ಜೆಸಿಬಿ, ಟ್ರ್ಯಾಕ್ಟರ್, ಟಿಪ್ಪರ್ ಮಾಲೀಕರಿಗೆ ನಷ್ಟ owners
- ಹೊರ ಭಾಗದಿಂದ ವಾಹನ ತಂದು ಕೆಲಸಕ್ಕೆ ಸ್ಥಳಿಯ ಮಾಲೀಕರ ಆಕ್ಷೇಪ
- ಚಿಕ್ಕತಿರುಪತಿ ಸಂತೆ ಬೀದಿಯಲ್ಲಿ ಬೃಹತ್ ರ್ಯಾಲಿ
ಲಕ್ಕೂರು: ಹೋಬಳಿಯಲ್ಲಿ 120 ಜೆಸಿಬಿ, 200 ಟ್ರಾ$್ಯಕ್ಟರ್, 40 ಟಿಪ್ಪರ್ ಹಾಗೂ ಹಿಟಾಚಿಗಳಿದ್ದರೂ ಬೇರೆ ಭಾಗದಿಂದ ಜೆಸಿಬಿಗಳನ್ನು ಕರೆಸಿ ಕೆಲಸ ಮಾಡಿಸುತ್ತಿದ್ದು, ಸ್ಥಳಿಯ ಮಾಲೀಕರಿಗೆ ಅನ್ಯಾಯವಾಗುತ್ತಿದೆ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಪರ್ಮಿಟ್ ಪರಿಶೀಲಿಸಿ ಸ್ಥಳಿಯರಿಗೆ ನ್ಯಾಯ ಒದಗಿಸಬೇಕು ಎಂದು ಶ್ರೀ ವೆಂಕಟೇಶ್ವರ ಜೆಸಿಬಿ, ಟಿಪ್ಪರ್ ಹಾಗೂ ಟ್ಯಾಕ್ಟರ್ ಮಾಲೀಕರ ಸಂ ಒತ್ತಾಯಿಸಿದೆ.owners
ಚಿಕ್ಕತಿರುಪತಿ ಗ್ರಾಮದ ಸಂತೆ ಬೀದಿಯಲ್ಲಿ ಎಲ್ಲ ವಾಹನಗಳನ್ನು ಕರೆಸಿ ಮಂಗಳವಾರ ಬೃಹತ್ ರ್ಯಾಲಿ ನಡೆಸಲಾಯಿತು.
ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯ ವಿ.ನಾಗೇಶ್ ಮಾತನಾಡಿ, ಜಿಲ್ಲಾಡಳಿತ ಎಲ್ಲ ಜೆಸಿಬಿ, ಟಿಪ್ಪರ್ ಹಾಗೂ ಟ್ರಾ$್ಯಕ್ಟರ್ಗಳ ಕೆಲಸದ ಸಮಯ ಮತ್ತು ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಹೋಬಳಿಯಲ್ಲಿ ಕೈಗಾರಿಕೆಗಳು ಮತ್ತು ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಬೇರೆ ಭಾಗದಿಂದ ಇಲ್ಲಿಗೆ ಬಂದು ಜೆಸಿಬಿ, ಟಿಪ್ಪರ್ ಬಂದು ಕೆಲಸ ಮಾಡುತ್ತಿವೆ. ಆದರೆ, ಇಲ್ಲಿನವರೇ ಜೆಸಿಬಿ ಹೊಂದಿರುವವರು ಕೆಲಸ ಸಿಗುತ್ತಿಲ್ಲ ಎಂದು ಬೇಸರಿಸಿದರು.
ಸಂದಿಂದ ನಿಗದಿಪಡಿಸಿದ ದರಕ್ಕೆ ಗ್ರಾಹಕರು ಸಹಕರಿಸಿ ಅನುಕೂಲ ಪಡೆದುಕೊಳ್ಳಬೇಕು. ಗ್ರಾಹಕರಿಗೂ ಹೊರೆಯಾಗದಂತೆ ಮಾಲೀಕರು ದರ ನಿಗದಿಪಡಿಸಿ ಕೆಲಸ ಮಾಡಬೇಕು ಎಂದು ಪಿಡಿಒ ಹರೀಂದ್ರ ಗೋಪಾಲ್ ತಿಳಿಸಿದರು.
ಸಂದ ಅಧ್ಯ ಸೊಣ್ಣೂರು ಮಂಜುನಾಥ್ ಮಾತನಾಡಿ, ಪ್ರಸ್ತುತ ವಾಹನಗಳ ಬಿಡಿಭಾಗಗಳು ಏರಿಕೆಯಾಗಿವೆ. ಇಂಧನದ ಬೆಲೆಯು ಸಹ ಹೆಚ್ಚಾಗಿದ್ದು, ಚಾಲಕರಿಗೆ ಹಾಗೂ ಜೆಸಿಬಿ ನಿಯಂತ್ರಕರಿಗೆ ವೇತನ ನೀಡಿ ವಾಹನ ನಿರ್ವಹಣೆ ಮಾಡಲು ಸಾಧವಿಲ್ಲದಂತಾಗಿದೆ. ಸಂದಲ್ಲಿ ಎಲ್ಲರೂ ಕೂಡಿ ಜೆಸಿಬಿ 1ಗಂಟೆ ಕೆಲಸಕ್ಕೆ <1,200, ಡಿಸೆಲ್ ರಹಿತ 1 ತಿಂಗಳ ಬಾಡಿಗೆ 1.10 ಲ, ಟಿಪ್ಪರ್ಗೆ 1 ದಿನದ ಬಾಡಿಗೆ 7 ಸಾವಿರ, ತಿಂಗಳ ಬಾಡಿಗೆ 1.17 ಲ, ಟ್ರಾ$್ಯಕ್ಟರ್ ಡಿಸೆಲ್ ರಹಿತ ದಿನದ ಬಾಡಿಗೆ 4 ಸಾವಿರ ನಿಗದಿಪಡಿಸಲಾಗಿದ್ದು, ಸಹಕರಿಸುವಂತೆ ಮನವಿ ಮಾಡಿದರು.