ಕಮಲನಗರದಲ್ಲಿ ತಾಲೂಕು ಆಡಳಿತ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ ಪೂಜೆ ನೆರವೇರಿಸಿದರು. ಇಒ ಹಣಮಂತರಾಯ ಕೌಟಗೆ, ಸಮಿತಿ ಅಧ್ಯಕ್ಷ ಸೂರ್ಯಕಾಂತ ಶಿವಣಕರ್, ವಿಜಯಕುಮಾರ ಕೌಡಗೆ ಇತರರಿದ್ದರು.
- ಇಒ ಹಣಮಂತರಾಯ ಕೌಟಗೆ ಕರೆ
- ಕಮಲನಗರದಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತಿ
ಕಮಲನಗರ: ಬಸವಣ್ಣನವರ ಕಾಲದಲ್ಲಿಯೇ ಅಂತರ್ಜಾತಿ ವಿವಾಹ ಪದ್ಧತಿ ಪ್ರಚಲಿತದಲ್ಲಿತ್ತು. ಅಂತರ್ಜಾತಿ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. ಇದರಿಂದಾಗಿ ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ಅಳಿದು ಸಮಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಶ್ರಮಿಸಬೇಕು ಎಂದು ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಹಣಮಂತರಾಯ ಕೌಟಗೆ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ಸೋಮವಾರ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡ ಕುಟುಂಬಗಳಿಗೆ ಸಾಮೂಹಿಕ ವಿವಾಹ ವರದಾನವಾಗಿದೆ. ಸರಳ ಶೈಲಿಯಲ್ಲಿ ವಿವಾಹವಾಗುವ ಪದ್ಧತಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಪೊ.ಎಸ್.ಎನ್.ಶಿವಣಕರ್ ಮಾತನಾಡಿ, ಜಾತ್ಯತಿತ ತತ್ವವನ್ನು ನಮ್ಮ ಸಂವಿಧಾನ ಬೋಧಿಸಿದೆ. ಇದೇ ಆಶಯವನ್ನು ವ್ಯಕ್ತಪಡಿಸಿದ ಬಸವಣ್ಣನವರು, ಜಾತಿ ಆಧಾರಿತ ಸಮಾಜ ವ್ಯವಸ್ಥೆ ಸಾಧುವಲ್ಲ ಎಂದು ಪ್ರತಿಪಾದಿಸಿದರು. ದಯವೇ ಧರ್ಮದ ಮೂಲವಯ್ಯ ಎಂದು ನುಡಿದು ಹಲವು ಉದಾತ್ತ ತತ್ವವನ್ನು ಬೋಧಿಸಿದ ಬಸವೇಶ್ವರರನ್ನು ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಗೇಡ್-2 ತಹಸೀಲ್ದಾರ್ ರಮೇಶ ಪೆದ್ದೆ, ಗೋಪಾಲಕೃಷ್ಣ, ಲಿಂಗಾನಂದ ಮಹಾಜನ, ಜ್ಞಾನೋಬಾ ಕಾಂಬಳೆ, ಶೇಖರ ಮಹಾಜನ, ಉತ್ಸವ ಸಮಿತಿ ಅಧ್ಯಕ್ಷ ಸೂರ್ಯಕಾಂತ ಶಿವಣಕರ್, ಚಂದ್ರಕಾಂತ ಸಂಗಮೆ, ಶಿವಾನಂದ ವಡ್ಡೆ, ಅವಿನಾಶ ಶಿವಣಕರ್, ಮಡಿವಾಳಪ್ಪ ಮಹಾಜನ, ನಾಗೇಶ ಪತ್ರೆ, ಸಾಗರ ಮಿರ್ಚೆ, ದತ್ತು ಮಹಾಜನ, ರಾಜಕುಮಾರ ಎನಗುಂದೆ, ಜಿತೇಂದ್ರ ಮಹಾಜನ, ವಿಜಯಕುಮಾರ ಕೌಡಗೆ, ಅಮರ ಶಿವಣಕರ, ಶಿವಶರಣಪ್ಪ ಚಿಕ್ಕಮುರ್ಗೆ, ಸೂರ್ಯಕಾಂತ ಸೋಲಾಪುರೆ, ಬಸವರಾಜ ಭವರಾ, ಶಿವಕುಮಾರ ಜುಲ್ಫೆ, ಶಾಂತಕುಮಾರ ಅಸ್ಟೂರೆ, ರಾಮೇಶ್ವರ ಶಿವಣಕರ್, ಮನೋಜಕುಮಾರ, ಆನಂದ ಸುಲಾಖೆ, ಅವಿನಾಶ ಮಂಗಳೂರೆ, ಸಂತೋಷ ಟೊಣ್ಣೆ, ನಾಗೇಶ ಟೊಣ್ಣೆ, ನಿತಿನ ಶಿವಣಕರ, ಹಣಮಂತ ಸಜ್ಜನ ಇತರರಿದ್ದರು.