Lorry damaged in accident
ಚಿಂತಾಮಣಿ: ನಗರದ ಹೊರವಲಯದ ಬೆಂಗಳೂರು&-ಕಡಪ ರಸ್ತೆಯ ಮುನಗನಹಳ್ಳಿಯ ಗೇಟ್ ಬಳಿ ಎರಡು ಸರಕು ಸಾಗಣೆ ಲಾರಿಗಳ ಮಧ್ಯೆ ಅಪಘಾತ ಸಂಭವಿಸಿದೆ.
ಖಾಸಗಿ ಸಂಸ್ಥೆಯ ಲಾರಿಗೆ ಮದನಪಲ್ಲಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಮತ್ತೊಂದು ಲಾರಿ ಮುನಗನಹಳ್ಳಿ ಗೇಟ್ ಬಳಿ ಡಿಕ್ಕಿಯಾಗಿದೆ. ಇದರಿಂದ ಲಾರಿ ಜಖಂಗೊಂಡಿದೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.