ಯಡ್ರಾಮಿಯಲ್ಲಿ ಶಿವಸೇನಾ ಪದ ತಾಲೂಕು ಟಕದ ಪದಾಧಿಕಾರಿಗಳನ್ನು ನೇಮಕ ಮಾಡಿ ಸನ್ಮಾನಿಸಲಾಯಿತು. ಮಲ್ಕಣ್ಣ ಹಿರೇಪೂಜಾರಿ, ಬೀರಪ್ಪ ದೊಡ್ಮನಿ, ಶ್ರೀಧರ ಕುರಳಗೇರ, ರೇವಣಸಿದ್ದಪ್ಪ ಮಕಾಶಿ, ದೇವೇಂದ್ರ ದನ್ನೂರ, ಸುನಿಲ್ ಹಂಗರಗಿ ಇತರರಿದ್ದರು.
- ಯಡ್ರಾಮಿಯ ಪ್ರವಾಸಿ ಮಂದಿರದಲ್ಲಿ ಸಭೆ
- ಪದಾಧಿಕಾರಿಗಳ ನೇಮಕ ಶಿವಸೇನಾಕ್ಕೆ ಭಾಗ್ಯವಂತ ತಾಲೂಕು ಅಧ್ಯಕ್ಷ
ಯಡ್ರಾಮಿ: ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಸೇನಾ (ಏಕನಾಥ ಶಿಂಧೆ ಬಣ) ಪಕ್ಷದ ಸಭೆಯಲ್ಲಿ ತಾಲೂಕು ಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಭಾಗ್ಯವಂತ ಡಿ. ಪವಾರ್ (ತಾಲೂಕು ಅಧ್ಯ), ಮಡಿವಾಳಪ್ಪ ಎಚ್. ತಳವಾರ (ಗೌರವ ಅಧ್ಯ), ಮುತ್ತಪ್ಪ ಪೂಜಾರಿ, ದೇವೇಂದ್ರ ಸೋಮನಹಳ್ಳಿ (ಉಪಾಧ್ಯರು), ಗುರುಲಿಂಗಪ್ಪಗೌಡ ಮಲಗಣ ಸುಂಬಡ (ಪ್ರಧಾನ ಕಾರ್ಯದರ್ಶಿ), ಈರಪ್ಪ ದೊರೆ (ಎಸ್ಟಿ ಮೋರ್ಚಾ ಅಧ್ಯ), ಅಮರ ಬಿ. ಕುಸ್ತಿ (ಎಸ್ಸಿ ಮೋರ್ಚಾ ಅಧ್ಯ), ದೇವೇಂದ್ರಪ್ಪ ಸಾವಳಗಿ (ಸಂಟನಾ ಕಾರ್ಯದರ್ಶಿ), ಗಣೇಶ ದೇವರಮನಿ (ನಗರ ಟಕ ಅಧ್ಯ), ವೀರೇಶ ನಾಯಕ (ಇಜೇರಿ ಗ್ರಾಮ ಟಕ ಅಧ್ಯ) ಅವರನ್ನು ನೇಮಕ ಮಾಡಲಾಯಿತು.
ಜೇವರ್ಗಿ ತಾಲೂಕು ಅಧ್ಯ ಮಲ್ಕಣ್ಣ ಹಿರೇಪೂಜಾರಿ ಮಾತನಾಡಿ, ಪದಾಧಿಕಾರಿಗಳು ಯಾರೊಂದಿಗೂ ರಾಜಿಯಾಗದೆ, ಯಾವುದೇ ಆಮಿಷಕ್ಕೆ ಒಳಗಾಗದೆ ಪ ಸಂಟಿಸಬೇಕು. ಮುಂಬರುವ ಗ್ರಾಮ, ಪಟ್ಟಣ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ರಾಜ್ಯ ಹಾಗೂ ಕ್ಷೇತ್ರದಲ್ಲಿ ಪ ಅಧಿಕಾರಕ್ಕೆ ತರಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ಬೀರಪ್ಪ ದೊಡ್ಮನಿ, ಶ್ರೀಧರ ಕುರಳಗೇರ, ರೇವಣಸಿದ್ದಪ್ಪ ಮಕಾಶಿ, ದೇವೇಂದ್ರ ದನ್ನೂರ, ಸುನಿಲ್ ಹಂಗರಗಿ, ಬಸವರಾಜ ಚಿಗರಿ, ಮಲ್ಲು ಹಡಪದ, ಗಿರೀಶ ಪವಾರ್, ಚಂದ್ರು, ರವಿಚಂದ್ರ ಶಿವಪುರ, ಗಂಗರಾಜ ಕುಸ್ತಿ, ನಾಗರಾಜ ದಂಡಗುಲ್ಕರ್, ನಾಗರಾಜ ಪಾವಡೆ ಇತರರಿದ್ದರು.