ಕೆಜಿಎಫ್​ ನಗರದ ಬೆಮೆಲ್​ ಕೇಂದ್ರೀಯ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಕನ್ನಡ ಮಿತ್ರರು ಸಂಸ್ಥೆಯ ಉಪಾಧ್ಯಕ್ಷ ಎಂ.ವಿ. Kannada ಗೋಪಾಲ್​ ಇದ್ದರು. 
ರಾಜ್ಯ

ಕನ್ನಡ ಉಳಿಸಿ, ಬೆಳೆಸುವ ಕೆಲಸವಾಗಲಿ Kannada

ಕೋಲಾರ ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ಕೆಜಿಎಫ್​ ಬೆಮೆಲ್​ ಸಂಕೀರ್ಣದ ಮುಖ್ಯಸ್ಥ ಯೋಗಾನಂದಜೀ ಹೇಳಿಕೆ
ಕೆಜಿಎಫ್​: ಕರ್ನಾಟಕದ ಸಮಗ್ರ ಚಿತ್ರಣವನ್ನು ಪ್ರಸ್ತುತಪಡಿಸುವ ಗಡಿನಾಡಿನಲ್ಲಿ ಕನ್ನಡ ಮಿತ್ರರು ಸಂಸ್ಥೆ ಹಮ್ಮಿಕೊಳ್ಳಲಾಗುವ ಎಲ್ಲ ಕಾರ್ಯಕ್ರಮಗಳಿಗೆ ಆಡಳಿತ ಮಂಡಳಿಯ ಸಹಕಾರವಿರುತ್ತದೆ ಎಂದು ಕೆಜಿಎಫ್​ ಬೆಮೆಲ್​ ಸಂಕೀರ್ಣದ ಮುಖ್ಯಸ್ಥ ಯೋಗಾನಂದಜೀ ತಿಳಿಸಿದರು.
ನಗರದ ಬೆಮೆಲ್​ ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಮಿತ್ರರು ಆಶ್ರಯದಲ್ಲಿ 70ನೇ ರಾಜ್ಯೋತ್ಸವ ಅಂಗವಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಸಾಂಸತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿ, ಕೆಜಿಎಫ್​ ಒಂದೆಡೆ ತಮಿಳು ಮತ್ತೊಂದೆಡೆ ತೆಲುಗು ಭಾಷೆಗಳನ್ನಾಡುವ ಜನರಿಂದ ಸುತ್ತುವರೆದಿದ್ದು, ಇಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕಿದ್ದು, ಈ ಕಾರ್ಯಕ್ಕೆ ಅಗತ್ಯವಾದ ನೆರವು ಮತ್ತು ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಬೆಮೆಲ್​ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಆರ್​.ಸುಬ್ರಹ್ಮಣಿ ಮಾತನಾಡಿ, ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಮಹನೀಯರನ್ನು ಈ ಸಂದರ್ಭದಲ್ಲಿ ನೆನಯುವುದು ಪ್ರತಿಯೊಬ್ಬರ ಕರ್ತವ್ಯ. Kannada ಗಡಿಭಾಗದಲ್ಲಿರುವವರು ಕಡ್ಡಾಯವಾಗಿ ತಮ್ಮ ಮನೆ ಸುತ್ತಮುತ್ತಲಿನ ಜನರೊಂದಿಗೆ ಕನ್ನಡದಲ್ಲಿ ಮಾತನಾಡಿದಲ್ಲಿ ಭಾಷೆಯನ್ನು ಪಸರಿಸುವುದು ಸಾಧ್ಯವಾಗುತ್ತದೆ ಎಂದರು.
ಕನ್ನಡ ಮಿತ್ರರು ಸಂಸ್ಥೆಯ ಅಧ್ಯಕ್ಷ ಆರ್​.ಎ.ಎಸ್​. ಪಾಟೀಲ್​ ಮಾತನಾಡಿ, ಇದೇ ಪ್ರಥಮ ಬಾರಿಗೆ ಬೆಮೆಲ್​ ಕೇಂದ್ರೀಯ ವಿದ್ಯಾಲಯದಲ್ಲಿ ರಾಜ್ಯೋತ್ಸವ ಆಚರಿಸಿದ್ದು, ಅಭಿನಂದನೀಯವಾಗಿದೆ. ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ಕನ್ನಡ ಭಾಷೆಯನ್ನು ಮಕ್ಕಳಿಗೆ ಕಲಿಸಲು ಮತ್ತು ಕನ್ನಡ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅಗತ್ಯವಾದ ನೆರವನ್ನು ಕನ್ನಡ ಮಿತ್ರರು ಸಂಸ್ಥೆಯಿಂದ ಒದಗಿಸಿಕೊಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೆ.ಸಿ. ಶಿವಪ್ಪ ಅವರನ್ನು ಸನ್ಮಾನಿಸಲಾಯಿತು.