ಕೊಟ್ಟೂರಿನಲ್ಲಿ ಹಮ್ಮಿಕೊಂಡಿದ್ದ ಚಿಕ್ಕೇನಕೊಪ್ಪ ಚನ್ನವೀರ ಶರಣರ 31ನೇ ಸ್ಮರಣೋತ್ಸವ ಕಾರ್ಯಕ್ರಮವನ್ನು ಕೊಟ್ಟೂರು ಕಟ್ಟೆಮನಿ ಹಿರೇಮಠದ ಯೋಗಿರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಹೂವಿನಹಡಗಲಿ ಗವಿಮಠದ ಹಿರಿಯ ಶಾಂತವೀರ ಸ್ವಾಮೀಜಿ, ಶಿಕ್ಷಕರಾದ ಟಿ.ಕೆ.ಸಿದ್ಧರಾಮೇಶ್ವರ, ಹೊಂಬಾಳೆ ಮಂಜುನಾಥ ಇದ್ದರು. 
ರಾಜ್ಯ

ಶರಣರ ಮಾರ್ಗದಲ್ಲಿ ನಡೆದರೆ ಜೀವನ ಪಾವನ

ಕೊಟ್ಟೂರು: ಭಾರತೀಯ ಕುಟುಂಬ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದೆ ಎಂದು ಕೊಟ್ಟೂರು ಕಟ್ಟೆಮನಿ ಹಿರೇಮಠದ ಯೋಗಿರಾಜೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಚಿಕ್ಕೇನಕೊಪ್ಪ ಶರಣರ ಬಳಗದಿಂದ ಭಾನುವಾರ ಆಯೋಜಿಸಿದ್ದ ಚಿಕ್ಕೇನಕೊಪ್ಪ ಚನ್ನವೀರ ಶರಣರ 31ನೇ ಸ್ಮರಣೋತ್ಸವ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೇಮರಡ್ಡಿ ಮಲ್ಲಮ್ಮ, ಸಜ್ಜಲಗುಡ್ಡದ ಶರಣಮ್ಮ, ಶರಣೆ ಅಕ್ಕಮಹಾದೇವಿ ಅವರ ಮಾರ್ಗದಲ್ಲಿ ಇಂದಿನ ಸ್ತ್ರೀಯರು ನಡೆಯಬೇಕು ಎಂದರು.
ಕಾರ್ಯದರ್ಶಿ ದೇವರಮನಿ ಕರಿಯಪ್ಪ, ಶಿಕ್ಷಕರಾದ ಟಿ.ಕೆ ಸಿದ್ಧರಾಮೇಶ್ವರ, ಹೊಂಬಾಳೆ ಮಂಜುನಾಥ, ಮತ್ತಿಹಳ್ಳಿ ನಾಗರಾಜ್, ಎಚ್.ಡಿ.ಅರುಣಕುಮಾರ, ದೇವರಮನಿ ಗುರುರಾಜ, ಜಿ. ಸಿದ್ದಣ್ಣ, ದೇವರಮನಿ ಪಿನಾಕಪಾಣಿ, ಜಿ.ಮಲ್ಲಿಕಾರ್ಜುನ, ಡಿ.ಮಲ್ಲಿಕಾರ್ಜುನ, ಜಿ.ವೀರಣ್ಣ, ಕಡ್ಡಿ ಕೊಟ್ರೇಶ, ಜಿ.ಸಿ.ಶಿವಕುಮಾರ, ಕೆ.ಜೆ.ಪೂರ್ಣಿಮಾ, ಗೌರಮ್ಮ, ಅನುರಾಧಮ್ಮ, ದೇವರಮನಿ ಮಂಗಳ, ಎಸ್.ಸುರೇಶಗೌಡ, ಎಂ.ಸುಜಾತಾ, ಅಂಗಡಿ ಚಂದ್ರಣ್ಣ, ಜಂಬೂರು ಕೊಟ್ರೇಶ, ಡಿ.ಕೊಟ್ರೇಶ, ತುಪ್ಪದ ವೀರಣ್ಣ ಇತರರಿದ್ದರು.