ತಾಳಿಕೋಟೆ ಪಟ್ಟಣದಲ್ಲಿ ಭಾರತೀಯ ಸೇನೆಯ ಸಿಐಎಸ್‌ಎ್ನಲ್ಲಿ ಸೇವೆಯನ್ನು ಸಲ್ಲಿಸಿ ತಾಯ್ನಡಿಗೆ ಮರಳಿದ ಅಧಿಕಾರಿ ಮೊಹಮ್ಮದ್ ಯೂಸಫ್ ಅಬ್ದುಲಸಾಬ ಹಾದಿಮನಿ ಅವರನ್ನು ಅಭಿಮಾನಿ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು. ಬಸನಗೌಡ ಹಡಲಗೇರಿ, ಎಸ್.ಎಂ. ಪಡಶೆಟ್ಟಿ, ಎಂ.ಎ. ಮೇತ್ರಿ ಮತ್ತಿತರಿದ್ದರು.
- ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್ ಪಾಟೀಲ ಅನಿಸಿಕೆ
- ಅಭಿಮಾನಿಗಳಿಂದ ಭವ್ಯ ಸ್ವಾಗತ ಮೆರವಣಿಗೆ
ತಾಳಿಕೋಟೆ: ಭಾರತದಲ್ಲಿ ಜನರು ನೆಮ್ಮದಿಯಿಂದ ಬದುಕಲು ಗಡಿ ಕಾಯುವ ಯೋಧರು ಕಾರಣ. ಅವರು ತಮ್ಮ ಕುಟುಂಬ ಬಿಟ್ಟು ದೇಶ ಸೇವೆಯಲ್ಲಿ ತೊಡಗಿಕೊಂಡಿರುವುದು ಹೆಮ್ಮೆ. ಪ್ರತಿಯೊಬ್ಬರ ಮನೆಗಳಲ್ಲಿ ಯೋಧನನ್ನಾಗಿ ನಿರ್ಮಾಣ ಮಾಡುವ ಗುಣ ಬರಬೇಕಾಗಿದೆ ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಶನಿವಾರ ಭಾರತೀಯ ಸೇನೆಯ ಸಿಐಎಸ್‌ಎ್ನಲ್ಲಿ ಸೇವೆಯನ್ನು ಸಲ್ಲಿಸಿ ತಾಯ್ನಡಿಗೆ ಮರಳಿದ ಅಧಿಕಾರಿ ಮೊಹಮ್ಮದ್ ಯೂಸಫ್ ಅಬ್ದುಲಸಾಬ್ ಹಾದಿಮನಿ ಅವರಿಗೆ ಈದ್ಗಾ ಶಾದಿ ಮಹಲ್‌ನಲ್ಲಿ ಏರ್ಪಡಿಸಲಾದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಗಡಿಯಲ್ಲಿ ರಾತ್ರಿ ಹಗಲೆನ್ನದೆ ಯೋಧರು ಸೇವೆಯಲ್ಲಿ ತೊಡಗಿಕೊಂಡು ದೇಶಕ್ಕಾಗಿ ಅನೇಕರು ಪ್ರಾಣ ಅರ್ಪಣೆ ಮಾಡಿದ ಅವರ ದೇಶಭಕ್ತಿ, ಸೇವೆಯ ಬಗ್ಗೆ ಎಲ್ಲರಲ್ಲಿ ಅಭಿಮಾನವಿರಲಿ ಎಂದರು.
ಬಿಎಸ್‌ಎ್ ನಿವೃತ್ತ ಅಧಿಕಾರಿ ಡಾ.ಬಿ.ಎಸ್.ಯಾಳವಾರ ಮಾತನಾಡಿ ಭಾರತೀಯ ಸೇನೆಯಲ್ಲಿ ಹಲವಾರು ಶಾಖೆಗಳಿವೆ. ಅವು ದೇಶದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಿಐಎಸ್‌ಎ್ನಲ್ಲಿ ಹಾದಿಮನಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ವಿಶ್ರಾಂತ ಬದುಕು ನೆಮ್ಮದಿಯಿಂದ ಕೂಡಿರಲೆಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮೊಹಮ್ಮದ್ ಯೂಸೂಫ್ ಹಾದಿಮನಿ ಮಾತನಾಡಿ, ಬಾಲ್ಯದಿಂದಲೇ ನನಗೆ ಸೇನೆಯಲ್ಲಿ ಸೇರುವ ಆಸೆ ಇತ್ತು. ಆ ದೇವರು ನನಗೆ ದೇಶ ಸೇವೆ ಮಾಡುವ ಅವಕಾಶವನ್ನು ಮಾಡಿಕೊಟ್ಟ. ಇದರಿಂದ 38 ವರ್ಷಗಳಿಂದ ನಿವೃತ್ತಿಯ ದಿನಗಳವರೆಗೂ ಸೇವೆ ಸಲ್ಲಿಸಿದ್ದೇನೆ ಇದನ್ನು ಗಮನಿಸಿದ ತಾವೆಲ್ಲರೂ ಸೇರಿ ನನ್ನನ್ನು ಗೌರವಿಸಿದ್ದೀರಿ ನಾನು ನಿಮ್ಮೆಲ್ಲರಿಗೆ ಚಿರಋಣಿಯಾಗಿದ್ದೇನೆ ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಮುಸ್ಲಿಂ ಧಾರ್ಮಿಕ ಮುಖಂಡ ಸಯ್ಯದ್‌ಶಕೀಲ ಅಹ್ಮದ್ ಖಾಜಿ ಮಾತನಾಡಿದರು.
ಯೋಧನ ಕುಟುಂಬಕ್ಕೆ ವಿವಿಧ ಸಂಘಗಳ ಪದಾಧಿಕಾರಿಗಳು, ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.
ಬಸನಗೌಡ ಹಡಲಗೇರಿ, ಅಪರಾಧ ವಿಭಾಗ ಪಿ.ಎಸ್.ಐ. ಎಸ್.ಎಂ.ಪಡಶೆಟ್ಟಿ, ಎಂ.ಎ.ಮೇತ್ರಿ, ಖಾಸೀಮ ಪಟೇಲ ಪಾಟೀಲ, ಎನ್.ಆರ್.ಮೊಕಾಶಿ, ರೋಶನ ಡೋಣಿ, ಸಾಹೇಬಗೌಡ ಅಸ್ಕಿ, ಮೊಹಮ್ಮದ್ ಯೂನೂಸ್ ಹಾದಿಮನಿ, ಮುಜಾಹಿದ್ ನಮಾಜಕಟ್ಟಿ, ಪಿ.ಕೆ.ಜಾಧವ, ಬಿ.ಬಿ. ಚೋಕಾವಿ, ನಿಂಗನಗೌಡ, ಮೊಹಮ್ಮದ್ ಹನ್ೀ ಮಾಗಿ ಮತ್ತಿತರರಿದ್ದರು.
ಇದಕ್ಕೂ ಮುನ್ನ ದೇವರ ಹುಲಗಬಾಳ ಗ್ರಾಮದಿಂದ ಬೈಕ್ ರ‌್ಯಾಲಿ ಮತ್ತು ಹಾದಿಮನಿ ಅವರನ್ನು ತೆರೆದ ವಾಹನದಲ್ಲಿ ಬಸವೇಶ್ವರ ವೃತ್ತದವರೆಗೆ ಅಭಿಮಾನಿ ಬಳಗದಿಂದ ಭವ್ಯ ಮೆರವಣಿಗೆ ನಡೆಸಲಾಯಿತು.