Live a peaceful life by serving God. 
ರಾಜ್ಯ

ದೇವರ ಸೇವೆಯಿಂದ ನೆಮ್ಮದಿ ಬದುಕು

ಶಿರಾ: ದೇವರ ಕೃಪೆ ಅನುಸಂಧಾನಕ್ಕೆ ಯಾರು ಪ್ರಯತ್ನ ವಾಡುತ್ತಾರೋ ಅವರೇ ದೊಡ್ಡವರು. ಕ್ಯಾದಿಗುಂಟೆ ಶ್ರೀರಂಗನಾಥ ಸ್ವಾಮಿಗೆ ಭವ್ಯ ದೇಗುಲ ನಿರ್ವಾಣ ವಾಡಲು ಭಕ್ತರು ಮುಂದಾದರೆ ಶ್ರೀಮಠ ಆರ್ಥಿಕ ಸಹಾಯ ವಾಡಲಿದೆ ಎಂದು ಸ್ಫಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.
ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿ ಕ್ಯಾದಿಗುಂಟೆ ಗ್ರಾಮ ಶ್ರೀರಂಗನಾಥ ಸ್ವಾಮಿ ಕಲ್ಲುಗಾಲಿ ರಥೋತ್ಸವದಲ್ಲಿ ಸಾನಿಧ್ಯ ವಹಿಸಿ ವಾತನಾಡಿದ ಅವರು, ವೈಯಕ್ತಿಕ ಪ್ರತಿಷ್ಠೆಗಳಿಗೆ ದೇವರನ್ನು ನಿಂದಿಸಬಾರದು, ದೇವತಾ ಕಾರ್ಯಗಳಲ್ಲಿ ಸೇವಕರಾಗಿ ಕೆಲಸ ವಾಡಿದರೆ ದೇವರ ಕೃಪಾಶೀರ್ವಾದ ಸದಾ ನಿಮ್ಮ ಮೇಲೆ ಇರಲಿದೆ. ಶ್ರೀರಂಗನಾಥ ಸ್ವಾಮಿಯ ರಥ ಹೇಗೆ ಸರಾಗವಾಗಿ ಹರಿಯುತ್ತದೆಯೋ, ಹಾಗೆ ಎಲ್ಲರ ಸಂಕಷ್ಟಗಳು ದೂರವಾಗಿ ನೆಮ್ಮದಿ ಬದುಕು ದೊರೆಯುತ್ತದೆ ಎಂದರು.