ಶ್ರಾವಣ ನಿಮಿತ್ತ ಮಳಖೇಡದ ಕಾರ್ತಿಕೇಶ್ವರ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮವನ್ನು ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ ಪುರಾಣಿಕ ಉದ್ಘಾಟಿಸಿದರು. ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ, ವೀರಣ್ಣ ಸಜ್ಜನಶೆಟ್ಟಿ, ದಿನೇಶ ಸಣ್ಣೂರ, ದೇವೇಂದ್ರಪ್ಪ ಹಳಿಜೋಳ, ಸಂದೀಪ ಸಂಗಾವಿ ಇತರರಿದ್ದರು.
- ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ನುಡಿ
- ಮಳಖೇಡದಲ್ಲಿ ಸಿದ್ಧಾಂತ ಶಿಖಾಮಣಿ ಪ್ರವಚನ
ಮಳಖೇಡ: ಪವಿತ್ರ ಶ್ರಾವಣ ಮಾಸದಲ್ಲಿ ಪರಮಾತ್ಮನ್ನು ಭಕ್ತಿಯಿಂದ ಆರಾಧಿಸಿದರೆ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಕಾರ್ತಿಕೇಶ್ವರ ಮಠದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ನುಡಿದರು.
ಶ್ರೀ ಕಾರ್ತಿಕೇಶ್ವರ ಮಠದಲ್ಲಿ ಶ್ರಾವಣ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದ ಅವರು, 84 ಲಕ್ಷ ಜೀವರಾಶಿಗಳಲ್ಲಿ ಮಾನವ ಜನ್ಮ ಸರ್ವಶ್ರೇಷ್ಠವಾಗಿದೆ. ಅದನ್ನು ಹಾಳು ಮಾಡಿಕೊಳ್ಳದೆ ಸಾರ್ಥಕಪಡಿಸಿಕೊಂಡು ಬಹಿರಂಗ ಬದುಕಿಗೆ ವಿದಾಯ ಹೇಳಬೇಕು. ಅಂತರಂಗ ಶುದ್ಧ ಮಾಡಿಕೊಂಡಾಗಲೇ ನಿಜಾನಂದ ದೊರಕಲು ಸಾಧ್ಯ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ ಪುರಾಣಿಕ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಮುಖರಾದ ವೀರಣ್ಣ ಸಜ್ಜನಶೆಟ್ಟಿ, ದಿನೇಶ ಸಣ್ಣೂರ, ದೇವೇಂದ್ರಪ್ಪ ಹಳಿಜೋಳ, ಸಂದೀಪ ಸಂಗಾವಿ, ಶರಣು ಅವಂಟಿ, ಕಲ್ಯಾಣಯ್ಯ ಪುರಾಣಿಕ, ದೇವಾನಂದ ದೇಸಾಯಿ, ಶರಣಯ್ಯ ಸ್ಥಾವರಮಠ, ರವಿಕುಮಾರ ತೇಗಲತಿಪ್ಪಿ, ದೇವಾನಂದ ಪುರಾಣಿಕ, ಡಾ.ವಿನೋದ ಸಂಗಾವಿ, ಲಿಂಗರಾಜ ತಳಕಿನ, ಮಲಕಣ್ಣ ದಂಡೋತಿ, ಶ್ರೀಶೈಲ ಸಜ್ಜನಶೆಟ್ಟಿ, ರಾಮಲಿಂಗಯ್ಯ ಹಿರೇಮಠ, ಸಿದ್ದು ಪಾಟೀಲ್ ಕೆಸರಟಗಿ, ಬಸವರಾಜ ದಂಡಿ, ಶರಣು ಗುಂಡಿ, ಅಭಿಷೇಕ ಬಜಾರ, ವಿಜಯಕುಮಾರ ರೆಡ್ಡಿ ಇತರರಿದ್ದರು.