Hubballi Love Jihad Case 
ರಾಜ್ಯ

ಹುಬ್ಬಳ್ಳಿಯಲ್ಲಿ ಲವ್​ ಜಿಹಾದ್​ ಆರೋಪ; ಜಿಮ್​ ಟ್ರೇನರ್ ಬಗ್ಗೆ​ ಸ್ಫೋಟಕ ಹೇಳಿಕೆ ಕೊಟ್ಟ ಯುವತಿ​..Love Jihad Case

ಹುಬ್ಬಳ್ಳಿ: 23 ವರ್ಷದ ಜಿಮ್​ ಟ್ರೇನರ್ ​ ಮೇಲೆ ಯುವತಿಯೊಬ್ಬಳು ಲವ್​ ಜಿಹಾದ್​(hubballi Love Jihad Case) ಆರೋಪವನ್ನು ಹೊರಿಸಿದ್ದು, ಸದ್ಯ ಈ ಪ್ರಕರಣ ಎರಡು ಸಮುದಾಯದ ಮಧ್ಯೆಯ ತಿಕ್ಕಾಟಕ್ಕೆ ಕಾರಣವಾಗಿದೆ. ಒಂದು ಕಡೆ ಹಿಂದೂ ಪರ ಸಂಘಟನೆಗಳು ಯುವಕನ ಮನೆಗೆ ನುಗ್ಗಿ ಗಲಾಟೆ ಮಾಡಿ, ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೊಂದು ಕಡೆ, ಎರಡು ಕುಟುಂಬದ ಮಧ್ಯೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ. ಸದ್ಯ ಈ ಪ್ರಕರಣದಿಂದ ಹುಬ್ಬಳ್ಳಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಹುಬ್ಬಳ್ಳಿ ನಗರದ ವಿಜಯನಗರ ನಿವಾಸಿ ಮತ್ತು ಜಿಮ್​ ಟ್ರೇನರ್ ಸಮೀರ್​​ ಮುಲ್ಲಾ ಹಾಗೂ ಹಿಂದೂ ಸಮುದಾಯದ ಯುವತಿ ಖುಷಿ ಒಬ್ಬರಿಗೊಬ್ಬರು ಪರಿಚಯಸ್ಥರ ಎನ್ನಲಾಗಿದೆ. ಸದ್ಯ ಆಕೆ ರಿಲೀಸ್​ ಮಾಡಿರುವ ವಿಡಿಯೋವೊಂದು ಇನ್​ಸ್ಟಾಗ್ರಾಂನಲ್ಲಿ ವೈರಲ್​ ಆಗಿದೆ.

ಯುವತಿ ಹೇಳಿದ್ದೇನು?

"ಮೊದಲಿಗೆ ಸಮೀರ್ ಅಕ್ಕಾ ತೈಸಿಮ್ ಮುಲ್ಲಾಗೆ ಪರಿಚಯ ಆಗಿದ್ದ ಹಿಂದೂ ಹುಡುಗಿ ಖುಷಿ ಏರೋಬಿಕ್ ಕಲಿಯಲು ಹೋಗಿದ್ದಳು. ನಂತರ ಸಮೀರ್‌ ಮುಲ್ಲಾ ಜಿಮ್‌ಲ್ಲಿ ಪರಿಚಯ ಆದ. ನಾವು ಸ್ನೇಹಿತರಾದೆವು. ಒಂದು ದಿನ ಜಿಮ್‌ಗೆ ಹೋಗಲು ಫಿಕ್‌ ಅಪ್ ಮಾಡಲು ಅವರ ಮನೆಗೆ ಹೋದಾಗ ನೀರು ಕೊಟ್ಟ. ಅದನ್ನು ಕುಡಿದ ಬಳಿಕ ನನಗೆ ಪ್ರಜ್ಞೆ ತಪ್ಪಿತ್ತು. ರೂಮ್‌ಗೆ ಕರೆದುಕೊಂಡು ಹೋಗಿ ಬಲತ್ಕಾರ ಮಾಡಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ನೀನು ನನ್ನ ಜೊತೆ ಇರಬೇಕು ಎಂದು ಬೆದರಿಕೆ ಹಾಕಿದ್ದಾನೆಂದು" ಅನ್ಯಾಯಕ್ಕೆ ಒಳಗಾದ ಖುಷಿ ವಿಡಿಯೋ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.

ಸಮೀರ್ ಸಹೋದರಿ ತೈಸಿಮ್ ಮುಲ್ಲಾ ಪ್ರತಿಕ್ರಿಯೆ

"23 ವರ್ಷದ ಸಮೀರ್ ನನ್ನ ತಮ್ಮ. ಮಾರಣಾಂತಿಕ ಹಲ್ಲೆ ಮಾಡಿ ಬೆಳಗ್ಗೆ 7 ಗಂಟೆಗೆ ಅಪಹರಿಸಿದ್ದಾರೆ. ಆತನೊಂದಿಗೆ ಮಾತನಾಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ, ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಖುಷಿ ಮತ್ತು ಸಮೀರ್​ ಇಬ್ಬರು ಮೂರು ವರ್ಷದಿಂದ ರಿಲೇಶನ್ ಶಿಪ್​ನಲ್ಲಿದ್ದರು. ಯುವತಿಯ ಕುಟುಂಬಸ್ಥರು ನಮ್ಮೊಂದಿಗೆ ಅನ್ಯೋನ್ಯವಾಗಿದ್ದರು. ನಾವೆಲ್ಲ ಸೇರಿ ಪ್ರವಾಸಕ್ಕೆ ಹೋಗಿದ್ದೆವು. ಶಾಪಿಂಗ್​ ಸಹ ಮಾಡುತ್ತಿದ್ದೆವು. ನನ್ನ ತಮ್ಮ ಕಾಣೆಯಾದ ಬಳಿಕ, ಯುವತಿ ಮನೆ ಬಳಿ ಹೋದೆವು. ಈ ಘಟನೆಯಿಂದ ನಮ್ಮ ತಾಯಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ" ಎಂದು ಅತ್ತರು.

ಪೊಲೀಸರು ಹೇಳಿದ್ದೇನು?

ಹುಬ್ಬಳ್ಳಿ ಕಿಮ್ಸ್​ಗೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು ಭೇಟಿ ಮಾಡಿ ಯುವಕ ಮತ್ತು ಯುವತಿಯ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ. ಆನಂತರ ಮಾತನಾಡಿದ ಅವರು, "ಯುವತಿ ಮನೆಯವರು ಯುವಕನ ಮನೆಗೆ ಹೋಗಿದ್ದಾರೆ. ತಮ್ಮ ಮನೆ ಯುವತಿ ಜೊತೆ ಒಡಾಡ್ತಿದ್ದಿಯಾ ಅಂತ ಗಲಾಟೆ ಮಾಡಿದ್ದಾರೆ. ಮತ್ತೊಂದಡೆ ಯುವಕನ ಮನೆಯವರು ಯುವತಿ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ಎರಡು ಕಡೆಯವರು ಕಿಮ್ಸ್ ಗೆ ದಾಖಲಾಗಿದ್ದಾರೆ. ಇಬ್ಬರ ಕುಟುಂಬಸ್ಥರು ಸದ್ಯ ದೂರು ದಾಖಲೆ ಮಾಡಿಲ್ಲ. ಇಬ್ಬರದ್ದೂ ತಪ್ಪಿದೆ. ಏನೇ ಇದ್ದರೂ ಪೊಲೀಸರಿಗೆ ದೂರು ನೀಡಬೇಕು. ಯುವಕನನ್ನು ಕರೆದುಕೊಂಡು ಬಂದು ಪೊಲೀಸರಿಗೆ ಒಪ್ಪಿಸಿದ್ದಾರೆ" ಎಂದರು.

ಹಿಂದೂ ಸಂಘಟನೆ ಮಧ್ಯ ಪ್ರವೇಶ

ಜಿಮ್ ಗಳು ಲವ್ ಜಿಹಾದ್ ಕೇಂದ್ರಗಳಾಗ್ತಿವೆ ಎಂದು ಯುವಕನ ಮನೆಗೆ ಹಿಂದುಪರ ಸಂಘಟನೆಗಳು ಹೋಗಿ ಯುವಕನನ್ನು ಹಿಡಿದು ತಂದು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರಿಗೊಪ್ಪಿಸಿದ್ದಾರೆ. ಇದರಿಂದ ಸಿಟ್ಟಾದ ಯುವಕನ ಮನೆಯ ಕುಟುಂಬಸ್ಥರು ಹುಬ್ಬಳ್ಳಿ ನಗರದ ವಿಕಾಸ ನಗರದಲ್ಲಿರೋ ಯುವತಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್​)