ತಲ್ಲೂರ ಗ್ರಾಮದ ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂದ ಆವರಣದಲ್ಲಿ ಸ್ವಾತಂತ್ರೊ$್ಯತ್ಸವ ಆಚರಿಸಲಾಯಿತು. ಈರಪ್ಪ ಬೆನಕಟ್ಟಿ, ಬಾಬುಗೌಡ ಅಣ್ಣಿಗೇರಿ, ನಾಗರಾಜ ಬಾರ್ಕಿ ಇತರರಿದ್ದರು.
ಹಲವು ಮಹನೀಯರ ತ್ಯಾಗದ ಪ್ರತಿಲವಾಗಿ ದೇಶ ಸ್ವಾತಂತ್ರಗೊಂಡಿದ್ದು, ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ ಪ್ರತಿಯೊಬ್ಬರ ಸ್ಮರಣೆ ಅಗತ್ಯ ಎಂದು ಪಿಕೆಪಿಎಸ್ ಉಪಾಧ್ಯ ಈರಪ್ಪ ಬೆನಕಟ್ಟಿ ಹೇಳಿದರು.
ಗ್ರಾಮದ ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶವನ್ನು ಸುಭದ್ರತೆಯೆಡೆ ಕರೆದೊಯ್ಯಲು ಎಲ್ಲರೂ ಶ್ರಮಿಸೋಣ ಎಂದರು.
ಗ್ರಾಪಂ ಮಾಜಿ ಉಪಾಧ್ಯ ಬಾಬುಗೌಡ ಅಣ್ಣಿಗೇರಿ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮಕ್ಕಳು ಸ್ವಾತಂತ್ರ ಹೋರಾಟಗಾರರ ವೇಷಭೂಷಣ ತೊಟ್ಟು ಗಮನಸೆಳೆದರು.
ನಿರ್ದೇಶಕ ನಾಗರಾಜ ಬಾರ್ಕಿ, ಅಪ್ಪಾಸಾಬ ಬಾಣದಾರ, ವೀರನಗೌಡ ಪಾಟೀಲ, ಪಂಚಪ್ಪ ಶಿವಪೂಜಿ, ಶಂಕರಗೌಡ ಪಾಟೀಲ, ನಿವತ್ತ ಮುಖ್ಯಶಿಕ ಎ.ವಿ.ಇಂಗಳೆ, ಡಿ.ಡಿ.ಭೋವಿ, ಮಾರುತಿ ಕುಲಮಗೇರಿ, ಎಸ್.ಎ್.ಮುರಗನ್ನವರ, ಚಂದ್ರಯ್ಯ ಮಾಸ್ತಮರಡಿ, ಈರಯ್ಯ ಹಿರೇಮಠ, ಅನಿಲ ಸರದಾರ, ಆರ್.ಎಚ್.ಅತ್ತಾರ, ಮಲ್ಲಿಕಾರ್ಜುನ ಕಡಬಿ ಇತರರಿದ್ದರು.