- ಮಾಗಡಿ ಬಳಿಯು ಬೇಕರಿಯಲ್ಲಿ ಪನ್ನೀರ್ ಟಿಕ್ಕಾ ತಿಂದ ಕ್ಯಾಬ್ ಚಾಲಕ ಅಸ್ವಸ್ಥ
- ಪನ್ನೀರ್ ಟಿಕ್ಕಾ ರೋಲ್ನಲ್ಲಿ ಸತ್ತ ಹಲ್ಲಿ ಪತ್ತೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಬ್ ಚಾಲಕ
- ಬೇಕರಿ ಸಿಬ್ಬಂದಿ ವಿರುದ್ಧ ದೂರು ಕೊಟ್ಟ ಕ್ಯಾಬ್ ಚಾಲಕ ದೀಪು
Lizard in Paneer Tikka: ತೀರ ಹಸಿವು ತಡಿಯಲಾರದೆ ಬೆಂಗಳೂರಿನ ಬೇಕರಿಯೊಂದರಲ್ಲಿ ಪನ್ನೀರ್ ಟಿಕ್ಕಾ ರೋಲ್ ಪಡೆದು ಅರ್ಧ ತಿಂದವ ಸದ್ಯ ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ. ಏಕೆಂದರೆ, ಆತ ತಿಂದ ರೋಲ್ನಲ್ಲಿ ಹಲ್ಲಿಯಿದ್ದದ್ದೇ ಇದಕ್ಕೆ ಕಾರಣ. 32 ವರ್ಷದ ದೀಪು ಎಂಬುವವರು ಈ ಬಗ್ಗೆ ಸದ್ಯ ದೂರು ಕೊಟ್ಟಿದ್ದಾರೆ.
ಏನಿದು ಘಟನೆ?
ಹೌದು, ಅಗ್ರಹಾರ ದಾಸರಹಳ್ಳಿ ನಿವಾಸಿಯಾಗಿರುವ ಚಾಲಕ ದೀಪು ಎನ್ಕೆ, ಏಪ್ರಿಲ್ 25 ರಂದು ಮದ್ಯಾಹ್ನ ಊಟ ಮಾಡದೆ ತೀರ ಹಸಿದು ಕೊಂಡಿದ್ದರು. ಹೀಗಾಗಿ ಮಾಗಡಿ ಮುಖ್ಯ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ಸಂಜೆ 4ಗಂಟೆ ಸುಮಾರಿಗೆ ಹನಿಕೇಕ್ ತಿಂದಿದ್ದಾರೆ. ಅದಾದ ನಂತರ ಚಿಕನ್ ರೋಲ್ ಆರ್ಡರ್ ಮಾಡಿದ್ದರು. ಸ್ಟಾಕ್ ಇಲ್ಲದ ಕಾರಣ ಪನೀರ್ ಟಿಕ್ಕಾ ರೋಲ್ ಅನ್ನು ಆರ್ಡರ್ ಮಾಡಿದರು.
ಪನ್ನೀರ್ ರೋಲ್ ಟೇಬಲ್ ಮೇಲೆ ಬಂದ ತಕ್ಷಣ, ಅದನ್ನು ಅರ್ಧ ಅರಾಮವಾಗಿ ತಿಂದರು. ಆದರೆ, ಆ ನಂತರ ಅರ್ಧ ತಿನ್ನುತ್ತಲೇ ಅದರಲ್ಲಿ ಹಲ್ಲಿ ಕಾಣಿಸಿಕೊಂಡಿದೆ. ಈ ಬಗ್ಗೆ ಬೇಕರಿಯವರನ್ನು ಪ್ರಶ್ನೆ ಮಾಡಿದ್ದಕ್ಕೆ ನಿರ್ಲಕ್ಷ್ಯವಾಗಿ ಉತ್ತರ ಕೊಟ್ಟರು. ಜೊತೆಗೆ ಬೇಕರಿ ಎಷ್ಟು ಸ್ವಚ್ಛವಾಗಿದೆ ನೋಡಿ ಎಂದು ಒಳಗೆ ಕರೆಯಲು ಒತ್ತಾಯಿಸಿದರು. ಅದಾನಂತರ ವಾಂತಿಯಾಯಿತು. ಏನೇ ಕಂಡರೂ ವಾಕರಿಗೆ ಬಂದಂತಾಯಿತು.
ಪೊಲೀಸ್ ಠಾಣೆಯಲ್ಲಿ ದೂರು
ಆಸ್ಪತ್ರೆಯ ವೆಚ್ಚ ಪಾವತಿ ಮಾಡಿ ಎಂದಿದ್ದಕ್ಕೆ ಇಲ್ಲಿ ಹಣ ಹೆಚ್ಚು ಪಡೆದುಕೊಳ್ಳುತ್ತಾರೆ. ನಮಗೆ ತಿಳಿದಿರುವ ಆಸ್ಪತ್ರೆಗೆ ಹೋಗೋಣ ಎಂದು ಹೇಳಿದ್ದಾರೆ. ಅಷ್ಟರಲ್ಲಿ ನಾನು ಸತ್ತರೇ ಎನೂ ಮಾಡುವುದು ಎಂದಾಗ ಬೇಕರಿ ಸಿಬ್ಬಂದಿ ಉಡಾಫೆ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ. ಕೊನೆಗೆ ದೀಪು ಅವರು ಕಾಮಾಕ್ಷಿ ಪಾಳ್ಯದ ಬಳಿ ಇರುವ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ದೀಪು ಅವರು ಗೋವಿಂದ ರಾಜನಗರ ಪೊಲೀಸ್ ಠಾಣೆಯಲ್ಲಿ ಕೊಟ್ಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗೋವಿಂದರಾಜ ನಗರ ಪೊಲೀಸರು ಬಿಎನ್‌ಎಸ್ (ವಿಷಕಾರಿ ವಸ್ತುವಿನ ಬಗ್ಗೆ ನಿರ್ಲಕ್ಷ್ಯದ ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರುದಾರರು ಆಹಾರದಲ್ಲಿ ಹಲ್ಲಿಯ ಯಾವುದೇ ಪುರಾವೆಗಳನ್ನು ನೀಡಿಲ್ಲ, ವಾಂತಿ ಮಾಡಿದ ನಂತರ ಭಯಭೀತರಾಗಿ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ದೂರಿನಲ್ಲಿ ದೀಪು ಉಲ್ಲೇಖಿಸಿದ್ದಾರೆ, (ಏಜೆನ್ಸೀಸ್).