ಮಮದಾಪುರ ಗ್ರಾಮದ ಮೌನ ಮಲ್ಲಿಕಾರ್ಜುನ ಶಿವಯೋಗೀಶ್ವರ ಮಹಾಮಠದಲ್ಲಿ ಹಮ್ಮಿಕೊಂಡಿದ್ದ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾತನಾಡಿದರು. ಗೌರಿಶಂಕರ ಶಿವಾಚಾರ್ಯರು, ಮೌನ ಮಲ್ಲಿಕಾರ್ಜುನ ಶಿವಯೋಗಿಗಳು, ಗೌರಿಶಂಕರ ಶಿವಾಚಾರ್ಯರು ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಮಮದಾಪುರ
ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ತರುವಲ್ಲಿ ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ. ಅಂಥವರು ನಮಗೆ ಸಿಕ್ಕಿದ್ದು ಅಪರೂಪದ ರತ್ನ ಎಂದು ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಮೌನ ಮಲ್ಲಿಕಾರ್ಜುನ ಶಿವಯೋಗೀಶ್ವರ ಮಹಾಮಠದಲ್ಲಿ ಅಧಿಕಮಾಸದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಬಾಲಲೀಲಾ ಮಹಾಂತ ಶಿವಯೋಗಿಗಳ ಜೀವನ ಚರಿತ್ರೆ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳ ತಪಸ್ಸು ನವಾದುದು. ಮಠ&ಮಂದಿರಗಳಲ್ಲಿ ನಡೆಯುವ ಮಹಾತ್ಮರ ಪ್ರವಚನ ಆಲಿಸುವುದು ಹಾಗೂ ಸತ್ಸಂಗದಲ್ಲಿ ಭಾಗಿಯಾಗುವುದರಿಂದ ಮನುಷ್ಯನ ಕಷ್ಟ&ಕಾರ್ಪಣ್ಯ ದೂರಾಗುತ್ತವೆ ಎಂದು ತಿಳಿಸಿದರು.
ಪ್ರವಚನ ಮಂಗಲೋತ್ಸವ ನಿಮಿತ್ತ ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಡೆ ಸಂಸ್ಥಾನಮಠದ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮಿಜಿ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು. ಪ್ರವಚನಕಾರ ವೀರೇಶಶಾಸ್ತ್ರಿ ಚರಂತಿಮಠ, ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಪ್ರವಚನ ಪ್ರಸ್ತುತ ಪಡಿಸಿದರು.
ಜಮಖಂಡಿಯ ಗೌರಿಶಂಕರ ಶಿವಾಚಾರ್ಯರು, ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯರು, ಶಲವಡಿಯ ಗುರುಶಾಂತೇಶ್ವರ ಸ್ವಾಮೀಜಿ, ಮೌನ ಮಲ್ಲಿಕಾರ್ಜುನ ಶಿವಯೋಗಿಗಳು, ಮಂಜುನಾಥ ಶರಣರು, ಕಲಾವಿದರಾದ ಮುತ್ತಣ್ಣ ಹೆಬಸೂರ, ಚಂದ್ರಯ್ಯ ಬನ್ನಿಮಟ್ಟಿ ಇತರರಿದ್ದರು.