ನಾಡು&ನುಡಿ ಉಳಿವಿಗೆ ಧ್ವನಿಗೂಡಿಸೋಣ kannada 
ರಾಜ್ಯ

ನಾಡು&ನುಡಿ ಉಳಿವಿಗೆ ಧ್ವನಿಗೂಡಿಸೋಣ kannada

ಪ್ರಮುಖ ಮುಖ್ಯಾಂಶಗಳು

  • ಒಂದು ದೇಶ, ಒಂದು ಭಾಷೆ, ಒಂದೇ ನೆಲ ಪರಿಕಲ್ಪನೆ ಸ್ಥಳಿಯರ ಅಳಿವಿಗೆ ಕಾರಣ
  • ಏಕ ನೀತಿ ಅಶಾಂತಿಗೆ ಕಾರಣ
ಮುಳಬಾಗಿಲು: ಕೇಂದ್ರ ಸರ್ಕಾರದ ಒಂದು ದೇಶ, ಒಂದು ಭಾಷೆ, ಒಂದೇ ನೆಲ ಪರಿಕಲ್ಪನೆ ಸ್ಥಳಿಯರ ಅಳಿವಿಗೆ ಕಾರಣವಾಗುತ್ತದೆ. ಆದ್ದರಿಂದ ಕನ್ನಡ ನಾಡು, ನುಡಿ ಉಳಿವಿಗೆ ಎಲ್ಲರೂ ಧ್ವನಿ ಎತ್ತಬೇಕಾಗಿದೆ ಎಂದು ಬಹುಜನ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಸಂಗಸಂದ್ರ ಎನ್​. ವಿಜಯಕುಮಾರ್​ ಹೇಳಿದರು. kannada
ತಾಲೂಕಿನ ಕೆ.ಬಯ್ಯಪಲ್ಲಿ ಗ್ರಾಮದಲ್ಲಿ ಬಹುಜನ ಕನ್ನಡ ರಕ್ಷಣಾ ಸೇನೆಯಿಂದ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಸೇರ್ಪಡೆ ಹಾಗೂ ರಾಜೋತ್ಸವದಲ್ಲಿ ಮಾತನಾಡಿ, ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಭಾಷವಾರು ಪ್ರಾಂತ್ಯಗಳಲ್ಲಿ ಹಲವು ರೀತಿಯ ಜನಾಂಗ, ಸಂಸ್ಕೃತಿಯವರು ಸೌಹಾರ್ದವಾಗಿ ಜೀವನ ನಡೆಸುತ್ತಿದ್ದಾರೆ. ಕೇಂದ್ರದ ಈ ನೀತಿಯಿಂದ ಅಶಾಂತಿ ಉಂಟಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡ ಬೆಳಗು ವೇದಿಕೆ ಅಧ್ಯಕ್ಷ ಅತ್ತಿಕುಂಟೆ ಎಸ್​. ಸುಬ್ರಹ್ಮಣಿ ಮಾತನಾಡಿ, ನಮ್ಮ ಹಿರಿಯರು ಕನ್ನಡ ಸಾಹಿತ್ಯ ಹಾಗೂ ನಾಡು&ನುಡಿ ಕುರಿತು ಹಲವಾರು ರೀತಿಯ ಹೋರಾಟ ಮಾಡಿದ್ದಾರೆ. ಅವರ ಹಾದಿಯಲ್ಲಿ ಕನ್ನಡ ಪರ ಸಂಘಟನೆಗಳು ಮುನ್ನಡೆಯಬೇಕಾಗಿದೆ. ಅಲ್ಲದೆ ಕನ್ನಡ ಸಾಹಿತ್ಯ ಉಳಿಸಿ ಬೆಳೆಸಬೇಕಾದರೆ ಕನ್ನಡದ ಪುಸ್ತಕಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು ಎಂದರು.
ಹಬ್ಬ ಎನ್ನುವುದು ನಾಡು, ನುಡಿ, ಸಾಹಿತ್ಯ, ಕವಿಗಳ ಕುರಿತ ಚರ್ಚೆ, ಸಂವಾದ, ಓದು, ಬರಹದ ಕುರಿತು ಆಗಬೇಕಿದೆ ಎಂದು ಹೇಳಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಮುಬಾರಕ್​, ಗುಮ್ಮಕಲ್ಲು ಗ್ರಾಪಂ ಅಧ್ಯಕ್ಷ ನವಾಜ್​ ಪಾಷ ಅವರನ್ನು ಆಯ್ಕೆಮಾಡಿ ಆದೇಶ ಪತ್ರ ವಿತರಣೆ ಮಾಡಲಾಯಿತು. ಬಹುಜನ ಕನ್ನಡ ರಕ್ಷಣಾ ಸೇನೆ ರಾಜ್ಯ ಯುವ ಅಧ್ಯಕ್ಷ ಸೈಯದ್​ ಅರ್ಬಜ್​, ಬಹುಜನ ದಸಂಸ ಜಿಲ್ಲಾ ಕಾರ್ಯದರ್ಶಿ ಕಪ್ಪಲಮಡಗು ಶಂಕರ್​, ಮುಖಂಡರಾದ ರಾದಣ್ಣ, ಕಲೀಂ, ಸುಲ್ತಾನ್​ ಇತರರು ಇದ್ದರು.