ಲೋಕಾಪುರ&ಧಾರವಾಡ ಯಲ್ಲಮ್ಮ ಎಕ್ಸಪ್ರೆಸ್ ರೈಲು ಮಾರ್ಗಅನುಮೋದನೆ ಆಗ್ರಹಿಸಿ ಸವದತ್ತಿಯಲ್ಲಿ ಕೈಗೊಂಡ ಅರ್ನಿದಿಷ್ಟಾವಧಿ ಸತ್ಯಾಗ್ರಹದಲ್ಲಿ ಪಕ್ರುಸಾಬ್ ನದಾಫ್ ಮಾತನಾಡಿದರು. ಕುತುಬುದ್ದಿನ್ ಖಾಜಿ, ಶಂಕರ ತೋರಗಲ್ಲ ಇತರರಿದ್ದರು.
ಸವದತ್ತಿ: ಲೋಕಾಪುರ&ಧಾರವಾಡ ಯಲ್ಲಮ್ಮ ಎಕ್ಸಪ್ರೆಸ್ ರೈಲು ಮಾರ್ಗ ಅನುಮೋದನೆಗೆ ಆಗ್ರಹಿಸಿ ರೈಲು ಹೋರಾಟ ಸಮಿತಿಯಿಂದ ನಗರದಲ್ಲಿ ಗುರುವಾರ ಅರ್ನಿದಿಷ್ಟಾವಧಿ ಸತ್ಯಾಗ್ರಹ ನಡೆಯಿತು. ಸತ್ಯಾಗ್ರಹ ಆರಂಭಕ್ಕೂ ಮುನ್ನ ಹೋರಾಟಗಾರರು ಯಲ್ಲಮ್ಮಗುಡ್ಡದ ಎಣ್ಣಿಹೊಂಡದಲ್ಲಿ ಸ್ನಾನ ಮಾಡಿ ದೇವಿಯ ದರ್ಶನ ಪಡೆದರು. ಯಲ್ಲಮ್ಮಗುಡ್ಡದಿಂದ ಪಾದಯಾತ್ರೆಯ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಾಂಧಿಚೌಕ್ನಲ್ಲಿ ಸತ್ಯಾಗ್ರಹ ಆರಂಭಿಸಿದರು. ಬಾಗಲಕೋಟೆ ರೈಲು ಹೋರಾಟ ಸಮಿತಿ ಅಧ್ಯ ಕುತುಬುದ್ದಿನ್ ಖಾಜಿ ಮಾತನಾಡಿ, ೆಬ್ರವರಿ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಅ-ಧಿವೇಶನದಲ್ಲಿ ಲೋಕಾಪುರ, ರಾಮದುರ್ಗ, ಸವದತ್ತಿ ಹಾಗೂ ಧಾರವಾಡ ಮಾರ್ಗದ ಸವದತ್ತಿ ಯಲ್ಲಮ್ಮ
ಎಕ್ಸ್ಪ್ರೆಸ್ ರೈಲು ಮಾರ್ಗಕ್ಕೆ ಅನುಮೋದನೆ ದೊರೆಯುವವರೆಗೂ ಅರ್ನಿದಿಷ್ಟಾವಧಿ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಎಚ್ಚರಿಸಿದರು. ಪರಶುರಾಮನ ವೇಷಧಾರಿಯಾಗಿ ಕುತುಬುದ್ದಿನ್ ಖಾಜಿ ಗಮನ ಸೆಳೆದರು. ಪಕ್ರುಸಾಬ್ ನದಾಫ್, ಶಂಕರ ತೋರಗಲ್ಲ, ಶ್ರೀಕಾಂತ ಹಟ್ಟಿಹೊಳಿ, ಎಂ.ಎಂ.ಮುತ್ತಿನ, ಸುಭಾಸ ಸಿಬರೂರ, ರಾಜೇಶ್ವರಿ ರೇಣಿಕೆಗೌಡ್ರ, ರಾಜಶೇಖರ ನಿಡವಳಿ, ಎಲ್.ಎಸ್.ನಾಯಕ, ಬಸವರಾಜ ಕಪ್ಪನವರ, ಕೆ.ಎಸ್.ಕತ್ತಿ ಇತರರಿದ್ದರು.