- ಸಿಬ್ಬಂದಿ ಖಾತೆಗೆ ಡಿಜಿಟಲ್ ಹಣದ ವಹಿವಾಟು
- ಬಿಲ್ಲು ವಿಲೇವಾರಿ ವ್ಯವಸ್ಥೆಯಲ್ಲಿನ ಲೋಪ
- ಭದ್ರತಾ ನಿಯಮಗಳ ಉಲ್ಲಂಘನೆ
ಸರ್ಕಾರದ ಬಿಲ್ಲುಗಳ ವಿಲೇವಾರಿ, ಸಿಬ್ಬಂದಿ ನಿಯೋಜನೆ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ಅಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಖಜಾನೆ ಇಲಾಖೆ ಕಚೇರಿಗಳ ಮೇಲೆ ಲೋಕಾಯುಕ್ತರು ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿದ ವೇಳೆ ಲಕ್ಷ ಲಕ್ಷ ರೂ. ಪತ್ತೆಯಾಗಿದೆ.
ಅಧಿಕಾರಿಗಳ ಕಚೇರಿ ಹಾಗೂ ವಯಕ್ತಿಕ ಬ್ಯಾಂಕ್ ಖಾತೆಗಳಲ್ಲಿ ಲಕ್ಷಾಂತರ ರೂ. ವ್ಯವಹಾರ ನಡೆದಿರುವುದನ್ನು ಲೋಕಾ ತಂಡ ಪತ್ತೆ ಮಾಡಿದೆ. ಬೆಂಗಳೂರು ನಗರ ಜಿಲ್ಲೆಯ 7 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 5 ಖಜಾನೆಗಳು ಸೇರಿ ರಾಜ್ಯ ಹುಜೂರ್ ಖಜಾನೆ ಮತ್ತು ಕೆಜಿಐಡಿ ಇಲಾಖೆಯ ಒಟ್ಟು 13 ತಂಡಗಳಿಂದ ಏಕಕಾಲದಲ್ಲಿ ತಪಾಸಣೆ ನಡೆಸಲಾಯಿತು. ನ್ಯಾಯಾಂಗ, ಪೊಲೀಸ್ ಅಧಿಕಾರಿಗಳು ಹಾಗೂ ಲೋಕಾಯುಕ್ತ ಕಚೇರಿ ಸಿಬ್ಬಂದಿಯನ್ನು ಒಳಗೊಂಡ ತಂಡಗಳು ಸಂಜೆ ಆರಂಭಿಸಿದ ಕಾರ್ಯಾಚರಣೆ ತಡರಾತ್ರಿಯವರೆಗೂ ಮುಂದುವರಿಸಿದರು.
ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಹುಜೂರ್ ಖಜಾನೆಗೆ ಲೋಕಾಯುಕ್ತ, ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮುನಿರೆಡ್ಡಿ ಅವರ ಕಚೇರಿಯಲ್ಲಿನ ಕಡತ ಪರಿಶೀಲನೆ ನಡೆಸಿದರು. ಇದೇ ವೇಳೆ ಸಹಾಯಕ ನಿರ್ದೇಶಕ ಶಿವರಾಮ್, ಪ್ರಥಮ ದರ್ಜೆ ಸಹಾಯಕರುಗಳಾದ ಕೃಷ್ಣ ಹಾಗೂ ಆದಿತ್ಯ ಅವರ ಫೋನ್‌ಪೇ ಖಾತೆ ಪರಿಶೀಲಿಸಿದಾಗ ಲಕ್ಷಾಂತರ ರೂಪಾಯಿ ಹಣದ ವಹಿವಾಟು ನಡೆದಿರುವುದು ಪತ್ತೆಯಾಗಿದೆ.
ಎ್ಡಿಎ ಕೃಷ್ಣ ಅವರ ಫೋನ್‌ಪೇನಲ್ಲಿ ಕಚೇರಿ ಚಾಲಕನಿಂದ 3 ಸಾವಿರ ರೂ. ಸ್ವೀಕರಿಸಿರುವುದು ಪತ್ತೆಯಾಗಿದೆ. ಈ ಹಣದ ಸ್ವರೂಪ ಹಾಗೂ ಕಾರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕಿದೆ ಎಂದು ಬಿ.ಎಸ್.ಪಾಟೀಲ್ ಅವರು ಹೇಳಿದರು. ದೇವನಹಳ್ಳಿ ಖಜಾನೆ ಕಚೇರಿಯಲ್ಲಿ 1.34 ಲಕ್ಷ ರೂ. ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಕಚೇರಿ
ಡ್ರಾಯರ್‌ನಲ್ಲಿ ಲಕ್ಷಾಂತರ ರೂ.ಪತ್ತೆ:
ಉಪ ನಿರ್ದೇಶಕಿ ಪ್ರಭಾವತಿ ಎಂಬುವರ ಕಚೇರಿಯಲ್ಲಿ 1,500 ರೂ. ವ್ಯಾನಿಟಿ ಬ್ಯಾಗ್‌ನಲ್ಲಿ 15,000 ಮತ್ತು ಟೇಬಲ್‌ನ ಡ್ರಾಯರ್ ಲಕೋಟೆಯಲ್ಲಿ 1 ಲಕ್ಷ ಹಾಗೂ ಮತ್ತೊಂದು ಲಕೋಟೆಯಲ್ಲಿ 20,000 ಸೇರಿದಂತೆ ಒಟ್ಟು 1.34 ಲಕ್ಷ ರು. ಪತ್ತೆಯಾಗಿದೆ.
ಎಫ್ಡಿಎ ಅಧಿಕಾರಿ ಖಾತೆಯಿಂದ 23 ಲಕ್ಷ ವಹಿವಾಟು
ಬೆಂಗಳೂರು ಉತ್ತರ ತಾಲೂಕು ಮಲ್ಲೇಶ್ವರ ಉಪ ಖಜಾನೆ ಕಚೇರಿ ಎ್ಡಿಎ ಕೇಶವ್‌ರಾಜ್ ಅವರ ಮಾಸಿಕ ವೇತನ 70 ಸಾವಿರ ರೂ.ಇದೆ. ಆದರೆ, ಅವರ ನಡೆಸಿರುವ ಡಿಜಿಟಲ್ ವಹಿವಾಟು ೆನ್-ಪೇ ಪರಿಶೀಲನೆ ವೇಳೆ ಜನವರಿ ತಿಂಗಳಲ್ಲಿ 2,25,228 ರೂ, ಫೆಬ್ರವರಿಯಲ್ಲಿ 2,13,151, ಮಾರ್ಚ್ 1,26,000, ಏಪ್ರಿಲ್ನಲ್ಲಿ 5,68,568, ಮೇನಲ್ಲಿ 1,72,587, ಜೂನ್‌ನಲ್ಲಿ 49,590, ಜುಲೈ 5,68,938 , ಆಗಸ್ಟ್ 11ರ ವೇಳೆಗೆ 3,76,793 ಸೇರಿ ಒಟ್ಟು 23,00,855 ವಹಿವಾಟು ನಡೆದಿರುವುದು ಕಂಡು ಬಂದಿದೆ. ಹೀಗೆ ವಿವಿದ ಖಜಾನೆ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ, ಅಕ್ರಮ ವಹಿವಾಟು ನಡೆದಿರುವುದನ್ನು ಲೋಕಾಯುಕ್ತರು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.