ರೈಲು 
ರಾಜ್ಯ

ವಿಶ್ವಮಾನವ ಎಕ್ಸ್‌ಪ್ರೆಸ್‌ಗೆ ಎಲ್‌ಎಚ್‌ಬಿ ಬೋಗಿ ಅಳವಡಿಕೆ

ಪ್ರಮುಖ ಮುಖ್ಯಾಂಶಗಳು

  • ಈ ಪರಿಷ್ಕೃತ ವ್ಯವಸ್ಥೆಯು ಮೈಸೂರಿನಿಂದ ಏ.26ರಂದು ಮತ್ತು ಬೆಳಗಾವಿಯಿಂದ ಏ.27ರಂದು ಜಾರಿ
  • ಪ್ರಸ್ತುತ 21 ಬೋಗಿ ಹೊಂದಿರುವ ಈ ರೈಲು, ಇನ್ನು ಮುಂದೆ 20 ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚಾರ
ಮೈಸೂರು: ನೈಋತ್ಯ ರೈಲ್ವೆಯು ಮೈಸೂರು- ಬೆಳಗಾವಿ-ಮೈಸೂರು ವಿಶ್ವಮಾನವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20676/20675) ರೈಲಿನ ಹಳೆಯ ಐಸಿಎಫ್ ಬೋಗಿಗಳನ್ನು ಆಧುನಿಕ ಎಲ್‌ಎಚ್‌ಬಿ ಬೋಗಿಗಳಾಗಿ ಬದಲಾಯಿಸುತ್ತಿದೆ

. ಈ ಪರಿಷ್ಕೃತ ವ್ಯವಸ್ಥೆಯು ಮೈಸೂರಿನಿಂದ ಏ.26ರಂದು ಮತ್ತು ಬೆಳಗಾವಿಯಿಂದ ಏ.27ರಂದು ಜಾರಿಗೆ ಬರಲಿದೆ.
ಪ್ರಸ್ತುತ 21 ಬೋಗಿ ಹೊಂದಿರುವ ಈ ರೈಲು, ಇನ್ನು ಮುಂದೆ 20 ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ.
 ಇದರಲ್ಲಿ 1 ಎಸಿ ಚೇರ್ ಕಾರ್, 12 ಸಾಮಾನ್ಯ ದರ್ಜೆ ಬೋಗಿಗಳು, 5 ದ್ವಿತೀಯ ದರ್ಜೆ ಸಿಟಿಂಗ್ ಚೇರ್ ಕಾರ್ ಬೋಗಿಗಳು, 1 ಜನರೇಟರ್ ಕಾರ್ ಹಾಗೂ 1 ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್ ಒಳಗೊಂಡ ಬ್ರೇಕ್ ವ್ಯಾನ್ ಇರಲಿವೆ. ಈ ಹೊಸ ಬೋಗಿಗಳು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ, ಉತ್ತಮ ಸೌಕರ್ಯ ಮತ್ತು ಸುಧಾರಿತ ಸೌಲಭ್ಯ ಒದಗಿಸಲಿವೆ ಎಂದು ನೈಋತ್ಯ ಮೈಸೂರು ರೈಲ್ವೆ ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ.