ಇಬ್ಬರ ಸಾವಿಗೆ ಕಾರಣವಾದ ಪ್ರೇಮ ವಿವಾಹ
- ಇಬ್ಬರ ಸಾವಿಗೆ ಕಾರಣವಾದ ಪ್ರೇಮ ವಿವಾಹ
- ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರದಲ್ಲಿ ಘಟನೆ
- ಇಬ್ಬರನ್ನು ಪ್ರೀತಿಸುತ್ತಿದ್ದ ಯುವಕ
ಇಬ್ಬರ ಸಾವಿಗೆ ಕಾರಣವಾದ ಪ್ರೇಮ ವಿವಾಹ!
ಚಿಕ್ಕೋಡಿ: ಪರಸ್ಪರ ಒಪ್ಪಿಗೆಯಿಂದ ಯುವಕ-ಯುವತಿ ಮಾಡಿಕೊಂಡ ಪ್ರೇಮವಿವಾಹ ಇಬ್ಬರ ಸಾವಿಗೆ
ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಠಾಣೆ ವ್ಯಾಪ್ತಿಯ ಕಮತನೂರಿನ ಪ್ರೇಮಿಗಳಿಬ್ಬರೂ ಕುಟುಂಬಸ್ಥರಿಗೆ ತಿಳಿಯದಂತೆ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ಮಾಡಿಕೊಂಡಿದ್ದಾರೆ. ತಂಗಿ ಮನೆತನದ ಕಳೆದಿದ್ದಾಳೆಂದು ಬೇಸರಗೊಂಡು ವಧುವಿನ ಅಣ್ಣ ಪ್ರಶಾಂತ ನಿಕ್ಕಂ(೨೫)ಬುಧವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದುವೆಯಾದ ಯುವಕನನ್ನು ಪ್ರೀತಿಸುತ್ತಿದ್ದ ಮತ್ತೋರ್ವ ಯುವತಿ ಕಮತನೂರ ಗ್ರಾಮದ ರಕ್ಷಿತಾ ಕಾಂಬಳೆ (20), ತನಗೆ ಮೋಸವಾಗಿದೆ ಎಂಬ ನೋವಿನಿಂದ ಅದೇ ದಿನ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸುರೇಶ ಪಾಟೀಲ ಎಂಬಾತ ಇಬ್ಬರು ಯುವತಿಯರನ್ನು ಪ್ರೀತಿಸುತ್ತಿದ್ದ. ಅವರ ಹೊರಗೆ ಒಬ್ಬಳನ್ನು ಮದುವೆ ಮಾಡಿಕೊಂಡಿದ್ದ.