ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ಗುರುದೇವಾಶ್ರಮದಲ್ಲಿ ಆಯೋಜಿಸಿದ್ದ ‘ಮೈಗೂರಿನ ಪವಾಡ ಪುರುಷ’ ಪೌರಾಣಿಕ ನಾಟಕ ಕಾರ್ಯಕ್ರಮವನ್ನು ಹಿರಿಯ ನಟ ಶ್ರೀಧರ್ ಉದ್ಘಾಟಿಸಿದರು. ನಟಿಯರಾದ ಅನು ಪ್ರಭಾಕರ್, ಭವ್ಯಾ, ಶಾಸಕ ನಾಡೋಜ ಜಗದೀಶ ಗುಡಗುಂಟಿ, ಸಾಹಿತಿ ಪ್ರಕಾಶ ಮಠಪತಿ ಇತರರಿದ್ದರು. 
ರಾಜ್ಯ

ಸತ್ಪುರುಷರಿಂದ ಬದುಕು ಸಾರ್ಥಕ

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಚಲನಚಿತ್ರ ನಟ ಶ್ರೀಧರ್ ಹೇಳಿಕೆ
  • ಮೈಗೂರಿನಲ್ಲಿ ಪವಾಡ ಪುರುಷ ನಾಟಕ ಪ್ರದರ್ಶನ
ಜಮಖಂಡಿ: ಸತ್ಪುರುಷರ ಆಶೀರ್ವಾದ ಮತ್ತು ಅವರ ಒಡನಾಟದಿಂದ ಮಾನವ ಬದುಕು ಸಾರ್ಥಕವಾಗುತ್ತದೆ ಎಂದು ಹಿರಿಯ ಚಿತ್ರನಟ ಶ್ರೀಧರ್ ಅಭಿಪ್ರಾಯಪಟ್ಟರು.
ತಾಲೂಕಿನ ಮೈಗೂರ ಗ್ರಾಮದ ಗುರುದೇವಾಶ್ರಮದಲ್ಲಿ ಶಿವಾನಂದ ಮಠದ ಜಾತ್ರಾ ಮಹೋತ್ಸವ ಹಾಗೂ ಲಿ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅವರ ಪುಣ್ಯಾರಾಧನೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ‘ಮೈಗೂರ ಪವಾಡ ಪುರುಷ’ ಪೌರಾಣಿಕ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಕ್ತಿಯಿಂದ ಪ್ರಾರ್ಥಿಸಿದವರಿಗೆ ದೇವರು ಕೆಲವೊಮ್ಮೆ ವಿಳಂಬವಾಗಿ ಲ ನೀಡಬಹುದು. ಆದರೆ ಸದ್ಗುರುಗಳು ಭಕ್ತರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಶಕ್ತಿ ಹೊಂದಿದ್ದಾರೆ. ಮನುಷ್ಯ ಜನ್ಮವೇ ಮಹಾಪುಣ್ಯವಾಗಿದ್ದು, ಸತ್ಪುರುಷರ ಸಾನ್ನಿಧ್ಯ ಸಿಗುವುದು ಜೀವನದ ಮಹತ್ವದ ಅವಕಾಶ ಎಂದು ಹೇಳಿದರು.
ಹಿರಿಯ ನಟಿಯರಾದ ಅನು ಪ್ರಭಾಕರ್ ಹಾಗೂ ಭವ್ಯಾ ಮಾತನಾಡಿ, ಪವಾಡ ಪುರುಷರು ನಡೆದಾಡಿದ ನೆಲವೇ ಪುಣ್ಯಕ್ಷೇತ್ರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ಭಾರತವು ವೈವಿಧ್ಯತೆಯಲ್ಲಿಯೇ ಏಕತೆ ಹೊಂದಿದ ದೇಶವಾಗಿದ್ದು, ಆಧ್ಯಾತ್ಮಿಕ ಚಿಂತನೆಗಳು ಸಮಾಜದಲ್ಲಿ ಶಾಂತಿ ನೆಲೆಸಲು ಪ್ರಮುಖ ಕಾರಣವಾಗಿವೆ ಎಂದರು.
ಶ್ರೀ ಮಠದ ಗುರುಪ್ರಸಾದ ಸ್ವಾಮೀಜಿ, ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಸ್ವಾಮೀಜಿ ಹಾಗೂ ಬಾಲ್ಕಿಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಗ್ರಾಮದ ಹಿರಿಯ ಪರಪ್ಪ ಕಕಮರಿ ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರಿನ ಪಿಎಸ್‌ಐ ಕುಮಾರ ಮೂಕನವರ, ಮಲ್ಲು ಬಿ. ಪಾಟೀಲ, ಸಂಜು ಖೋತ, ಮುತ್ತಣ್ಣ ಮೂಕನವರ, ಭೂಪಾಲ ಸದಲಗಿ, ರಾಜೇಶ್ವರಿ ಹಿರೇಮಠ, ರಾಮ ಅಂಬಿ, ಅಡವಯ್ಯ ಹಿರೇಮಠ, ಮಹಾದೇವ ಭೀಮನಹಳ್ಳಿ, ಧರನೇಶ ನ್ಯಾಮಗೌಡ, ಶಿವಪ್ರಭು ಭೀಮನಹಳ್ಳಿ, ಸಂಗೊಳ್ಳಿ ಮಠಪತಿ ಇತರರಿದ್ದರು.
ಶಿಕ್ಷಕ ಅಪ್ಪು ಅಂಬಿ ಸ್ವಾಗತಿಸಿದರು, ಎಂ.ಡಿ. ತೇಲಸಂಗ ನಿರೂಪಿಸಿದರು.
"

ಮನಸೂರೆಗೊಂಡ ನಾಟಕ

ಬಳ್ಳಾರಿ ಜಿಲ್ಲೆಯ ಶಿರಗೇರಿಯ ದಾತ್ರಿ ತಂಡ ಪ್ರದರ್ಶಿಸಿದ, ಶಿಶುಕವಿ ಪ್ರಕಾಶ ಮಠಪತಿ ರಚನೆಯ ಮೈಗೂರ ಪವಾಡ ಪುರುಷ ನಾಟಕವು ಭಕ್ತರ ಮನಗೆದ್ದಿತು. ಲಿ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ಜೀವನಾಧಾರಿತ ಈ ನಾಟಕ ಭಕ್ತಿ ಭಾವನೆಗೆ ಪ್ರೇರಣೆ ನೀಡಿತು.