ಹೊಸಕೋಟೆ ತಾಲೂಕಿನ ಇಟ್ಟಸಂದ್ರದಲ್ಲಿ ವೇಣುಗೋಪಾಲ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಆಯೋಜಿಸಿದ್ದ ಕುರುಕ್ಷೇತ್ರ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಬಿ.ಗೋಪಾಲ್, ನರಸರಾಜು ಬಾಲಕೃಷ್ಣ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ರಮೇಶ್, ಪಾತ್ರಧಾರಿಗಳಾದ ಅಂಜನ್ಕುಮಾರ್, ಗೋಪಾಲ, ವೈದ್ಯನಾಥ, ರಘುವೀರ್, ಕೇಶವಮೂರ್ತಿ ಇದ್ದರು.
ನಂದಗುಡಿ : ವರ್ಷಗಳ ಇತಿಹಾಸ ಹೊಂದಿರುವ ರಂಗಭೂಮಿ ನಾಟಕ ಕಲೆಯ ಜತೆಗೆ ಕಲಾವಿದರಿಗೆ ನಿರಂತರವಾಗಿ ಜೀವತುಂಬುವ ಕೆಲಸ ಪ್ರೇಕ್ಷಕರಿಂದ ಆಗಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಬಿ.ಗೋಪಾಲ್ ಹೇಳಿದರು.
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಇಟ್ಟಸಂದ್ರದಲ್ಲಿ ವೇಣುಗೋಪಾಲ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಆಯೋಜಿಸಿದ್ದ ಕುರುಕ್ಷೇತ್ರ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಬೆರಳ ತುದಿಯಲ್ಲಿ ಸಾಮಾಜಿಕ, ಸಾಂಸತಿಕ, ಪೌರಾಣಿಕ ವಿಡಿಯೋ ತುಣುಕುಗಳು ಮೊಬೈಲ್ನಲ್ಲೇ ವೀಕ್ಷಿಸಲು ಸಿಗುತ್ತಿರುವುದರಿಂದ ನಾಟಕಗಳನ್ನು ರಾತ್ರಿಯಿಡಿ ಕುಳಿತು ವೀಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದರಿಂದ ಪೌರಾಣಿಕ ನಾಟಕ ಹಾಗೂ ಕಲಾವಿದರ ಬದುಕು ತೆರೆಮರೆಗೆ ಸರಿಯುತ್ತಿದೆ. ಇಂತಹ ಕಷ್ಟದ ಸ್ಥಿತಿಯಲ್ಲಿ ಕಲಾವಿದರು ಸಂಪನ್ಮೂಲವನ್ನು ಕ್ರೋಡಿಕರಿಸಿಕೊಂಡು ವೇದಿಕೆ ನಿರ್ಮಿಸಿ ಅಭಿನಯಿಸುತ್ತಾರೆ. ಪೌರಾಣಿಕ ನಾಟಕಗಳಲ್ಲಿ ಇತಿಹಾಸ ಅಡಗಿದ್ದು, ಅದನ್ನು ಬಣ್ಣ ಹಚ್ಚಿ ನಾಟಕ ಮೂಲಕ ಜನರಿಗೆ ತಿಳಿಸುವ ಕಾರ್ಯ ಕಲಾವಿದರು ಮಾಡುತ್ತಿದ್ದಾರೆ ಎಂದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ. ರಾಜಶೇಖರ್ಗೌಡ ಮಾತನಾಡಿ, ತಾಲೂಕಿನ ಹಲವು ಗ್ರಾಮಗಳಲ್ಲಿ ರಂಗಭೂಮಿ ಕಲಾವಿದರು ಕಲೆಗಾಗಿ ಜೀವನ ಮುಡಿಪಾಗಿಟ್ಟು ನಿರಂತರವಾಗಿ ಪೌರಾಣಿಕ ನಾಟಕಗಳನ್ನು ಆಯೋಜಿಸುತ್ತಿದ್ದಾರೆ. ಇಂತಹ ಕಲಾವಿದರಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಕಲಾವಿದರು ಬಣ್ಣ ಹಚ್ಚಿ ವೇದಿಕೆ ಮೇಲೆ ನಟಿಸುವ ಮೂಲಕ ಕಲೆಗೆ ಜೀವ ತುಂಬುತ್ತಿದ್ದು, ನಾಟಕ ವೀಸುವ ಮೂಲಕ ಕಲೆಗೆ, ಕಲಾವಿದರಿಗೆ ಪ್ರೋತ್ಸಾಹಸಬೇಕಿದೆ ಎಂದರು.
ಭೂ ಮಂಜೂರಾತಿ ಮಂಡಳಿ ಮಾಜಿ ಅಧ್ಯಕ್ಷ ಬಿ.ಸಿ. ಮುನಿಶಾಮೇಗೌಡ, ಗ್ರಾಪಂನ ಮಾಜಿ ಅಧ್ಯಕ್ಷರಾದ ಬಿಂದುದೇವೇಗೌಡ, ರೂಪಾಚನ್ನಕೇಶವ, ರಾಮಾಂಜಿನಪ್ಪ, ನಾಟಕ ನಿರ್ದೇಶಕ ಸಿದ್ದರಾಮಯ್ಯ, ಮುಖಂಡರಾದ ಶಿವಕುಮಾರ್, ಅಶೋಕ್, ಭೈರೇಗೌಡ, ಎಸ್.ಮಂಜುನಾಥ್ ಇದ್ದರು.