ಹುನಗುಂದ ಪುರಸಭೆ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸುತ್ತಿರುವುದು. ಡಿವೈಎಸ್ಪಿ ಸುರೇಶ ರೆಡ್ಡಿ, ಇನ್ಸ್‌ಪೆಕ್ಟರ್ ಭೀಮನಗೌಡ ಬಿರಾದಾರ ಇತರರಿದ್ದರು.
- ಸಾರ್ವಜನಿಕರ ದೂರಿನ ಮೇರೆಗೆ ತಂಡ ಭೇಟಿ
- ಸ್ಥಳದಲ್ಲಿಯೇ ಹಲವು ಸಮಸ್ಯೆ ನಿವಾರಣೆ
ಹುನಗುಂದ: ಬೆಂಗಳೂರು-ಬಾಗಲಕೋಟೆ ಲೋಕಾಯುಕ್ತ ಕಚೇರಿಗೆ ಸಾರ್ವಜನಿಕರ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಭೇಟಿ ನೀಡಿ, ಹುನಗುಂದ ಪುರಸಭೆ ಕಚೇರಿಯ ಎಲ್ಲ ವಿಭಾಗಗಳ ಕಡತಗಳ ಪರಿಶೀಲನೆ ನಡೆಸಿತು.
ಸಾರ್ವಜನಿಕರಿಗೆ ಇ-ಸ್ವತ್ತು, ಎನ್‌ಒಸಿ ಮತ್ತು ಕಟ್ಟಡ ಕಟ್ಟಲು ಅನುಮತಿ, ಖಾತೆ ಬದಲಾವಣೆ, ಕಂಪ್ಯೂಟರ್ ಉತಾರ ನೀಡಲು ಅಧಿಕಾರಿಗಳು ಮತ್ತು ಸಿಬ್ಬಂದಿ ಲಂಚ ಬೇಡಿಕೆ ಇಡುತ್ತಿರುವುದು ಹಾಗೂ ಸಾರ್ವಜನಿಕರಿಗೆ ಕೆಲಸ ಮಾಡಲು ವಿಳಂಬಮಾಡಿ ತೊಂದರೆ ಉಂಟಾಗುತ್ತಿದೆ ಎಂದು ದೂರು ನೀಡಿದ ಹಿನ್ನೆಲೆ ಭೇಟಿ ನೀಡಿ ಸಾರ್ವಜನಿಕರ ಕೆಲಸ ಕಾರ್ಯಗಳು ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಾರ್ವಜನಿಕರ ಅಹವಾಲು ಸ್ಥಳದಲ್ಲಿಯೇ ಸ್ವೀಕರಿಸಿ ನಾಲ್ಕು ಜನರಿಗೆ ಉತಾರ ಕೊಡಿಸಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿದರು.
ಡಿವೈಎಸ್ಪಿ ಸುರೇಶ ರೆಡ್ಡಿ, ಇನ್ಸ್‌ಪೆಕ್ಟರ್ ಭೀಮನಗೌಡ ಬಿರಾದರ, ಮಲ್ಲಿಕಾರ್ಜುನ ಬಿರಾದರ, ಎನ್.ಎ. ಕಿಲ್ಲಾರಿ ಇದ್ದರು.