ಖಾನಾಪುರದ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ವಿಭಾಗದ ಎಡಿಜಿಪಿ ದೇವಜ್ಯೋತಿ ರೇ ಪ್ರಶಿಕ್ಷಣಾರ್ಥಿಗಳಿಂದ ಗೌರವವಂದನೆ ಸ್ವೀಕರಿಸಿದರು.
ವಿಜಯವಾಣಿ ಸುದ್ದಿಜಾಲ ಖಾನಾಪುರ
ಹೆಜ್ಜೆಹೆಜ್ಜೆಗೂ ಸವಾಲುಗಳಿಂದ ಕೂಡಿರುವ ಪೊಲೀಸ್ ಸೇವೆ ನಿಜವಾದ ಜೀವನ ಶಿಣ ನೀಡುತ್ತದೆ ಎಂದು ಪೊಲೀಸ್ ತರಬೇತಿ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದೇವಜ್ಯೋತಿ ರೇ ಅಭಿಪ್ರಾಯಪಟ್ಟರು.
ಪಟ್ಟಣದ ಪೊಲೀಸ್ ತರಬೇತಿ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 4ನೇ ಬ್ಯಾಚ್ ಟಿಕೋತ್ಸವ ಹಾಗೂ ನಿರ್ಗಮನ ಪಥಸಂಚಲನದಲ್ಲಿ ಅವರು ಮಾತನಾಡಿ, ಜಗತ್ತು ನಿದ್ರಿಸುವ ಸಮಯದಲ್ಲಿ ಪೊಲೀಸರು ಎಚ್ಚರವಾಗಿರುತ್ತಾರೆ. ಎಲ್ಲರೂ ಹಬ್ಬಗಳನ್ನು ಆಚರಿಸುತ್ತಿರುವಾಗ ಪೊಲೀಸರು ಭದ್ರತೆಯ ಜವಾಬ್ದಾರಿ ನಿರ್ವಹಿಸುತ್ತಾರೆ. ಜನರಲ್ಲಿ ಕಾನೂನು ಅರಿವು ಮೂಡಿಸಿ, ಸಮಾಜದಲ್ಲಿ ಶಾಂತಿ&ಸುವ್ಯವಸ್ಥೆ ಕಾಪಾಡುತ್ತಾರೆ ಎಂದು ಹೇಳಿದರು.
ಲಾಂತರ ಯುವಕರು ಪೊಲೀಸ್ ಸೇವೆಯ ಕನಸು ಕಾಣುತ್ತಾರೆ. ಅವರಲ್ಲಿ ಕೆಲವರು ಮಾತ್ರ ಕನಸು ನನಸಾಗಿಸಿಕೊಳ್ಳುವಲ್ಲಿ ಸಲರಾಗುತ್ತಾರೆ. ನೀವು ಅವರಲ್ಲಿ ಒಬ್ಬರಾಗಿರುವುದಕ್ಕೆ ಹೆಮ್ಮೆಪಡಿ. ಇಲಾಖೆಯಲ್ಲಿ ಶಿಸ್ತು, ಸ್ಥಿರತೆಗೆ ಆದ್ಯತೆ ಇದೆ. ತರಬೇತಿ ಸಮಯದಲ್ಲಿ, ರೂಢಿಸಿಕೊಂಡಿರುವ ಕೌಶಲ ಮತ್ತು ತಂತ್ರ ಸೇವೆಯ ಸಮಯದಲ್ಲಿ ಬಳಸಿಕೊಂಡು ವೃತ್ತಿಯಲ್ಲಿ ಯಶ ಕಾಣಬೇಕು ಎಂದರು.
ಪ್ರಾಂಶುಪಾಲ ಎಂ.ಎಂ.ಯಾದವಾಡ ವರದಿವಾಚಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ಸಿಆರ್ಪಿಎ್ ಕೋಬ್ರಾ ತರಬೇತಿ ಕೇಂದ್ರದ ಡಿಐಜಿ ರವೀಂದ್ರ ಆರ್., ಎಸ್ಪಿ ಕೆ.ರಾಮರಾಜನ್, ನಿವತ್ತ ಪ್ರಾಂಶುಪಾಲ ಅಮಸಿದ್ಧ ಗೋಂಧಳಿ, ಬೆಲಹೊಂಗಲ ಡಿವೆಎಸ್ಪಿ ವೀರಯ್ಯ ಮಠಪತಿ, ಖಾನಾಪುರ ಠಾಣೆ ಪಿಐ ಎಲ್.ಎಚ್.ಗೌಂಡಿ, ಕವಾಯತು ಇನ್ಸ್ಸ್ಪೆಕ್ಟರ್ ಗಣಪತಿ ಕೊಗನೋಳಿ ಉಪಸ್ಥಿತರಿದ್ದರು. ಡಿವೈಎಸ್ಪಿ ನೀಲಪ್ಪ ಕೋಳೇಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಂಗಪ್ಪ ಸ್ವಾಗತಿಸಿ, ಕಷ್ಣವೇಣಿ ಗುರ್ಲಹೊಸೂರ ಮತ್ತು
ಬಿ.ಎಚ್.ಭಜಂತ್ರಿ ನಿರೂಪಿಸಿ, ಎನ್.ಎಂ.ಓಲೆಕಾರ ವಂದಿಸಿದರು. ತರಬೇತಿ ಪಡೆದ 345 ಪ್ರಶಿಣಾರ್ಥಿಗಳು ಆಕರ್ಷಕ ಪಥಸಂಚಲನದ ಮೂಲಕ ಗಮನಸೆಳೆದರು. ಅಧಿಕಾರಿಗಳು ಮತ್ತು ಪ್ರಶಿಣಾರ್ಥಿಗಳು ಕನ್ನಡ ಭಾಷೆಯಲ್ಲಿ ಅಪ್ಪಣೆಗಳನ್ನು ಮಂಡಿಸಿದ್ದು ವಿಶೇಷವಾಗಿತ್ತು. ಕೆಎಸ್ಆರ್ಪಿ ಬಟಾಲಿಯನ್ ವಾದ್ಯವಂದ ಪಥಸಂಚಲನಕ್ಕೆ ವಾದ್ಯ ಹಿನ್ನೆಲೆ
ಒದಗಿಸಿತು. ತರಬೇತಿಯಲ್ಲಿ ಉತ್ತಮ ಸಾಧನೆಗೈದ ಪ್ರಶಿಣಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ದಿನೇಶಕುಮಾರ ಎಸ್. ಸವೋರ್ತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ಪಡೆದರು.