ಜಾಲಿಗೆ ಡೇರಿಗೆ ಹೆಚ್ಚು ಹಾಲು ಸರಬರಾಜು ಮಾಡಿದ ಗೋವಿಂದ ರಾಜು ಅವರಿಗೆ ವಾರ್ಷಿಕ ಸಭೆಯಲ್ಲಿ ಬಹುಮಾನ ನೀಡಲಾಯಿತು. ಬಮುಲ್ ನಿರ್ದೇಶಕ ಎಸ್.ಪಿ.ಮುನಿರಾಜು, ಡೇರಿ ಅಧ್ಯಕ್ಷ ಗೋವಿಂದಪ್ಪ, ಉಪಾಧ್ಯೆ ಅನೀತಾ, ಸಿಇಒ ರಮೇಶ್ ಇತರರು ಇದ್ದರು.
ಕುಂದಾಣ : ಬೆಂಗಳೂರು ಹಾಲು ಒಕ್ಕೂಟದ ಷೇರುದಾರರು ಡೇರಿ ಫಾರ್ಮ್ ಮಾಡುವುದಿದ್ದರೆ ಬಿಡಿಸಿಸಿ ಬ್ಯಾಂಕ್ನಿಂದ 5ರಿಂದ 10 ಲ ರೂ.ವರೆಗೆ ಸಾಲ ನೀಡಲಾಗುತ್ತದೆ ಎಂದು ದೇವನಹಳ್ಳಿ ಬಮುಲ್ ನಿರ್ದೇಶಕ ಎಸ್.ಪಿ.ಮುನಿರಾಜು ಹೇಳಿದರು.
ಜಾಲಿಗೆ ಹಾಲು ಉತ್ಪಾದಕರ ಸಹಕಾರ ಸಂದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಒಕ್ಕೂಟಕ್ಕೆ 16 ಸಾವಿರ ಲೀಟರ್ ಹಾಲಿನಲ್ಲಿ 80 ಕೋಟಿ ರೂ. ಲಾಭಾಂಶ ಬಂದಿದೆ. ಸರ್ಕಾರ ಈಗ 5 ರೂ. ಪೋತ್ಸಾಹಧನ ನೀಡುತ್ತಿದ್ದು, ಈ ಹಣವನ್ನು 10 ರೂ.ಗೆ ಏರಿಸಲು ಸರ್ವ ಪಗಳಿಂದ ಬೇಡಿಕೆ ಸಲ್ಲಿಸಲಾಗಿದೆ ಎಂದರು.
ಜಾನುವಾರುಗಳಿಗೆ ಹಸಿಮೇವು ಒದಗಿಸಲು ಹಾಗೂ ಮಾರಾಟದ ಮೂಲಕ ಅಧಿಕ ಆದಾಯ ಗಳಿಸಲು ಸಿಹಿ ಜೋಳ ಉತ್ತಮ ಬೆಳೆಯಾಗಿದೆ ಎಂದರು. ಕಲಗಚ್ಚು ನೀರು ಜಾನುವಾರುಗಳಿಗೆ ನೀಡಬಾರದು. ಪಶು ಆಹಾರದ ಭಾಗವಾಗಿ ಹಿಂಡಿ, ಬೂಸಾ ಕೊಡಬೇಕು. ಚನ್ನಪಟ್ಟಣ, ರಾಮನಗರದಲ್ಲಿ ಅತಿ ಹಾಲು ಶೇಖರಣೆ ಆಗಲು ಶಲೇಜ್ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಗುಣಮಟ್ಟದ ಹಾಲು ಉತ್ಪಾದನೆ ಆದ್ಯತೆಯಾಗಬೇಕು ಎಂದರು.
ಡೇರಿ ಸಿಇಒ ರಮೇಶ್ ಮಾತನಾಡಿ, ನಮ್ಮ ಡೇರಿಯಲ್ಲಿ 2025&26ರಲ್ಲಿ ಒಟ್ಟು 5.50 ಲ ರೂ. ವಹಿವಾಟು ನಡೆದಿದೆ. ಪ್ರತಿದಿನ 1500 ಲೀಟರ್ ಹಾಲು ಶೇಖರಣೆ ಆಗುತ್ತಿದೆ. ಈ ವರ್ಷ 2.30 ಲ ರೂ. ಲಾಭ ಕಂಡಿದ್ದು, 145 ಷೇರುದಾರರನ್ನು ಹೊಂದಿದೆ ಎಂದರು.
ಡೇರಿ ನಿರ್ದೇಶಕರಾದ ಆಂಜಿನಪ್ಪ, ಸುರೇಶ್, ರವೀಂದ್ರ, ನಾಗರಾಜು, ವೆಂಕಟಸ್ವಾಮಿ, ಸರಸ್ವತಮ್ಮ, ಮಾರಪ್ಪ, ಬಯಪ ಮಾಜಿ ನಿರ್ದೇಶಕ ಶ್ರೀರಾಮಣ್ಣ, ಅರದೇಶನಹಳ್ಳಿ ಸೊಸೈಟಿ ಮಾಜಿ ನಿರ್ದೇಶಕ ಮುರಳಿ, ಜಾಲಿಗೆ ಪಂಚಾಯಿತಿ ಮಾಜಿ ಸದಸ್ಯ ಸುಬ್ರಹ್ಮಣಿ, ಸಿಇಒ ರಮೇಶ್, ಹಾಲು ಉತ್ಪಾದಕರಾದ ವಸಂತ್, ನರಸಿಂಹಮೂರ್ತಿ, ಬಾಬು, ಸುರೇಶ್ ಇತರರಿದ್ದರು.