Mahadeshwaraswamy Jatra festival is over
ಎಂ.ಎನ್ ಕೋಟೆ: ಗುಬ್ಬಿ ತಾಲೂಕಿನ ಎಂ.ಹೊಸಹಳ್ಳಿಯ ಶ್ರೀ ಮಹದೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ ಸೋಮವಾರ ಅದ್ದೂರಿಯಾಗಿ ನೆರವೇರಿತು.
ಜಾತ್ರಾ ಮಹೋತ್ಸವ ಅಂಗವಾಗಿ ದೇವರಿಗೆ ವಿಶೇಷ ಅಕ್ಕಿಪೂಜೆ, ಅಭಿಷೇಕ, ಮಂಗಳಾರತಿ ನೆರವೇರಿಸಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಮಹದೇಶ್ವರಸ್ವಾಮಿಯ ದರ್ಶನ ಪಡೆದರು. ಗ್ರಾಮದ ರಾಜಬೀದಿಗಳಲ್ಲಿ ಮಹದೇಶ್ವರಸ್ವಾಮಿಯ ಉತ್ಸವ ಸಾಗಿತ್ತು. ಮೆರವಣಿಗೆಯಲ್ಲಿ ಲಿಂದಗವೀರರ ಕುಣಿತ, ನಂದಿ ಧ್ವಜಾ, ಚೀಟಿಮೇಳ ಹಾಗೂ ಬಾಣ ಬಿರುಸು ಸಾಥ್ ನೀಡಿದವು. ಭಕ್ತಾದಿಗಳಿಗೆ ಮಹಾದಾಸೋಹ ಏರ್ಪಡಿಸಲಾಗಿತ್ತು.