ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದ ಮಳಿಗೆ ಮಾಲೀಕರಿಗೆ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಶ್ರೀದೇವಿ ಮತ್ತು ಸಿಬ್ಬಂದಿ ನೋಟಿಸ್ ನೀಡಿದರು.
ದೇವನಹಳ್ಳಿ: ವ್ಯಾಪಾರ ಮಳಿಗೆ ಆರಂಭಿಸಿ ಹಲವು ವರ್ಷಗಳೇ ಕಳೆದಿದ್ದರೂ ಟ್ರೇಡ್ ಲೈಸನ್ಸ್ ಪಡೆಯದೆ ಪುರಸಭೆಗೆ ತೆರಿಗೆ ವಂಚಿಸುತ್ತಿದ್ದ ಅಂಗಡಿ ಮಳಿಗೆಗಳಿಗೆ ನೋಟಿಸ್ ನೀಡುವ ಜತೆಗೆ ಕೆಲವು ಮಳಿಗೆಗಳಿಗೆ ಬೀಗ ಜಡಿದು ಬಿಸಿ ಮುಟ್ಟಿಸಲಾಗಿದೆ.
ಪುರಸಭೆ ಮುಖ್ಯಾಧಿಕಾರಿ ಎ.ಶಿವಮೂರ್ತಿ ಸೂಚನೆ ಮೇರೆಗೆ ಮೊಬೈಲ್ ಶೋರೂಂ ಸೇರಿ ವಿವಿಧ ಅಂಗಡಿಗಳ ಮಾಲೀಕರಿಗೆಅಂತಿಮ ನೋಟಿಸ್ ನೀಡುವ ಜತೆಗೆ ಈ ಹಿಂದೆ ನೋಟಿಸ್ ಪಡೆದು ಸ್ಪಂದಿಸದ ಮಳಿಗೆಗಳ ಮಾಲೀಕರಿಗೆ ಹಿರಿಯ ಆರೋಗ್ಯ ನಿರೀಕ್ಷಕಿ ಶ್ರೀದೇವಿ ಮತ್ತು ತಂಡ ಬಂದ್ ಮಾಡಿಸಲು ಮುಂದಾಗಿದೆ.
ಪರವಾನಗಿಮಾಡಿಸಿದರೂ ಹಲವಾರು ವರ್ಷಗಳಿಂದ ನವೀಕರಿಸಿ ಬಾಕಿ ತೆರಿಗೆ ಪಾವತಿಸದ ಮಳಿಗೆಗಳಿಗೆ ಈ ಮೊದಲೇ ಎಚ್ಚರಿಕೆಯ ನೋಟಿಸ್ ನೀಡಿದ್ದರೂ ರ್ನಿಲಕ್ಷಿಸಿದ ಮಳಿಗೆಗಳಿಗೆ ಬೀಗ ಹಾಕಲಾಯಿತು. ಇದರ ಭಾಗವಾಗಿ ಹಳೆ ಬಸ್ ನಿಲ್ದಾಣದ ಹಲವು ಮೊಬೈಲ್ ಶೋರೂಂ ಹಾಗೂಬಣ್ಣದ ಅಂಗಡಿಗಳಿಗೆ ಅಧಿಕಾರಿಗಳು ಬೀಗ ಜಡಿದರು.
ಒಂದೇ ಕಾರ್ಯಾಚರಣೆ ದಿನಕ್ಕೆ ಸೀಮಿತವಲ್ಲ:ಪುರಸಭೆ ಮುಖ್ಯಾಧಿಕಾರಿ ಎ. ಶಿವಮೂರ್ತಿ ಮಾತನಾಡಿ, ತೆರಿಗೆ ಸಂಗ್ರಹ ಕುರಿತಂತೆ ಸರ್ಕಾರದ ಗೈಡ್ಲೈನ್ಸ್ ಇದೆ. ನಾವು ಸರಿಯಾಗಿ ತೆರಿಗೆ ವಸೂಲಿ ಮಾಡದೇ ಹೋದರೆ ಸರ್ಕಾರ ನಮ್ಮ ಮೇಲೆಯೂ ಶಿಸ್ತು ಕ್ರಮ ಕೈಗೊಳ್ಳಲಿದೆ. ಈ ತೆರಿಗೆಗಳಿಂದ ಪಟ್ಟಣದ ಅಭಿವೃದ್ಧಿಸಾಧ್ಯ. ನಾವು ವ್ಯಾಪಾರ ಮಳಿಗೆಗಳ ಮಾಲೀಕರಿಗೆ ಹಲವು ಬಾರಿ ಕರೆದು ಹೇಳಿದ್ದರೂ ಅವರು ಕಡೆಗಣಿಸಿದ್ದರು. ನಮಗೆ ಮೆಲಧಿಕಾರಿಗಳಿಂದ ಕ್ರಮಜರುಗಿಸುವಂತೆ ಸೂಚನೆ ಬಂದಿದ್ದರಿಂದ ಇಂದು 16 ಮಳಿಗೆಗಳಿಗೆ ನೋಟಿಸ್ ನೀಡಲಾಗಿದೆ, ಮೂರು ಮಳಿಗೆಗೆ ಬೀಗ ಹಾಕಲಾಗಿದೆ. ಅವರು ನವೀಕರಣ ಮಾಡಿಸಿದರೆ ಮತ್ತೆ ಅನುಮತಿ ನೀಡಲಾಗುವುದು. ಈ ಕಾರ್ಯಒಂದು ದಿನಕ್ಕೆ ಸೀಮಿತವಲ್ಲ ನಿರಂತರ ಮುಂದುವರಿಯಲಿದೆ ಹಾಗಾಗಿ ಎಲ್ಲರೂ ಎಚ್ಚೆತ್ತುಕೊಂಡು ಕಡ್ಡಾಯವಾಗಿ ಟ್ರೇಡ್ ಲೈಸನ್ಸ್ ಮಾಡಿಸಿಕೊಳ್ಳಬೇಕು ಎಂದರು.
ಇದೇ ರೀತಿ ಸೈನ್ ಬೋರ್ಡ್ಗಳಿಗೆ ಅನುಮತಿ ಪಡೆಯದವರು, ಪ್ಲಾಸ್ಟಿಕ್ ಕವರ್, ಲೋಟ ಮತ್ತಿತರ ಉತ್ಪನ್ನ ಮಾರಾಟ ಮಾಡುವವರು ಮತ್ತು ಅನೈರ್ಮಲ್ಯ ಬೇಕರಿ ಹೋಟೆಲ್ ಬಾರ್ಗಳ ಮೆಲೂ ದಾಳಿ ಮಾಡುತ್ತೇವೆ. ನೋಟಿಸ್ಗೆ ಸ್ಪಂದಿಸಿ ಟ್ರೇಡ್ ಲೈಸನ್ಸ್ ಮಾಡಿಸಿಕೋಳ್ಳದ ಮಳಿಗೆಗಳ ಮುಂದೆ ಪುರಸಭೆ ಟ್ರಾಕ್ಟರ್ ಮೂಲಕ ಕಸ ಸುರಿಯಲಾಗುವುದು. ಅದಕ್ಕೂ ಜಗ್ಗದವರಿಗೆ ಪೊಲೀಸ್ ಇಲಾಖೆ ನೆರವಿನಿಂದಿಗೆ ಮಳಿಗೆ ಸೀಜ್ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದರು.