ಯಾದಗಿರಿ ನಗರದ ಲುಂಬಿನಿ ವನದಲ್ಲಿ ಶುಕ್ರವಾರ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್​ ಜೈನ ಚಾಲನೆ ನೀಡಿದರು. ಜಿಲ್ಲಾಧಿಕಾರಿ ರಾಹುಲ್​ ತುಕರಾಮ್​ ಪಾಂಡ್ವೆ, ಜಿಪಂ ಸಿಇಒ ಲವೀಶ್​ ಒರ್ಡಿಯಾ, ಯುಡಾ ಅಧ್ಯ ಬಾಬುರಾವ ಕಾಡ್ಲೂರ್​ ಇತರರಿದ್ದರು. 
ರಾಜ್ಯ

ಪರಿಸರ ಉಳಿಸಿ ಬೆಳೆಸುವ ಕೆಲಸ ಆಗಲಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೈನ್​ ಹೇಳಿಕೆ
  • ಲುಂಬಿನಿ ವನದಲ್ಲಿ ಪರಿಸರ ದಿನಾಚರಣೆ
ಯಾದಗಿರಿ: ಪರಿಸರ ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರಿಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್​ ಜೈನ ಹೇಳಿದರು.
ವಿಶ್ವ ಪರಿಸರ ದಿನ ನಿಮಿತ್ತ ಸಾಮಾಜಿಕ ಅರಣ್ಯ ವಿಭಾಗ, ನಗರಸಭೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿಯಾಗಿ ನಗರದ ಲುಂಬಿನಿ ಉದ್ಯಾನವನದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪರಿಸರ ಉಳಿದರೆ ಅರಣ್ಯ ಸಂಪತ್ತು ಉಳಿಯುತ್ತದೆ. ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಅವುಗಳನ್ನು ಬೆಳೆಸಿದರೆ ಮಳೆ ಹೆಚ್ಚಾಗುತ್ತದೆ. ಸಕಾಲಕ್ಕೆ ಮಳೆಯಾದರೆ ಕೃಷಿ ಕಾಯಕ ಸರಳವಾಗಿ ನಡೆಯುತ್ತದೆ ಎಂದು ಹೇಳಿದರು. ಜಿಲ್ಲಾಧಿಕಾರಿ ರಾಹುಲ್​ ತುಕರಾಮ್​ ಪಾಂಡ್ವೆ ಮಾತನಾಡಿ, ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಸಿಗಳನ್ನು ನೆಡುವ ಮೂಲಕ ಹಸಿರು ಹೆಚ್ಚಿಸಬೇಕಿದೆ ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಲವೀಶ್​ ಒರ್ಡಿಯಾ ಮಾತನಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯ ಬಾಬುರಾವ ಕಾಡ್ಲೂರ್​, ಅಪರ ಜಿಲ್ಲಾಧಿಕಾರಿ ರಮೇಶ್​ ಕೋಲಾರ್​, ಸಹಾಯಕ ಆಯುಕ್ತ ಶ್ರೀಧರ್​ ಗೋಟುರ್​, ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿ ಚೇತನ ಗಸ್ತಿ, ನಗರಸಭೆ ಆಯುಕ್ತ ಉಮೇಶ್​ ಚವ್ಹಾಣ್​ ಇತರರಿದ್ದರು.