ಶಹಾಪುರ ತಾಲೂಕಿನ ಆಲ್ದಾಳ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರವನ್ನು ಡಾ.ಶಂಕರಗೌಡ ಬಿ.ಎಚ್. ಆಲ್ದಾಳ ಉದ್ಘಾಟಿಸಿದರು. ಕೃಷ್ಣಪ್ಪಗೌಡ ಆಲ್ದಾಳ, ಶೇಖರ ದೊರೆ, ಶರಣಗೌಡ ಮಾಳಳ್ಳಿ, ಮಹಾದೇವಪ್ಪ ಸಾಹುಕಾರ ಕಕ್ಕಸಗೇರಾ, ಪ್ರಭುರಡ್ಡಿ, ಅಶೋಕ ಕರೆಗಾರ, ವೆಂಕಟೇಶ ಮಕಾಶಿ ಇತರರಿದ್ದರು.
- ಡಾ.ಶಂಕರಗೌಡ ಬಿ.ಎಚ್. ಹೇಳಿಕೆ
- ಆಲ್ದಾಳದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಶಹಾಪುರ: ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ನಾವು ಸೇವಿಸುತ್ತಿರುವ ಆಹಾರ ಮತ್ತು ಅನುಸರಿಸುತ್ತಿರುವ ಜೀವನ ಪದ್ಧತಿಯೇ ಮೂಲ ಕಾರಣವಾಗಿದೆ ಎಂದು ಖ್ಯಾತ ಹೃದಯ ತ ಡಾ.ಶಂಕರಗೌಡ ಬಿ.ಎಚ್.ಹೇಳಿದರು.
ತಾಲೂಕಿನ ಆಲ್ದಾಳ ಗ್ರಾಮದಲ್ಲಿ ನವೋದಯ ಆಸ್ಪತ್ರೆ ಕಲಬುರ್ಗಿ ಹಾಗೂ ಆಲ್ದಾಳ ಗ್ರಾಮಸ್ಥರಿಂದ ಶುಕ್ರವಾರ ಆಯೋಜಿಸಿದ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಅವರು, ಆರೋಗ್ಯ ಸಮಸ್ಯೆಗಳಿಗೆ ಅರಿವು ಮೂಡಿಸುವ ಆರೋಗ್ಯ ಶಿಕ್ಷಣವು ಔಷಧಿಯಷ್ಟೇ ಬಲಿಷ್ಠವಾಗಿದೆ ಎಂದು ಹೇಳಿದರು.
ಮನುಷ್ಯನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಸ್ಥಿತಿಯೇ ನಿಜವಾದ ಆರೋಗ್ಯವಾಗಿದೆ. ದೂಮಪಾನ, ತಂಬಾಕು ಸೇವನೆ, ವ್ಯಾಯಾಮವಿಲ್ಲದ ಜೀವನ, ಒತ್ತಡದ ಬದುಕು ಮುಂತಾದವು ಹಲವು ರೋಗಗಳಿಗೆ ಕಾರಣವಾಗುತ್ತಿದೆ. ಇವುಗಳಿಂದ ಹೃದಯಘಾತ ಪ್ರಕರಣ ಹೆಚ್ಚು ತ್ತಿವೆ. ಆರೋಗ್ಯಕರ ಬದುಕು ಸಾಗಿಸಲು ಉತ್ತಮ ಆಹಾರ ಸೇವನೆ, ವ್ಯಾಯಾಮ, ಚನ್ನಾಗಿ ನಿದ್ರೆ ಮಾಡಬೇಕು. ತಂಬಾಕು, ಮದ್ಯಸೇವನೆ ಬಿಡಬೇಕು. ಪದೇಪದೆ ವೈದ್ಯಕಿಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನೇತ್ರ ತ ಡಾ.ವಂದನಾ ಎಸ್. ಕಾಮಶೆಟ್ಟಿ. ಕಣ್ಣಿನ ಆರೋಗ್ಯ ಬಗ್ಗೆ ತಿಳಿಸಿದರು. ಸಾನ್ನಿಧ್ಯ ವಹಿಸಿದ್ದ ನಗನೂರಿನ ಸೂಗೂರೇಶ್ವರ ಶಿವಾಚಾರ್ಯರು ಮಾತನಾಡಿದರು. ಡಾ.ಗೋವಿಂದರಾಜ ಆಲ್ದಾಳ ಪ್ರಾಸ್ತಾವಿಕ ಮಾತನಾಡಿದರು. ತ ವೈದ್ಯರಾದ ಡಾ. ಸಂತೋಷ ಹಾರಕೂಡೆ, ಡಾ. ದೀಪಕ್ ಪವಾರ್, ಡಾ. ಜ್ಯೋತಿ ದೋತ್ರೆ, ಡಾ. ಪ್ರಶಾಂತಕುಮಾರ, ಡಾ. ಸುಭಾಸ, ಡಾ. ಪಾಲ್ಮೂರ್ತಿ. ಡಾ. ಆರ್.ಜಿ. ಹಿರೇಮಠ, ಡಾ. ಪ್ರಕಾಶ ಪವಾರ್, ಡಾ. ನಿಶಾಂತ ಕೊಲ್ಲೂರು ಅವರು ಸುಮಾರು 600ಕ್ಕೂ ಅಧಿಕ ಜನರಿಗೆ ತಪಾಸಣೆ ಮಾಡಿದರು.ಈ ಸಂದರ್ಭದಲ್ಲಿ ಕೃಷ್ಣಪ್ಪಗೌಡ ಆಲ್ದಾಳ, ಶೇಖರ ದೊರೆ, ಶರಣಗೌಡ ಮಾಳಳ್ಳಿ, ಮಹಾದೇವಪ್ಪ ಸಾಹುಕಾರ ಕಕ್ಕಸಗೇರಾ, ಪ್ರಭುರಡ್ಡಿ, ಅಶೋಕ ಕರೆಗಾರ, ವೆಂಕಟೇಶ ಮಕಾಶಿ, ಬಸನಗೌಡ, ಆನಂದನಾಯಕ್, ಶಿವನಗೌಡ ಗೋವಿಂದರಾಜ, ರೇವಣಸಿದ್ದೇಶ್ವರ ಅಂಗಡಿ, ಜಯರಾಜ ದೊರೆ, ದೇವಿಂದ್ರಪ್ಪ ಆಲ್ದಾಳ, ರಾಮು ಟಿ. ನಾಯಕ, ಗೋವಿಂದ ಟಿ. ರಮನಪ್ಪಗೌಡ, ಸಂಗುರಡ್ಡಿ, ದೇವಿಂದ್ರಪ್ಪ ದೊರೆ, ವೆಂಕಟೇಶ ದೊರೆ ಇತರರಿದ್ದರು.