ಭಾಲ್ಕಿ ತಾಲೂಕಿನ ಕರಡ್ಯಾಳ ಗ್ರಾಮದಲ್ಲಿ ಆಯೋಜಿಸಿದ್ದ ನಮ್ಮೂರು ಶ್ರಾವಣ ಸಂಭ್ರಮ ಪ್ರವಚನ ಪುಟಾಣಿ ಮಕ್ಕಳು ಉದ್ಘಾಟಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು ಇತರರಿ 
ರಾಜ್ಯ

ನಡೆ ನುಡಿ ಒಂದಾದರೇ ಬದುಕು ಸುಂದರ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗುರುಬಸವ ಪಟ್ಟದ್ದೇವರು ನುಡಿ
  • ಕರಡ್ಯಾಳದಲ್ಲಿ ಶ್ರಾವಣ ಸಂಭ್ರಮ
ಭಾಲ್ಕಿ: ಮನುಷ್ಯ ಜೀವನದಲ್ಲಿ ನಡೆ ನುಡಿ ಒಂದಾಗಿಸಿಕೊಂಡರೆ ಬದುಕು ಸುಂದರವಾಗಿ ರೂಪಗೊಳ್ಳಲಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.
ತಾಲೂಕಿನ ಕರಡ್ಯಾಳ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬುದು ಬಸವಣ್ಣನವರ ಪ್ರಸಿದ್ಧ ವಚನದ ನುಡಿಯಾಗಿದೆ. ಒಳ್ಳೆಯ ನಡವಳಿಕೆ, ಸತ್ಸಂಪ್ರದಾಯ ಮತ್ತು ಸತ್ಯದ ಹಾದಿಯಲ್ಲಿ ನಡೆಯುವುದೇ ಸ್ವರ್ಗದ ಸುಖ. ಕೆಟ್ಟ ನಡವಳಿಕೆ ಹಾಗೂ ಸುಳ್ಳು ಅನಾಚಾರಗಳು ನರಕದಂತೆ ಜೀವನವನ್ನು ದು@ಖಮಯವಾಗಿಸುತ್ತವೆ. ಒಳ್ಳೆಯ ಆಚಾರ-ವಿಚಾರಗಳು ಮನುಷ್ಯನಿಗೆ ನೆಮ್ಮದಿ ಮತ್ತು ಗೌರವ ತರುತ್ತವೆ. ಶ್ರಾವಣ ಮಾಸದಲ್ಲಿ ಆಲಿಸಿದ ಶರಣರ, ಮಹಾತ್ಮರ ವಾಣಿಯನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮದ ಪುಟಾಣಿ ಮಕ್ಕಳು ಬಸವ ಗುರುವಿನ ಪೂಜೆ ನೆರವೇರಿಸಿ, ವಚನ ಪಠಣದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿ ವಂದಿಸಿದರು.

ಗಮನ ಸೆಳೆದ ಜೈ ಜವಾನ ಪ್ರದರ್ಶನ

ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಪ್ರದರ್ಶನ ಜೈ ಜವಾನ ಕಿರು ನಾಟಕ ಪ್ರದರ್ಶನ ನೆರೆದ ಭಕ್ತರಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿತು. ಬಾಗಲಕೋಟ ಜಿಲ್ಲೆಯ ಗ್ರಾಮವೊಂದರ ನೈಜ ಘಟನೆ ಆಧಾರಿತ ಈ ಕಿರು ನಾಟಕದಲ್ಲಿ ಚನ್ನಬಸವೇಶ್ವರ ಗುರುಕುಲದ ಶಿಕ್ಷಕರು ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿ, ಗಮನ ಸೆಳೆದರು.