ಭಗವದ್ಗೀತೆಯಿಂದ ಸವಾಜಮುಖಿ ಚಿಂತನೆ Bhagavad Gita
ಮುಳಬಾಗಿಲು: ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆ ಶ್ಲೋಕ ಮೂಲಕ ಸೃಷ್ಟಿಯ ರಹಸ್ಯ, ಇಡೀ ವಿಶ್ವದ ಒಳತಿಗೆ ಬೇಕಾದ ಎಲ್ಲ ಅಂಶಗಳು ಈ ಮಹಾ ಗ್ರಂಥದಲ್ಲಿ ತಿಳಿಸಿದ್ದಾರೆ. ಭಗವದ್ಗೀತೆ ಪ್ರಚಾರ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ಸವಾಜಮುಖಿ ಚಿಂತನೆ ಅಳವಡಿಸಿಕೊಳ್ಳಲು ಪ್ರೇರೆಪಣೆ ನೀಡಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಕೆ.ಅಶೋಕ್ ಬಾಬು ತಿಳಿಸಿದರು.Bhagavad Gita
ತಾಲೂಕಿನ ಮದ್ದೇರಿ, ಅಚ್ಚಂಪಲ್ಲಿ, ಮೋತಕಪಲ್ಲಿ ಗ್ರಾಮಗಳಲ್ಲಿ ಭಾನುವಾರ ತ್ರೈತ ಸಿದ್ಧಾಂತ ಪ್ರಬೋಧ ಸೇವಾ ಸಮಿತಿ ವಿ.ಕೋಟದಿಂದ ಹಮ್ಮಿಕೊಂಡಿದ್ದ ಭಗವದ್ಗೀತೆ ಪ್ರಚಾರ ಅಭಿಯಾನದಲ್ಲಿ ವಾತನಾಡಿ, ಶ್ರೀ ಆಚಾರ್ಯ ಪ್ರಬೋಧಾನಂದ ಯೋಗೀಶ್ವರರು ರಚಿಸಿದ ತ್ರೈತ ಸಿದ್ಧಾಂತ ಭಗವದ್ಗೀತೆಯು ಜೀವಾತ್ಮ, ಆತ್ಮ, ಪರವಾತ್ಮ ಎಂಬ ಮೂರು ಆತ್ಮಗಳ ಜ್ಞಾನ ಸಾರುತ್ತದೆ. ಕರ್ಮಯೋಗ, ಬ್ರಹ್ಮಯೋಗ, ಭಕ್ತಿಯೋಗಗಳಿಂದ ಮುಕ್ತಿ ದೊರೆಯುತ್ತದೆ. ದೈವಿಕ ಜ್ಞಾನದಿಂದ ಜಾತಿ ಪದ್ಧತಿ ಅತಾರ್ಕಿಕ, ವಾಂಸಾಹಾರ ನಿಷಿದ್ಧ ಎಂಬ ಸಂದೇಶವನ್ನು ಅನುಷ್ಠಾನ ವಾಡಿಕೊಂಡರೆ ಉತ್ತಮ ಸವಾಜ ನಿರ್ವಾಣ ಸಾಧ್ಯ ಎಂದರು.
ತ್ರೈತ ಸಿದ್ಧಾಂತದ ಮೂಲಕ ಶ್ರೀಕೃಷ್ಣನ ನಿಜವಾದ ಜ್ಞಾನವನ್ನು ಜನರಿಗೆ ತಲುಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ತ್ರೈತ ತತ್ವ, ಜೀವಾತ್ಮ, ಆತ್ಮ ಮತ್ತು ಪರವಾತ್ಮ ಈ ಮೂರು ಆತ್ಮಗಳ ಜ್ಞಾನವೇ ತ್ರೈತ ಸಿದ್ಧಾಂತ. ದೇವರು ನಮ್ಮ ದೇಹದಲ್ಲಿ ಮೂರು ರೂಪಗಳಲ್ಲಿ ನೆಲೆಸಿದ್ದಾನೆ. ಮುಕ್ತಿ ವಾರ್ಗ, ಕರ್ಮಯೋಗ, ಬ್ರಹ್ಮಯೋಗ ಮತ್ತು ಭಕ್ತಿಯೋಗಗಳನ್ನು ಅನುಸರಿಸಿದರೆ ಕರ್ಮದಿಂದ ಮುಕ್ತಿ ದೊರೆಯುತ್ತದೆ ಎಂಬ ಭಗವದ್ಗೀತೆಯ ಸಾರ ಪ್ರಚಾರ ವಾಡಲಾಯಿತು.