ಮಾಗಡಿಯಲ್ಲಿ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಕೋಶಾಧ್ಯಕ್ಷ ಎ.ಎಚ್.ಬಸವರಾಜು ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ವೀರಭದ್ರಯ್ಯ, ಎಂ.ಆರ್.ರಾಘವೇಂದ್ರ, ಭಾಸ್ಕರ್, ಕೆಂಚನಹಳ್ಳಿ ಕಿರಣ್, ಮಾರಪ್ಪ, ಶಶಿಧರ್ ಇದ್ದರು. 
ರಾಜ್ಯ

ಮಾಗಡಿಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಿ

ಮಾಗಡಿ ಪುರಸಭೆಯನ್ನು ನಗರಸಭೆಯಾಗಿ ಹಾಗೂ ಕುದೂರನ್ನು ಪಪಂ ಆಗಿ ಮೇಲ್ದರ್ಜೆಗೇರಿಸಬೇಕೆಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಕೋಶಾಧ್ಯಕ್ಷ ಎ.ಎಚ್. ಬಸವರಾಜು ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಬೇರೆಯಾಗಿದ್ದರೂ, ನಮ್ಮದೇ ಜಿಲ್ಲೆಯವರು ಸಚಿವರಾಗಿ ಆಯ್ಕೆಯಾಗಿರುದರಿಂದ ಜಿಲ್ಲೆಯ ಅಭಿವೃದ್ಧಿಗೆ ಪಕ್ಷಪಾತವಿಲ್ಲದೆ ಕೆಲಸ ಮಾಡಲು ಸಿದ್ಧ ಎಂದರು.
ಸಚಿವರು ತಾಲೂಕಿನ ಯುವಕರು ಕೆಲಸಕ್ಕೆ ಅಲೆಯುವುದನ್ನು ತಪ್ಪಿಸಲು ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸಬೇಕು. ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್, ಕೆಶಿಪ್ ರಸ್ತೆ, ಕೆಂಪೇಗೌಡರ ಕೋಟೆ ಮರು ಜೀರ್ಣೋದ್ಧಾರ ಸೇರಿ ಮೂಲಸೌಕರ್ಯ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆದಿದ್ದರು. ಆದರೆ, ಡಿಕೆಶಿ ಸಿಎಂ ಆದ ಮೇಲೆ ಮತ್ತೆ ಸಚಿವ ಸ್ಥಾನ ನೀಡಿ ನಗೆಪಾಟಲಿಗೆ ಸಿಲುಕಿದ್ದಾರೆ. ಇದರ ವಿರುದ್ಧ ಬಿಜೆಪಿಯವರು ರಾಯಚೂರಿನಿಂದ ಬಳ್ಳಾರಿಯವರೆಗೆ ಸೆ.1ರಿಂದ 10ರವರೆಗೆ ಸುಮಾರು 200ಕಿಮೀ ಸುದೀರ್ಘ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.