Mahadevapura soldier Ramakrishnappa received a grand welcome 
ರಾಜ್ಯ

ಮಹದೇವಪುರ ಸೈನಿಕ .ರಾಮಕೃಷ್ಣಪ್ಪಗೆ ಅದ್ದೂರಿ ಸ್ವಾಗತ

ಬೇತಮಂಗಲ: ಕೆಜಿಫ್​ ತಾಲೂಕು ಕುಗ್ರಾಮ ಎನಿಸಿಕೊಂಡಿರುವ ಮಹದೇವಪುರ ಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿ ಸುಮಾರು 36 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಗ್ರಾಮಕ್ಕೆ ವಾಪಸ್​ ಬಂದ ಸೈನಿಕ ಪಿ.ವಿ.ರಾಮಕೃಷ್ಣಪ್ಪ ಅವರನ್ನು ಮಹದೇವಪುರ ಗ್ರಾಮಸ್ಥರು, ಅಭಿಮಾನಿಗಳು ಹಾಗೂ ಸ್ನೇಹಿತರು ಅದ್ಧೂರಿಯಿಂದ ಸ್ವಾಗತಿಸಿ ಬರಮಾಡಿಕೊಂಡರು.
ಬಡ ಕುಟುಂಬದ ವೆಂಕಟಸ್ವಾಮಿ ರಂಗಮ್ಮ ದಂಪತಿ ದ್ವೀತಿಯ ಪುತ್ರ ರಾಮಕೃಷ್ಣಪ್ಪ ದೇಶಸೇವೆ ಮಾಡಬೇಕೆಂದು ಹಠ ಹಿಡಿದು 1990ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದರು. ದೇಶದ ಮೂಲೆಮೂಲೆಗಳಲ್ಲಿ ಸೇವೆ ಸಲ್ಲಿಸಿ ಮಂಗಳವಾರ ನಿವೃತ್ತಿ ಪಡೆದು ಸ್ವಗ್ರಾಮಕ್ಕೆ ಮರಳಿದರು.

ಯುವಕರನ್ನು ಸೇನೆ ಕಳಿಸುವ ಯತ್ನ

ದೇಶದ ಬಹುತೇಕ ಕಡೆ ಸೇವೆ ಸಲ್ಲಿಸಿ ಅನೇಕ ಅನುಭವ ಪಡೆದಿದ್ದೇನೆ. ಅದರಲ್ಲಿ ಕಹಿ ಟನೆಗಳೂ ಇವೆ. ದೇಶಕ್ಕೆ ಸಲ್ಲಿಸಿರುವ ಸೇನೆಯಲ್ಲಿ ಎಲ್ಲ ಕಹಿ ಟನೆಗಳು ಮರೆಸಿ ಉತ್ಸಾಹದಿಂದ ಸೇವೆ ಸಲ್ಲಿಸುವಂತೆ ಮಾಡುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಭಾಗದ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ದೇಶ ಸೇವೆಗೆ ಕಳಿಸುವ ಪ್ರಯತ್ನ ಮಾಡಲಾಗುವುದು ಎಂದು ನಿವೃತ್ತ ಸೈನಿಕ ರಾಮಕೃಷ್ಣಪ್ಪ ಹೇಳಿದರು.

ಅದ್ದೂರಿ ಸ್ವಾಗತ ನಂತರ ತೆರೆದ ವಾಹನದಲ್ಲಿ ಬೇತಮಂಗಲ ವರೆಗೂ ಮೆರವಣಿಗೆ ನಡೆಸಲಾಯಿತು. ಇಲ್ಲಿನ ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸಾಗಿದ ಮೆರವಣಿಗೆಯಲ್ಲಿ ಹೂವು ಚೆಲ್ಲಿ ಸೈನಿಕನಿಗೆ ಸ್ವಾಗತ ಕೋರಿದರು.
ಗ್ರಾಮದ ಸಮಾಜ ಸೇವಕ ಮೋಹನ್​ ಕೃಷ್ಣ ಮಾತನಾಡಿ, ಗ್ರಾಮದ ಸಾಮಾನ್ಯ ಹುಡುಗ ದೇಶಕ್ಕಾಗಿ ಅಪಾರ ಸೇವೆ ಸಲ್ಲಿಸಿ ವಾಪಸ್​ ಬಂದಿರುವುದು ನಮ್ಮ ಗ್ರಾಮದ ಇತಿಹಾಸಕ್ಕೆ ಸಾ. ಅವರಂತೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇನೆಗೆ ಸೇರುವ ಮೂಲಕ ದೇಶ ಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು.