ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಕಲಾ ಕಮ್ಮಟವನ್ನು ಶ್ರೀ ಡಾ.ಚನ್ನವಿರ ಶಿವಾಚಾರ್ಯ ಉದ್ಘಾಟಿಸಿದರು. ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ್​, ಮಲ್ಲಿನಾಥ ಹಿರೇಮಠ, ಚನ್ನವಿರ ಜಮಾದಾರ, ವಿಜಯಲಕ್ಷಿ$್ಮ ಚವ್ಹಾಣ್​, ಭಾರತ ಬಾಯಿ, ದಿಲೀಪ ಸ್ವಾಮಿ, ಬಸವರಾಜ ರಾಠೋಡ್​, ನಾಮದೇವ ರಾಠೋಡ್​, ಬಳಿರಾಮ ರಾಠೋಡ್​, ಕವಿತಾ ಸುನೀಲ ಇತರರಿದ್ದರು. 
ರಾಜ್ಯ

ಕಲೆಗಳಿಂದ ಜೀವನ ಸುಂದರ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಹಾರಕೂಡ ಶ್ರೀ ಅಭಿಮತ
  • ಜಿಲ್ಲಾಮಟ್ಟದ ಸಾಂಸ್ಕೃತಿಕ ಕಲಾ ಕಮ್ಮಟದ
ಬಸವಕಲ್ಯಾಣ: ಕಲೆಗಳು ಮನಸ್ಸಿಗೆ ಆನಂದ ನೀಡುವ ಜತೆಗೆ ಮನುಷ್ಯ ಜೀವನವನ್ನು ಸುಂದರಗೊಳಿಸುತ್ತವೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯ ನುಡಿದರು.
ಹಾರಕೂಡ ಶ್ರೀಮಠದಲ್ಲಿ ಜೈ ಭವಾನಿ ಕಲೆ ಮತ್ತು ಸಾಂಸತಿಕ ಮಹಿಳಾ ಸಂ ಹಾರಕೂಡ ತಾಂಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಕಲಾ ಕಮ್ಮಟದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮನುಷ್ಯನಲ್ಲಿ ಸಕ್ರೀಯವಾದ ಆಲೋಚನಾ ಶಕ್ತಿ ಮತ್ತು ಸೃಜನಶೀಲತೆ ಬೆಳೆಯಲು ಕಲೆ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಶಿಲ್ಪ ಕಲೆ, ಚಿತ್ರಕಲೆ, ಸಂಗೀತ ನೃತ್ಯ, ಗಾಯನ, ವಾದ್ಯ ನುಡಿಸುವುದು ಹೀಗೆ ಅನೇಕ ಬಗೆಯ ಕಲೆಗಳು ಮನುಷ್ಯ ಜೀವನವನ್ನುಸುಂದರಗೊಳಿಸಲು ಸಹಕಾರಿಯಾಗಿವೆ. ಜಿಲ್ಲಾ ಮಟ್ಟದ ಸಾಂಸತಿಕ ಕಲಾ ಕಮ್ಮಟ, ನಮ್ಮ ಸಂಸ್ಕೃತಿಯ ಭವ್ಯ ಚಿತ್ರಣವನ್ನು ಸಮಾಜಕ್ಕೆ ಮುಟ್ಟಿಸುವಲ್ಲಿ ಯಶಸ್ವಿ ಹೆಜ್ಜೆ ಇಡುವಂತಾಗಲಿ, ಎಲ್ಲರಲ್ಲಿಯೂ ಕಲಾತ್ಮಕ ಬದುಕಿನ ಸಾಂಸತಿಕ ಪ್ರೆ ಮೂಡುವಂತಾಗಲಿ ಎಂದು ಶುಭ ಹಾರೈಸಿದರು.
ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ್​, ಮಲ್ಲಿನಾಥ ಹಿರೇಮಠ, ಚನ್ನವಿರ ಜಮಾದಾರ, ಧನಸಿಂಗ ರಾಠೋಡ್​, ಭಾರತ ಬಾಯಿ, ಬಸವರಾಜ ರಾಠೋಡ್​, ನಾಮದೇವ ರಾಠೋಡ್​, ದಿಲೀಪ ಸ್ವಾಮಿ, ಲಕ್ಷ$್ಮಣ ಚವ್ಹಾಣ್​, ಕವಿತಾ ಸುನೀಲ ಇತರರಿದ್ದರು, ವಿಜಯಲಕ್ಷಿ$್ಮ ಚವ್ಹಾಣ್​ ಸ್ವಾಗತಿಸಿದರು. ಪ್ರೇಮಸಿಂಗ್​ ಚವ್ಹಾಣ್​ ನಿರೂಪಣೆ ಮಾಡಿದರು. ರಾಜಶ್ರೀ ದಿಲೀಪ ಕುಮಾರಸ್ವಾಮಿ ಪ್ರಾರ್ಥನಾ ಗೀತೆ, ಶ್ರೇಯಾ ಸುನೀಲ ನಾಡಗೀತೆ ಹಾಡಿದರು. ಬಂಜಾರ ನೃತ್ಯ, ಬಂಜಾರ ಭಜನೆ, ತಮಟೆ ವಾದನ, ಹುಲಿಕುಣಿತ, ಮಹಿಳೆಯರಿಂದ ಡೊಳ್ಳು ಕುಣಿತ, ಕೋಲಾಟ ಪ್ರದರ್ಶಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಬಂಜಾರ ನೃತ್ಯದೊಂದಿಗೆ ಹಾರಕೂಡ ಪೂಜ್ಯರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು.