ಗೋಗಿಯ ಜ್ಞಾನಯೋಗ ಮಂದಿರದಲ್ಲಿ ಗುರುಪೂರ್ಣಿಮೆ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸೊನ್ನ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಡಾ.ರುದ್ರಮುನಿ ಶಿವಾಚಾರ್ಯ, ರೇವಣಸಿದ್ಧ ಹೂಗಾರ, ಸಂಗಮೇಶ್ವರ ನೀಲಾ, ಮಧುಕರ ಭಾಸುತ್ಕರ, ಗೌಡಪ್ಪಗೌಡ ಪರಿವಾಣ ಇತರರಿದ್ದರು.
- ಡಾ.ಶಿವಾನಂದ ಸ್ವಾಮೀಜಿ ಅಭಿಮತ
- ಗೋಗಿಯಲ್ಲಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ
ಗೋಗಿ : ನಿಜಗುಣ ಶಿವಯೋಗಿಗಳ ವಚನಗಳ ಸಾರ ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗಲಿದೆ ಎಂದು ಸೊನ್ನ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ಇಲ್ಲಿನ e್ಞÁನಯೋಗ ಮಂದಿರದಲ್ಲಿ ಗುರುಪೂರ್ಣಿಮೆ ನಿಮಿತ್ತ ಜಯಗುರುದೇವ ಮಹಾಸ್ವಾಮೀಜಿಗಳು ಆಯೋಜಿಸಿದ್ದ ಐದು ದಿನಗಳ ಆಧ್ಯಾತ್ಮಿಕ ಪ್ರವಚನ ಮಾಲಿಕೆಯ ಮೂರನೇ ದಿನದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ನಿಜಗುಣ ಶಿವಯೋಗಿಗಳ ವಚನ ಮಾನವನ ಆತ್ಮಸಾಕ್ಷಾತ್ಕಾರದ ಮಾರ್ಗ ತೋರಿಸುವ ದಿವ್ಯ ಸಂದೇಶವಾಗಿದೆ ಎಂದು ಹೇಳಿದರು.
ಮಾನವನು ತನ್ನ ದೇಹ, ಸಂಪತ್ತು, ಅಽಕಾರ ಮತ್ತು ಸಂಬAಧಗಳ ಮೂಲಕ ಗುರುತಿಸಿಕೊಳ್ಳದೆ ನಾನು ಯಾರು ಎಂಬ ಆತ್ಮವಿಚಾರವನ್ನು ಮಾಡಬೇಕು. ಇದೇ ನಿಜವಾದ e್ಞÁನದ ಆರಂಭವಾಗಿದೆ. ಆತ್ಮವಿಚಾರದ ಮೂಲಕ ಅಹಂಕಾರ, ಮಮಕಾರ, ಕಾಮ, ಕ್ರೋಧ, ಲೋಭ ಹಾಗೂ ಮೋಹದಂತಹ ದುರ್ಗುಣಗಳು ದೂರವಾಗಿ ಮನಸ್ಸು ನಿರ್ಮಲವಾಗುತ್ತದೆ. ಆಗ ಜೀವನ ಶಿವಸ್ವರೂಪವನ್ನು ಅನುಭವಿಸುವ ಸ್ಥಿತಿಗೆ ತಲುಪುತ್ತದೆ ಎಂದರು.
ಸೂಗೂರ ಹಿರೇಮಠದ ಶ್ರೀ ಡಾ.ಚನ್ನರುದ್ರಮುನಿ ಶಿವಾಚಾರ್ಯ ಮಾತನಾಡಿ, ಇಂದಿನ ಯಾಂತ್ರಿಕ ಜೀವನದಲ್ಲಿ ಮನುಷ್ಯ ಹೊರಗಿನ ಸುಖದ ಹಿಂದೆ ಓಡುತ್ತಿರುವುದರಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿz್ದÁನೆ. ಆತ್ಮಚಿಂತನೆ, ಸತ್ಸಂಗ ಮತ್ತು ಸದಾಚಾರದಿಂದ ಮಾತ್ರ ಶಾಶ್ವತ ಶಾಂತಿ ಹಾಗೂ ಆನಂದ ಪಡೆಯಲು ಸಾಧ್ಯ ಎಂದರು. ರೇವಣಸಿದ್ಧ ಹೂಗಾರ, ಸಂಗಮೇಶ್ವರ ನೀಲಾ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮಧುಕರ ಭಾಸುತ್ಕರ ನಿರೂಪಿಸಿದರು. ಗೌಡಪ್ಪಗೌಡ ಪರಿವಾಣ ಸ್ವಾಗತಿಸಿದರು.