ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಮನುಷ್ಯನಬದುಕಿನ ಪರಿಪೂರ್ಣತೆಗೆ ಜ್ಞಾನಮತ್ತು ಕರ್ಮಗಳೆರಡು ಅವಶ್ಯಕವಾಗಿದ್ದು,ಇವುಗಳಿಂದಮೋಕ್ಷ ಲಭ್ಯವಾಗಲಿದೆ ಎಂದುಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮಪಂಡಿತಾರಾಧ್ಯ ಭಗವತ್ಪಾದರುಅಭಿಪ್ರಾಯಿಸಿದ್ದಾರೆ.
ವಿಜಯನಗರದಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿರುವ ಇಷ್ಟಲಿಂಗ ಮಹಾಪೂಜೆನೆರವೇರಿಸಿ ಆಶೀರ್ವಚನ ನೀಡಿದರು.
ಜಗತ್ತಿನಲ್ಲಿಒಂದೊಂದು ಸಿದ್ಧಾಂತಗಳು ಒಂದೊಂದುರೀತಿ ಮೋಕ್ಷದ ಮಾರ್ಗವನ್ನುಹೇಳಿವೆ.ಕೇವಲಜ್ಞಾನದಿಂದ ಮುಕ್ತಿ,ಕರ್ಮದಿಂದಮಾತ್ರ ಮೋಕ್ಷ ಪ್ರಾಪ್ತಿ ಎಂದುಕೆಲವು ಸಿದ್ಧಾಂತಗಳು ಪ್ರತಿಪಾದಿಸಿವೆ.ಆದರೆವೀರಶೈವ ಸಿದ್ಧಾಂತ ಜ್ಞಾನ ಮತ್ತುಕರ್ಮ ಎರಡರಿಂದ ಮೋಕ್ಷ ಲಭಿಸುತ್ತದೆಎಂದು ಸಾರಿದೆ.ಭವಬಂಧನಗಳಿಂದದೂರಾಗಲು ಶಿವತತ್ವದ ಜ್ಞಾನವನ್ನುಅರಿತು ಆ ಶಿವತತ್ವದ ಮೂಲವಾಗಿರುವಶಿವನ ಆರಾಧನೆ ಎಂಬ ಕರ್ಮವನ್ನುಅಷ್ಟೇ ಶ್ರದ್ಧೆಯಿಂದ ಮಾಡಬೇಕು.ಶಿವನಸಾಕಾರ ರೂಪವಾದ ಇಷ್ಟಲಿಂಗ ಪೂಜೆಯಿಂದಸರ್ವ ಸಂಕಷ್ಟಗಳು ನಿವಾರಣೆಯಾಗಿಸಕಲ ಇಷ್ಟಾರ್ಥಗಳು ಈಡೇರುತ್ತವೆ.ವೀರಶೈವಲಿಂಗಾಯತರ ಮೂಲ ಧರ್ಮಾಚರಣೆಯೇಇಷ್ಟಲಿಂಗ ಧಾರಣೆ ಮತ್ತು ಅರ್ಚನೆ. ಗುರುವಿನಿಂದದೀಕ್ಷೆ ಪಡೆದು ಪಂಚಾಕ್ಷರಿಮಹಾಮಂತ್ರವನ್ನು ಜಪ ಮಾಡುವ ಮೂಲಕಶಿವನ ಸಾಕ್ಷಾತ್ಕಾರ ಪಡೆದುಕೊಳ್ಳಬೇಕು.ಇದನ್ನುಭಕ್ತರಿಗೆ ಮನವರಿಕೆ ಮಾಡಿಕೊಳ್ಳುವಉದ್ದೇಶದಿಂದಲೇ ಪ್ರತಿವರ್ಷಗುರುಪೂರ್ಣಿಮೆ ಸಂದರ್ಭದಲ್ಲಿಸಮಿತಿಯವರು ಇಷ್ಟಲಿಂಗ ಮಹಾಪೂಜೆಏರ್ಪಡಿಸುತ್ತಿದ್ದಾರೆ ಎಂದುಜಗದ್ಗುರುಗಳು ವಿವರಿಸಿದರು.
ಸಮಾರಂಭದಲ್ಲಿಕೊಟ್ಟೂರು ಚಾನುಕೋಟಿ ಮಠದಡಾ.ಸಿದ್ದಲಿಂಗಶಿವಾಚಾರ್ಯ ಸ್ವಾಮಿಗಳು,ಅಕ್ಕಿಆಲೂರುಮಠದ ಶ್ರೀಚಂದ್ರಶೇಖರ ಶಿವಾಚಾರ್ಯಸ್ವಾಮಿಗಳು,ವಿಭೂತಿಪುರ,ಶಿವಗಂಗೆಮತ್ತಿತರ ಮಠಗಳ ಶ್ರೀಗಳು,ಮಮತಾೈನಾನ್ಸ್ ಮಾಲೀಕರಾದ ಎಂ.ಮಾದಯ್ಯ,ವಿದ್ವಾನ್ಚನ್ನಬಸವಾರಾಧ್ಯರು,ನಾದಭಾಸ್ಕರಶಿವಶಂಕರ ಶಾಸಿ ಮತ್ತಿತರರುಪಾಲ್ಗೊಂಡಿದ್ದರು.