ಬೆಣ್ಣೂರು ಗ್ರಾಮದ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವಚನ ನೀಡಿದರು. ಶ್ರೀ ಕೆಂಚವೃಷಭೇಂದ್ರ ಶಿವಾಚಾರ್ಯ, ಶ್ರೀ ಚನ್ನಬಸವ ಶಿವಾಚಾರ್ಯ, ದೊಡ್ಡಪ್ಪಗೌಡ ಪಾಟೀಲ್​, ಶಿವಶರಣಪ್ಪ ಸಾಹು ಸೀರಿ ಇತರರಿದ್ದರು. 
ರಾಜ್ಯ

ಶ್ರಮ ಸಂಸ್ಕೃತಿಯಿಂದ ಬದುಕು ಉಜ್ವಲ

ಪ್ರಮುಖ ಮುಖ್ಯಾಂಶಗಳು

  • ರಂಭಾಪುರಿ ಜಗದ್ಗುರುಗಳು ನುಡಿ
  • ಬೆಣ್ಣೂರಿನಲ್ಲಿ ಶಾಖಾ ಮಠದ ಕಟ್ಟಡ ಉದ್ಘಾಟನೆ
ಯಡ್ರಾಮಿ: ಭಗವಂತ ಎಲ್ಲರಿಗೂ ಬದುಕಿ ಬಾಳುವ ಅವಕಾಶ ಕೊಟ್ಟಿದ್ದಾನೆ. ಸಾಧನೆಯಿಂದ ಶ್ರೇಯಸ್ಸನ್ನು ಕಾಣಲು ಸಾಧ್ಯ. ಶ್ರಮ ಸಂಸತಿಯಿಂದ ಬದುಕು ಉಜ್ವಲಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಬೆಣ್ಣೂರಿನಲ್ಲಿ ಶ್ರೀಮದ್​ ರಂಭಾಪುರಿ ಶಾಖಾ ಹಿರೇಮಠದ ನೂತನ ಕಟ್ಟಡದ ಉದ್ಘಾಟನೆ, ಶಿವಲಿಂಗ ಪ್ರತಿಷ್ಠಾಪನೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿ, ಧರ್ಮ, ಅರ್ಥ, ಕಾಮ, ಮೋ ಎಂಬ ನಾಲ್ಕು ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸದಿದ್ದರೆ ಜೀವನ ವ್ಯರ್ಥವಾಗುತ್ತದೆ. ಸಂಪತ್ತು ಮತ್ತು ತನ್ನ ಬಯಕೆ ಪೂರೈಸಿಕೊಳ್ಳುವುದಷ್ಟನ್ನೇ ಮನುಷ್ಯ ಗುರಿಯಾಗಿ ಇಟ್ಟುಕೊಂಡಿದ್ದಾನೆ. ಆದರೆ ಧರ್ಮದಿಂದ ನಡೆದಾಗ ಭಗವಂತನ ದಯೆಯಿಂದ ಉಳಿದವುಗಳೆಲ್ಲವೂ ಪ್ರಾಪ್ತವಾಗುತ್ತವೆ ಎಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ದರ್ಶನದ ಆದರ್ಶ ಚಿಂತನೆಗಳನ್ನು ಬೋಧಿಸಿದ್ದಾರೆ. ಅವುಗಳನ್ನು ಅರಿತು ಆಚರಿಸಿ ಬಾಳಿದಾಗ ಜೀವನ ಸಾರ್ಥಕಗೊಳ್ಳುತ್ತದೆ. ಪ್ರವಚನ ಪ್ರವಿಣ ಶಿವಲಿಂಗಯ್ಯ ಶಾಸಿಗಳವರು ಹಳ್ಳಿಗಳಿಗೆ ಸಂಚರಿಸಿ ಭಕ್ತರಲ್ಲಿ ಜಾಗೃತಿ ಮೂಡಿಸಿ ಧರ್ಮ ಸಂಸತಿಗಳನ್ನು ಪ್ರಸಾರಪಡಿಸಿದ್ದಾರೆ. ಭಕ್ತರು ಭಕ್ತಿಯಿಂದ ಕೊಟ್ಟ ದಾನ ಧರ್ಮಗಳನ್ನು ಮಠದ ಅಭಿವೃದ್ಧಿಗೆ ಮತ್ತು ಭಕ್ತರ ಒಳಿತಿಗಾಗಿ ವಿನಿಯೋಗಿಸಿರುವುದು ಅವರಲ್ಲಿರುವಂಥ ಧರ್ಮ ನಿಷ್ಠೆ ಕಾಣಬಹುದು ಎಂದು ಶ್ಲಾಸಿದರು.
ಆಲೂರು ಹಿರೇಮಠದ ಶ್ರೀ ಕೆಂಚವೃಷಭೇಂದ್ರ ಶಿವಾಚಾರ್ಯ, ಕೆಂಭಾವಿ ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯ, ಹಿರೇಮಠದ ಶ್ರೀ ಸಿದ್ಧರಾಮಯ್ಯ ಸ್ವಾಮೀಜಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್​ ನರಿಬೋಳ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯ ಸಿದ್ದು ಸಾಹು ಅಂಗಡಿ, ಪ್ರಮುಖರಾದ ಶಿವಶರಣಪ್ಪ ಸಾಹು ಸೀರಿ, ಚಂದ್ರಶೇಖರ ಪುರಾಣಿಕ, ಅಣ್ಣಯ್ಯ ಹಿರೇಮಠ ಇತರರಿದ್ದರು.
ಶ್ರೀಮಠದಲ್ಲಿ 11 ದಿನಗಳಿಂದ ನಡೆಯುತ್ತಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಮಹಾಪುರಾಣ ಮಂಗಲವಾಯಿತು. ರಂಭಾಪುರಿ ಜಗದ್ಗುರುಗಳನ್ನು ಅಲಂಕೃತ ಸಾರೋಟದಲ್ಲಿ ಕೂರಿಸಿ ಭವ್ಯ ಮೆರವಣಿಗೆಯೊಂದಿಗೆ ಕಾರ್ಯಕ್ರಮದ ವೇದಿಕೆ ಕರೆತರಲಾಯಿತು. ಮಹಿಳೆಯರು ಕುಂಭ&ಕಳಸ ಹೊತ್ತು ಹೆಜ್ಜೆ ಹಾಕಿದರು. ಶಿವಲಿಂಗಯ್ಯ ಶಾಸಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.