ಶಿವಬಸವನಗರದ ಲಿಂಗಾಯತ ಭವನದಲ್ಲಿ ಹಮ್ಮಿಕೊಂಡಿದ್ದ ಅಮಾವಾಸ್ಯೆ ಅನುಭಾವಗೋಷ್ಠಿ ಕಾರ್ಯಕ್ರಮದಲ್ಲಿ ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ಸಹಪ್ರಾಧ್ಯಾಪಕ ಡಾ.ಅವಿನಾಶ ಕವಿ ಅವರನ್ನು ಸನ್ಮಾನಿಸಲಾಯಿತು. ಗುರುಸಿದ್ಧ ಸ್ವಾಮೀಜಿ, ರತ್ನಪ್ರಭಾ ಬೆಲ್ಲದ, ಪ್ರೊ. ಜಯಶ್ರೀ ಅಬ್ಬಿಗೇರಿ, ಡಾ.ಎಚ್.ಬಿ.ರಾಜಶೇಖರ ಇತರರಿದ್ದರು.
ಬೆಳಗಾವಿ: ಹನ್ನೆರಡನೇ ಶತಮಾನದ ಶರಣರ ವಚನಗಳು ಸಮಾಜಕ್ಕೆ ನೈತಿಕ ಶಿಕ್ಷಣ ನೀಡುತ್ತವೆ ಎಂದು ಪ್ರಾಧ್ಯಾಪಕಿ ಪ್ರೊ.ಜಯಶ್ರೀ ಅಬ್ಬಿಗೇರಿ ಹೇಳಿದರು.
ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಈಚೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವತಿಯಿಂದ ಹಮ್ಮಿಕೊಂಡಿದ್ದ ಅಮಾವಾಸ್ಯೆ ಅನುಭಾವಗೋಷ್ಠಿಯಲ್ಲಿ ಮಾತನಾಡಿ, ಶರಣರ ವಚನಗಳಲ್ಲಿ ಜೀವನ ಮೌಲ್ಯ ಅಡಗಿದೆ. ಅತ್ಯಂತ ಸರಳವಾಗಿ ಬದುಕಿನ ಸೂತ್ರಗಳನ್ನು ಸೂತ್ರೀಕರಿಸಿದವರು ಶರಣರು. ಬಸವಣ್ಣನವರ ವಚನಗಳು ಮಾನವನ ಬದುಕಿಗೆ ಬಹುದೊಡ್ಡ ಕೊಡುಗೆ ಎಂದರು.
ಮಹಾಸಭೆ ಘಟಕದ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಮಹಾಸಭೆಗಳಂತಹ ರಚನಾತ್ಮಕವಾದ ಉಪನ್ಯಾಸ ಸಂಯೋಜಿಸಿ ಸಮಾಜ ಸಂಘಟಿಸುವ ಕೆಲಸ ಮಾಡುತ್ತಿದೆ ಎಂದರು. ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಮನೋಕ್ಲೇಶ ನಿವಾರಿಸುವ ಶಕ್ತಿ ವಚನಗಳಲ್ಲಿ ಅಡಗಿದೆ. ಜೀವನ ಸಂಕುಚಿತಗೊಳ್ಳುತ್ತಿದೆ.
ವಚನಗಳು ನಮಗೆ ಮನೋಔಷಧವಾಗಿವೆ. ಶುದ್ಧ ಮನಸ್ಸಿನಿಂದ ಅವುಗಳನ್ನು ಓದಿವಂತಾಗಬೇಕು. ಮಹಾಸಭೆಯ ಕಾರ್ಯ ಸ್ತುತ್ಯಾರ್ಹವೆಂದು ಶ್ಲಾಘಿಸಿದರು. ಡಾ.ಎಚ್.ಬಿ.ರಾಜಶೇಖರ, ಪ್ರಸಾದ ಹಿರೇಮಠ, ಬಾಲಚಂದ್ರ ಬಾಗಿ, ವೈ.ಬಿ.ಮೆಣಸಿನಕಾಯಿ, ವಿ.ಕೆ.ಪಾಟೀಲ, ವಿದ್ಯಾ ಹುಂಡೇಕರ, ಸರೋಜನಿ ನಿಶಾನದಾರ, ಜ್ಯೋತಿ ಬಾದಾಮಿ, ಡಾ.ಗುರುದೇವಿ ಹುಲೆಪ್ಪನವರಮಠ, ಶೈಲಜಾ ಭಿಂಗೆ, ಶೈಲಜಾ ಸಂಸುದ್ದಿ, ಮಹಾದೇವಿ ಪಾಟೀಲ, ಸೋಮಲಿಂಗ ಮಾವಿನಕಟ್ಟಿ, ಎ.ಬಿ.ಮಡಿವಾಳರ ಇತರರಿದ್ದರು.