Light for Durgamma's life 
ರಾಜ್ಯ

ದುರ್ಗಮ್ಮರ ಬದುಕಿಗೆ ಬೆಳಕು

ವಿಜಯವಾಣಿ ಸುದ್ದಿಜಾಲ ಹುಳಿಯಾರು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ "ವಾತ್ಸಲ್ಯ' ಕಾರ್ಯಕ್ರಮದಡಿ, ಹಂದನಕೆರೆ ವಲಯದ ದುರ್ಗಮ್ಮ ಎಂಬುವವರಿಗೆ ನಿರ್ಮಿಸಿಕೊಟ್ಟ ನೂತನ ಮನೆಯನ್ನು ಜಿಲ್ಲಾ ನಿರ್ದೇಶಕ ಪ್ರವಿಣ್​ ಕುಮಾರ್​ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು, ರಾಜ್ಯಾದ್ಯಂತ ಈಗಾಗಲೇ ಸುಮಾರು 725 ವಾತ್ಸಲ್ಯ ಮನೆಗಳನ್ನು ಹಸ್ತಾಂತರಿಸಲಾಗಿದ್ದು, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವುದು ಯೋಜನೆಯ ಮೂಲ ಉದ್ದೇಶವಾಗಿದೆ. ದುರ್ಗಮ್ಮರ ಬದುಕಿಗೆ ಈ ಮನೆ ಬೆಳಕು ನೀಡಲಿದೆ ಎಂದರು.
ಕಾಳಿದಾಸ ಪ್ರೌಢಶಾಲೆಯ ಮುಖ್ಯಶಿಕ್ಷಕ ದಾನಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ದಾಸಪ್ಪ, ಗ್ರಾಪಂ ಸದಸ್ಯ ದಯಾನಂದ್​, ತಾಲೂಕು ಯೋಜನಾಧಿಕಾರಿ ರಾಮಚಂದ್ರ, ವಲಯ ಮೇಲ್ವಿಚಾರಕ ಹರೀಶ್​, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುನಿತಾ, ಲೆಕ್ಕಪರಿಶೋಧಕ ವಿಶ್ವನಾಥ್​, ಸೇವಾಪ್ರತಿನಿಧಿಗಳಾದ ವೇದಮೂರ್ತಿ, ಮಹಮ್ಮದ್​ ಸಲ್ಮಾನ್​, ಪಲ್ಲವಿ, ವಿಎಲ್​ಇ ಮಾಲಾ ಇದ್ದರು.
11 ಹುಳಿಯಾರು 2
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ "ವಾತ್ಸಲ್ಯ' ಕಾರ್ಯಕ್ರಮದಡಿ, ಹುಳಿಯಾರು ಹೋಬಳಿಯ ಹಂದನಕೆರೆ ವಲಯದ ದುರ್ಗಮ್ಮ ಅವರಿಗೆ ನೂತನ ಮನೆ ಹಸ್ತಾಂತರಿಸಲಾಯಿತು. ಗ್ರಾಪಂ ಪಿಡಿಒ ಬಸವಲಿಂಗಯ್ಯ, ಅಧ್ಯಕ್ಷ ರಾಜಣ್ಣ, ಎಸ್​ಎಚ್​ಜಿ ವಿಭಾಗದ ಯೋಜನಾಧಿಕಾರಿ ಸಂಧ್ಯಾ, ಎಎಸ್​ಐ ನಾಗಭೂಷಣ್​ ಇದ್ದರು.