇಂದಿನ ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಸಮಾಜದ ಮುಖಂಡರಾದ ಬಾಬುಸಿಂಗ್​, ವಿಠ್ಠಲ್​ ಸಿಂಗ್​, ಮುನಿರಾಜಸಿಂಗ್​, ಭಾರತಸಿಂಗ್​, ಭಗವಾನಸಿಂಗ್​, ಜಿತೇಂದ್ರ ಸಿಂಗ್​ ಠಾಕೂರ್​, ವಿಕ್ರಮಸಿಂಗ್​ ಠಾಕೂರ್​, ಚಂದನಸಿಂಗ್​, ರುವೀರಸಿಂಗ್​ ಠಾಕೂರ್​, ದೀಪಕಸಿಂಗ್​, ಸುನೀಲಸಿಂಗ್​, ಪವನಸಿಂಗ್​, ನಾಗರಾಜ ನಾಯಕ್​, ಗೋಪಾಲಸಿಂಗ್​, ವಿನಾಯಕಸಿಂಗ್​, ನಾಗರಾಜ ಸಿಂಗ್​, ಸತ್ಯನಾರಾಯಣಸಿಂಗ್​, ಸುಭದ್ರಾಬಾಯಿ ಸಿಂಗ್​, ಜ್ಯೋತಿಲ್ಮ ಠಾಕೂರ್​, ಪೂಜಾ ಠಾಕೂರ್​, ಅಮೂಲ್ಯ ಠಾಕೂರ್​, ನಿರ್ಮಲಾಬಾಯಿ, ಹೀರಾಬಾಯಿ, ಆರತಿ ಹಾಗೂ ಸಮಾಜದ ಪದಾಧಿಕಾರಿಗಳು ಸೇರಿದಂತೆಯೇ ಇತರರಿದ್ದರು.