Pradeep Eshwar slipper attack case
- ಪ್ರದೀಪ್ ಅವರು ಬಹಳ ನೋವು ಮಾಡಿಕೊಂಡರು, ಸಿದ್ದರಾಮಯ್ಯ ಸಮಾಧಾನ ಮಾಡಿದ್ದಾರೆ
- ಏನೇ ಇದ್ರು ಪೊಲಿಟಿಕಲ್ ಡಿಫೇಂಡ್ ಮಾಡಿ ಮಾತನಾಡಿ ಈತರ ಮಾಡೋದು ಬೇಡ
- ಒಬಿಸಿ ಯುವಕ ಹೀಗಾಗಿ ನನಗೆ ಅವಮಾನಿಸುತ್ತಿದ್ದಾರೆ ಎಂದು ಅವರು ನೊಂದುಕೊಂಡಿದ್ದರು
ಚಿಕ್ಕಬಳ್ಳಾಪುರ: ಇಲ್ಲಿ ನಡೆದ ಕೆಂಪೇಗೌಡರ ಕಾರ್ಯಕ್ರಮದಿಂದ ಹೊರಗೆ ಬಂದ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ( Pradeep Eshwar slipper attack case) ಎಸೆಯೋದಕ್ಕೆ ಪ್ರಯತ್ನಿಸಿದ್ದು ಸರಿಯಲ್ಲ. ಅವರು ಬಹಳ ನೊಂದುಕೊಂಡರು.ಅವರ ತಾಯಿ, ಕುಟುಂಬದ ಬಗ್ಗೆ ಮಾತನಾಡೋದು ಸರಿಯಲ್ಲ. ಪೊಲಿಟಿಕಲಿ ವ್ಯಕ್ತಿಯನ್ನು ಡಿಫೆಂಡ್ ಮಾಡ್ಬೇಕು ಆದರೆ, ವೈಯಕ್ತಿಕ ವಿಚಾರ ಎಳೆದಾಡೋದಲ್ಲ ಎಂದು ಪ್ರದೀಪ್ ಈಶ್ವರ್ ಅವರ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಗ್ಗೆ ಮಾಜಿ ಸಚಿವ ಮಧುಬಂಗಾರಪ್ಪನವರು ಮಾತನಾಡಿದ್ದು ಹೀಗೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಕೆಂಪೇಗೌಡ ಜಯಂತಿ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹಾಗೂ ಜೆಡಿಎಸ್ ಕಾರ್ಯಕರ್ತತರ ನಡುವೆ ನಡೆದ ಗಲಾಟೆ ಉಂಟಾಗಿತ್ತು. ಕಾರ್ಯಕ್ರಮದ ಹಾಲ್ಗೆ ಇದು ಮುಕ್ತಾಯಗೊಳ್ಳದೆ, ಪ್ರದೀಪ್ ಈಶ್ವರ್ ಅವರು ಮೆರವಣಿಗೆಗಾಗಿ ಕಾರಿನಿಂದ ಎದ್ದು ನಿಂತು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಕಾರ್ಯಕರ್ತರೊಬ್ಬರು ಚಪ್ಪಲಿ ಎಸೆದು, ಅವಾಚ್ಯ ಶಬ್ಧಗಳಿಂದ ನಿಂಧಿಸಿದ ಘಟನೆ ವರದಿಯಾಗಿತ್ತು. ಆನಂತರ ಪೊಲೀಸರು ತೀವ್ರು ಕಾರ್ಯಾಚರಣೆ ನಡೆಸಿ, ನಾಲ್ವರನ್ನು ಬಂಧಿಸಿದ್ದರು.
ಸಿದ್ದರಾಮಯ್ಯ ಜೊತೆ ಮಾತು, ಅಳಲು
ನನ್ನ ಮೇಲೆ ಚಪ್ಪಲಿ ಎಸೆಯಲು ಪ್ರಯತ್ನಿಸಿದರು. ಕುಟುಂಬವನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದರು ಎಂದು ಪ್ರದೀಪ್ ಈಶ್ವರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರ ಮುಂದೆ ಅಳಲು ತೋಡಿಕೊಂಡಿದ್ದರು. ಈ ವೇಳೆ ಸಿದ್ದರಾಮಯ್ಯ ರಾಜಕೀಯದಲ್ಲಿ ಇದೆಲ್ಲಾ ಮಾಮೂಲು. ಆದರೆ, ಯಾವುದೇ ರೀತಿ ದೃತಿಗೆಡಬಾರದು ಎಂದು ಅವರಿಗೆ ಸಾಂತ್ವನ ಹೇಳಿದ್ದರು.
ಪ್ರದೀಪ್ ಈಶ್ವರ್ ಬಗ್ಗೆ ಹಾಗೂ ಸಚಿವ ಸಂಪುಟ ರಚನೆ ವಿಳಂಬದ ಬಗ್ಗೆ ಮಾಜಿ ಸಚಿವ ಮಧು ಬಂಗಾರಪ್ಪ ಅವರು ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ವೈಯಕ್ತಿಕವಾಗಿ ವ್ಯಕ್ತಿ ಮೇಲೆ ದಾಳಿ ಮಾಡೋದು ಸರಿಯಲ್ಲ ಎಂದು ಹೇಳಿದರು.
ಮಧು ಬಂಗಾರಪ್ಪ ಹೇಳಿದ್ದೇನು?
ಎಚ್ಡಿ ಕುಮಾರಸ್ವಾಮಿ ಅವರ ಆಸ್ತಿ ಬಗ್ಗೆ ಪ್ರದೀಪ್ ಈಶ್ವರ್ ಅವರು ಮಾತನಾಡಿದ್ದನ್ನು ಸಹಿಸದೆ ಜೆಡಿಎಸ್ ಕಾರ್ಯಕರ್ತರು ಅವರ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದರು.
ಪ್ರದೀಪ್ ಈಶ್ವರ ಅವರು ಕೂಡ ಯಂಗ್ ಬ್ಲಡ್ ಮಾತನಾಡ್ತಾರೆ ನಿಜ ಒಪ್ಪಿಕೊಳ್ಳುತ್ತೇನೆ. ಹಾಗಂತ ಅವರ ತಾಯಿ, ಕುಟುಂಬದ ಬಗ್ಗೆ ಮಾತನಾಡೋದು ಸರಿಯಲ್ಲ. ಈ ಹಿಂದೆ ಹಲವರು ನನ್ನ ಹೇರ್ ಸ್ಟೈಲ್ ಬಗ್ಗೆ ಮಾತನಾಡಿದ್ರು. ಶಿವಲಿಂಗೌಡ ಕೂಡ ಹೇಳುತ್ತಿದ್ದರು..ವಿಧಾನಸೌಧದಲ್ಲಿ ನಂಗೂ ಅಳಿಸಿಬಿಟ್ಟಿದ್ದರು ಅದೆಲ್ಲ ಸ್ಪೋಟಿವ್ ಆಗಿ ತೆಗೆದುಕೊಂಡು ಮುನ್ನುಗ್ಗಬೇಕು. ಆದರೆ ಇಲ್ಲಿ ಅವರ ಜಾತಿ ಬಗ್ಗೆ ಮಾತನಾಡಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಮಧುಬಂಗಾರಪ್ಪ ಹೇಳಿದರು.
ಮುಂದುವರೆದು, ನಾನೊಬ್ಬ ಒಬಿಸಿ ಹುಡುಗ ಎಂದು ನನ್ನನ್ನು ಅವಮಾನಿಸಿದ್ದಾರೆ ಎಂದು ಪ್ರದೀಪ್ ಈಶ್ವರ್ ಬೇಸರ ಮಾಡಿಕೊಂಡಿದ್ದಾರೆ. ರಾಜಕೀಯದಲ್ಲಿ ಎಷ್ಟು ಮಂದಿ ಒಬಿಸಿಯವರಿದ್ದಾರೆ ಹೇಳಿ ಪೊಲಿಟಿಕಲಿ ವ್ಯಕ್ತಿಯನ್ನು ಡಿಫೆಂಡ್ ಮಾಡಬೇಕು ಜಾತಿ ವಿಚಾರವಾಗಿ ಅಲ್ಲ ಎಂದು ಹೇಳಿದರು.
ಚಪ್ಪಲಿ ಪೊಲೀಸರಿಗೆ ಬಿದ್ದಿದೆ
ಕಾರ್ಯಕರ್ತರೊಬ್ಬರು ಪ್ರದೀಪ್ ಈಶ್ವರ್ ಅವರಿಗೆ ಎಸೆದ ಚಪ್ಪಲಿಯು ಪೊಲೀಸ್ವೊಬ್ಬರಿಗೆ ಬಿದ್ದಿದೆ. ಯಾರೇ ಆಗಲಿ ಸರ್ಕಾರಿ ಕೆಲಸ ನಿಲ್ಲಿಸುವ ಅಗೌರವದ ಕೆಲಸವನ್ನು ಮಾಡಬಾರದು. ಇಂತಹ ಪ್ರವೃತ್ತಿಗೆ ಬ್ರೇಕು ಬೀಳಬೇಕು ಎಂದು ಮನವಿ ಮಾಡಿದ್ದೇನೆ ಸಿದ್ದರಾಮಯ್ಯ ಅವರಿಗೆ ಇದಕ್ಕೆ ಒಂದು ಸಮಿತಿ ಮಾಡಬೇಕು ಎಂದು ಒತ್ತಾಯಿಸಿದ್ದೇನೆ ಎಂದು ಹೇಳಿದರು.
ಕ್ಯಾಬಿನೆಟ್ ವಿಳಂಬ ವಿಚಾರ
ಕ್ಯಾಬಿನೆಟ್ ವಿಳಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಹುಲ್ ಗಾಂಧಿ, ವೇಣುಗೋಪಾಲ್ ಬರಬೇಕು. ಆದಷ್ಟು ಬೇಗ ಸಂಪುಟ ರಚನೆಯಾದರೆ ತುಂಬಾ ಒಳ್ಳೆಯದು. ಅದು ಬಿಟ್ಟು ನಾನು ಬೇರೆ ಏನು ಹೆಚ್ಚಿಗೆ ಮಾತನಾಡೋದಿಲ್ಲ ಎಂದರು, (ಏಜೆನ್ಸೀಸ್).