Lifestyle is the reason for the decline in groundwater levels 
ರಾಜ್ಯ

ಅಂತರಜಲಮಟ್ಟ ಕುಸಿತಕ್ಕೆ ಜೀವನ ಕ್ರಮ ಕಾರಣ

ನೊಣವಿನಕೆರೆ : ಇತ್ತೀಚೆಗೆ ಅಧುನಿಕ ವೈಜ್ಞಾನಿಕ ಬದುಕಿನಲ್ಲಿ ಅರಣ್ಯನಾಶ ಮತ್ತು ಕೆರೆ ಕಟ್ಟೆಗಳು ಕಟ್ಟಡಗಳಾಗಿ ಮಾರ್ಪಟ್ಟು, ಅಂತರಜಲಮಟ್ಟ ಕುಸಿದಿದೆ ಎಂದು ತಾಲೂಕು ಯೋಜನಾಧಿಕಾರಿ ಸುರೇಶ್​ ಆತಂಕ ವ್ಯಕ್ತಪಡಿಸಿದರು.
ತಿಪಟೂರು ತಾಲೂಕು ನೆಲ್ಲಿಕೆರೆಯಲ್ಲಿ ನೊಣವಿನಕೆರೆವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶುದ್ಧಜಲ ಅಭಿಯಾನ ಜಾಥಾದಲ್ಲಿ ಮಾತನಾಡಿದರು.
ಸಾವಿರಾರು ಅಡಿಗಳ ಕೆಳಗೆ ಹೋಗಿ ನಮಗೆ ಸಿಗುವ ಜೀವಜಲ ನಮ್ಮ ಜೀವಕ್ಕೆ ಮಾರಕವಾಗುವಷ್ಟರ ಮಟ್ಟಿಗೆ ಕಲುಶಿತಗೊಂಡಿದೆ. ಇಂತಹ ನೀರನ್ನು ನಾವು ಕುಡಿದರೆ ಅನೇಕ ಮಾರಣಾಂತಿಕ ರೋಗಗಳಿಗೆ ತುತ್ತಾಗುವುದರ ಜತೆಗೆ ಜೀವಜಲ ಕಾರ್ಖಾನೆ ಮತ್ತು ಪಟ್ಟಣಗಳ ತ್ಯಾಜ್ಯ, ಅನೇಕ ಕಾರಣಗಳಿಂದ ಶುದ್ಧ ನೀರು ಸಿಗುತ್ತಿಲ್ಲ ಎಂದರು.
ಈ ಕಾಲಘಟ್ಟದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ್ಯಂತ ನೂರಾರು ಶುಧ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಮೂಲಕ ಜನರಿಗೆ ಶುದ್ಧ ನೀರನ್ನು ನಿತ್ಯ ನೀಡುವ ಮಹತ್ವದ ಯೋಜನೆಯನ್ನು ನೀಡಿದೆ ಎಂದರು.
ಶಾಲಾ ಮಕ್ಕಳು, ಸ್ವಸಹಾಯ ಸಂಘ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥ ನಡೆಯಿತು.