ಚಂದರಗಿಯ ಎಸ್.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆ ಅಧ್ಯೆ ಮೃಣಾಲಿನಿ ಪಟ್ಟಣ, ಎಸ್.ಎನ್.ಅಡಗಿಮನಿ, ಜೆ.ಬಿ.ಮೇಟಿ ಇತರರಿದ್ದರು.
ಕಟಕೋಳ: ದೇಶದ ದಿಕ್ಸೂಚಿ ಸಂವಿಧಾನವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡೋಣ. ಸಂಕುಚಿತ ಭಾವನೆ ತೊಡೆದು ದೇಶದ ಪ್ರಗತಿಗೆ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಸ್ಪೋಕೋ ಸಂಸ್ಥೆ ಅಧ್ಯೆ ಮೃಣಾಲಿನಿ ಪಟ್ಟಣ ಹೇಳಿದರು. ಸಮೀಪದ ಚಂದರಗಿಯ ಎಸ್.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯಲ್ಲಿ ಸೋಮವಾರ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ಪೋಕೋ ಸಂಸ್ಥೆ ನಿರ್ದೇಶಕ ಎಸ್.ಆರ್.ನವರಕ್ಕಿ ಮಾತನಾಡಿದರು. ಎನ್ಸಿಸಿ ಅಧಿಕಾರಿ ಜೆ.ಬಿ.ಮೇಟಿ ನೇತೃತ್ವದಲ್ಲಿ 26ನೇ ಎನ್ಸಿಸಿ ಬಟಾಲಿಯನ್ ತಂಡದಿಂದ ಪಥಸಂಚಲನ ಜರುಗಿತು. ವಿದ್ಯಾರ್ಥಿ ರಮೇಶ ಗುದಗನ್ನವರ ಸಂವಿಧಾನ ಕುರಿತು ಸ್ವರಚಿತ ಕವನ
ಪ್ರಸ್ತುತಪಡಿಸಿದರು. ಸಂಸ್ಥೆ ನಿರ್ದೇಶಕ ಎಸ್.ಎನ್.ಅಡಗಿಮನಿ, ವ್ಯವಸ್ಥಾಪಕ ಜೆ.ಬಿ.ಮೇಟಿ, ಜೆ.ವಿ.ಮುರಗೋಡ, ಪ್ರಾಚಾರ್ಯರಾದ ಎಸ್.ಬಿ.ಪಾಟೀಲ, ಪಿ.ಕೆ.ಪಾಟೀಲ, ಐ.ಎಸ್.ಸೂಳಿಭಾವಿ ಇತರರಿದ್ದರು. ಶಿಕ ಓಂಕಾರ ಗೌಡರ ನಿರೂಪಿಸಿದರು. ಶಿವಾನಂದ ತೋರಣಗಟ್ಟಿ ವಂದಿಸಿದರು.