ಯಾದಗಿರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್ ಉದ್ಘಾಟಿಸಿದರು. ಯಾದವ ಸಮಾಜದ ಜಿಲ್ಲಾಧ್ಯಕ್ಷ ತಾಯಪ್ಪ ಯಾದವ್, ಎಸಿ ಶ್ರೀಧರ ಗೋಟೂರ, ಉತ್ತರಾದೇವಿ ಮಠಪತಿ ಇತರರಿದ್ದರು.
- ಜಿಲ್ಲಾಧ್ಯಕ್ಷ ತಾಯಪ್ಪ ಯಾದವ್ ಬಣ್ಣನೆ
- ಯಾದಗಿರಿ ಸೇರಿ ವಿವಿಧೆಡೆ ಜಯಂತಿ ಆಚರಣೆ
ಯಾದಗಿರಿ: ಶ್ರೀಕೃಷ್ಣ ಎಂದರೆ ಕೇವಲ ಒಬ್ಬ ದೇವ ರಕ್ಷಕನಷ್ಟೇ ಅಲ್ಲ, ಆತ ಒಬ್ಬ ಉತ್ತಮ ಮಾರ್ಗದರ್ಶಕ, ಸ್ನೇಹಿತ, ಶಿಕ್ಷಕ ಹಾಗೂ ಜಗದ್ಗುರು ಎಂದು ಜಿಲ್ಲಾ ಯಾದವ್ ಸಮಾಜದ ಅಧ್ಯಕ್ಷ ತಾಯಪ್ಪ ಯಾದವ್ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಶ್ರೀಕೃಷ್ಣ ಜಯಂತ್ಯುತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳಿಂದ ಹಮ್ಮಿಕೊಂಡ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇವರ ಬೋಧನೆಗಳನ್ನು ಕೇವಲ ಪುಸ್ತಕದಲ್ಲಿ ಓದದೆ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ಹಬ್ಬದ ಆಚರಣೆ ಸಾರ್ಥಕವಾಗುತ್ತದೆ. ನಾವೆಲ್ಲರೂ ಸತ್ಯ, ಪ್ರೀತಿ ಮತ್ತು ಧರ್ಮದ ಹಾದಿಯಲ್ಲಿ ನಡೆಯೋಣ ಎಂದರು. ವಿಶೇಷ ಉಪನ್ಯಾಸ ನೀಡಿದ ಗುರು ಪ್ರಸಾದ ವೈದ್ಯ, ದ್ವಾಪರ ಯುಗದಲ್ಲಿ ಭೂಮಿಯ ಮೇಲೆ ಅಧರ್ಮ, ಪಾಪ ಮತ್ತು ಕ್ರೌರ್ಯ ಮಿತಿಮೀರಿದಾಗ, ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಲು ಭಗವಾನ್ ವಿಷ್ಣುವು ಕೃಷ್ಣನಾಗಿ ಅವತರಿಸಿದ ಎಂದರು.
ಗುರುಪ್ರಸಾದ ಮಾತನಾಡಿದರು. ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ ಅವರು ಶ್ರೀ ಕೃಷ್ಣ ಭಾವಚಿತ್ರಕ್ಕೆ ಪೂಜೆ ಮಾತನಾಡಿ ಸಮಾಜದ ಭವನಕ್ಕೆ ನಿವೇಶನ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವು ಎಂದು ಹೇಳಿದರು. ಸಹಾಯಕ ಆಯುಕ್ತ ಶ್ರೀಧರ ಗುಟ್ಟೂರ್, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಇತರರಿದ್ದರು.