ಚಿಂಚೋಳಿ ತಾಲೂಕಿನ ಸುಲೇಪೇಟದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಹೂ ಮಾಲೆ ಹಾಕಿ ಸಂಭ್ರಮದಿಂದ ಸ್ವಾಗತಿಸಿದರು.
- ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿಕೆ
- ಸುಲೇಪೇಟದಲ್ಲಿ ಅದ್ದೂರಿ ಸ್ವಾಗತ
ಚಿಂಚೋಳಿ : ರಾಜ್ಯದ ಎಲ್ಲ ಭಾಗಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಮೂಲಸೌಲಭ್ಯ ಕಲ್ಪಿಸುವುದೇ ಪ್ರಮುಖ ಗುರಿಯಾಗಿದೆ ಎಂದು ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಸುಲೇಪೇಟದಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ. ರಸ್ತೆ, ನೀರಾವರಿ, ಆರೋಗ್ಯ ಹಾಗೂ ಶಿಣ ೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಾರ್ವಜನಿಕರ ನಿರೀೆಗಳಿಗೆ ತಕ್ಕಂತೆ ಕೆಲಸ ಮಾಡುವೆ ಎಂದರು.
ಪ್ರಮುಖರಾದ ತಾಹೇರ್ ಪಟೇಲ್, ಮೇರಾಜ ರಾಠೋಡ್, ಮಹಾರುದ್ರಪ್ಪ ದೇಸಾಯಿ, ಚಾಂದಪಾಶ ಮೋಮಿನ್, ಸುನಿಲ್ ಕೋರಿ, ಜಹೀರ್ ಪಟೇಲ್, ಶಾಮರಾವ ಮಾದೇಶಿ, ಬಾಬಣ್ಣ ಗುಲಗಂಜಿ, ರುದ್ರಶೆಟ್ಟಿ ಪಡಶೆಟ್ಟಿ, ಶಿವಕುಮಾರ ಕೊತಪೇಟ, ಶಿವಕುಮಾರ ಸಜ್ಜನ್, ರಜಾಕ್ ಪಟೇಲ್, ಸಿರಾಜ ಪಟೇಲ್, ಮಲ್ಲಿಕಾರ್ಜುನ ಗುಲಗಂಜಿ, ನಾಗಶೆಟ್ಟಿ ಕೊಟಗಿ, ಆರೀಫ್ ಮೋಮಿನ್, ರೌಫ್ ಮೋಮಿನ್, ನಾಗೇಶ ಚಾಂಗಲೇರಾ, ಪ್ರಕಾಶ ಮಂತ್ರಿ, ನಾಗೇಶ ಅವರಾದಿ, ನಸೀರ್ ಮದರಗಿ, ಮೈಹಿತಾಬ್ ಸಾಹೇಬ್ ಇತರರಿದ್ದರು.
ಬಸವೇಶ್ವರ ವೃತ್ತದ ಬಳಿ ಕ್ರೇನ್ ಮೂಲಕ ಬೃಹತ್ ಹೂ ಮಾಲೆ ಹಾಕಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮದಿಂದ ಸ್ವಾಗತಿಸಲಾಯಿತು.