ಬಂಗಾರಪೇಟೆ ಆಸ್ಪತ್ರೆಯಲ್ಲಿ ‘ಜೀವಜಲ’ ವ್ಯರ್ಥ Bangarpet Hospital 
ರಾಜ್ಯ

ಬಂಗಾರಪೇಟೆ ಆಸ್ಪತ್ರೆಯಲ್ಲಿ ‘ಜೀವಜಲ’ ವ್ಯರ್ಥ Bangarpet Hospital

ಬಂಗಾರಪೇಟೆ: ಬೇಸಿಗೆಯ ತಾಪ ಏರುತ್ತಿರುವಂತೆ ನೀರಿನ ಉಳಿತಾಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ತಾಲೂಕು ಆಡಳಿತದ ಪ್ರಯತ್ನಗಳಿಗೆ ಸ್ವತಃ ಸರ್ಕಾರಿ ಆಸ್ಪತ್ರೆಯೇ ತಣ್ಣೀರೆರಚುತ್ತಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಅಪಾರ ಪ್ರವಾಣದ ನೀರು ವ್ಯರ್ಥವಾಗಿ ಪೋಲಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.Bangarpet Hospital
ತಾಲೂಕು ಆಡಳಿತವು ‘ಒಂದು ಹನಿ ನೀರು ವ್ಯರ್ಥವಾಗಬಾರದು‘ ಎಂಬ ಧ್ಯೇಯದೊಂದಿಗೆ ಸಭೆ, ಅಭಿಯಾನಗಳನ್ನು ನಡೆಸುತ್ತಿದೆ. ಆದರೆ, ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಮಂಡಳಿ ವಾತ್ರ ಈ ಸೂಚನೆಗಳನ್ನು ಗಾಳಿಗೆ ತೂರಿದಂತಿದೆ. ಆಸ್ಪತ್ರೆ ಆವರಣದಲ್ಲಿರುವ ನೀರಿನ ಸಂಪ್ ತುಂಬಿ ಹೊರಚೆಲ್ಲುತ್ತಿದ್ದರೂ, ಮೋಟ್‌ರ್ ಆಫ್ ವಾಡಲು ಮುಂದಾಗದ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಅಪಾರ ಪ್ರಮಾಣದ ನೀರು ಚರಂಡಿ ಪಾಲಾಗುತ್ತಿದೆ.
ಸರ್ಕಾರಿ ವೆಚ್ಚದಲ್ಲಿ ಪೂರೈಕೆಯಾಗುವ ನೀರು ಹೀಗೆ ಮೌಲ್ಯವಿಲ್ಲದೆ ಪೋಲಾಗುತ್ತಿರುವುದನ್ನು ಕಂಡು ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಸಾರ್ವಜನಿಕರು ಆಡಳಿತ ಮಂಡಳಿಯ ವಿರುದ್ಧ ಕಿಡಿಕಾರುತ್ತಿದ್ದಾರೆ. ‘ನೀರನ್ನು ಉಳಿಸಿ ಎಂದು ಜನರಿಗೆ ಪಾಠ ವಾಡುವ ಅಧಿಕಾರಿಗಳು, ಮೊದಲು ಸರ್ಕಾರಿ ಸಂಸ್ಥೆಗಳಲ್ಲಿ ನಡೆಯುತ್ತಿರುವ ಇಂತಹ ಬೇಜವಾಬ್ದಾರಿ ಸರಿಪಡಿಸಿಕೊಳ್ಳಲಿ‘ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಾರ್ವಜನಿಕರ ಒತ್ತಾಯ: ಒಂದೆಡೆ ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದರೆ, ಮತ್ತೊಂದೆಡೆ ಸಾರ್ವಜನಿಕ ಆಸ್ಪತ್ರೆಯಲ್ಲೇ ಇಂತಹ ದುಸ್ಥಿತಿ ನಿರ್ವಾಣವಾಗಿರುವುದು ವಿಪರ್ಯಾಸ. ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನೀರು ವ್ಯರ್ಥವಾಗದಂತೆ ಸೂಕ್ತ ತಾಂತ್ರಿಕ ಕ್ರಮಕೈಗೊಳ್ಳಬೇಕು ಹಾಗೂ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.